ಬಳ್ಳಾರಿ, ಜೂ.05: ಬಳ್ಳಾರಿ ನಗರದ ರೂಟ್ಸ್ ಪಬ್ಲಿಕ್ ಶಾಲೆ ಹಾಗೂ ಸಂಜೀವಿನಿ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ
ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ರೂಟ್ಸ್ ಪಬ್ಲಿಕ್ ಶಾಲೆಯ ವಿವಿಧ ತರಗತಿಯ ಮೂನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಘೋಷಣಾ ಫಲಕಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಹಸಿರೇ ಉಸಿರು-ಉಸಿರೇ ಜೀವನ, ಸೇವ್ ಟ್ರೀ ಸೇವ್ ಲೈಫ್, ಒನ್ ಲೈಫ್ ಒನ್ ಅರ್ಥ್ ಮೊದಲಾದ ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಮರ, ಗಿಡಗಳನ್ನು ಬೆಳೆಸುವ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ರಾಘವೇಂದ್ರ ಕಾಲೋನಿ ಎರಡನೇ ಹಂತದ ರಸ್ತೆಗಳ ಮೂಲಕ ರಾಜಕುಮಾರ್ ರಸ್ತೆ ಮಾರ್ಗವಾಗಿ ಜಾಗೃತಿ ಅಭಿಯಾನ ಮೆರವಣಿಗೆ ಸಾಗಿತು.
ಸಂಜೀವಿನಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ.ಪ್ರಭಂಜನಕುಮಾರ್, ರೂಟ್ಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಎಂ.ನಿರುಪಮ, ಉಪ ಪ್ರಾಂಶುಪಾಲೆ ಸುಮಾ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.