ಸಿರುಗುಪ್ಪ: ತಾಲೂಕಿನ ಸಿಂಧನೂರು ಮುಖ್ಯರಸ್ತೆ ಅಂಕಲಿಮಠ ಹತ್ತಿರ ಜೋಪಡಿ ಅಂಗಡಿಯಲ್ಲಿ ಶೋಧ ನಡೆಸಿ 1.350 ಕೆಜೆ ಗಾಂಜಾ ಮಿಶ್ರಿತ ಚಾಕ್ಲೇಟ್ ಗಳನ್ನು ಅಬಕಾಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಹಾರ ಮೂಲದ ಕಪಾಲ್ ಪಾಸ್ವನ್ ಬಂಧಿತ ವ್ಯಕ್ತಿ ಈತನನ್ನು ವಿಚಾರಣೆ ಮಾಡಿದ ಮೇಲೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಕ್ರಮವಾಗಿ ಮಾರಾಟ ಮಾಡಲು ಬಂದಿದ 2.6 ಸಾವಿರ ಮೌಲ್ಯದ 1.350 ಕೆಜಿ ಗಾಂಜಾ ಮಿಶ್ರಿತ ಚಾಕ್ಲೇಟ್ ಗಳನ್ನು ಜಪ್ತಿ ಮಾಡಲಾಗಿದೆ.
ದಾಳಿಯಲ್ಲಿ ಬಳ್ಳಾರಿ ಉಪವಿಭಾಗ ಅಬಕಾರಿ ನಿರೀಕ್ಷಕ ಆಶಾರಾಣಿ, ಸಿರುಗುಪ್ಪ ಅಬಕಾರಿ ನೀರಿಕ್ಷಕ ಶ್ರೀಧರ್ ನಿರೋಣಿ,ಉಪ ನೀರಿಕ್ಷಕ ಬಿ ವೀರಪ್ಪ, ಸಿಬ್ಬಂದಿಗಳಾದ ಉಮೇಶ್, ದೇವರಾಜ, ರಾಘವೇಂದ್ರ,ಲಕ್ಷ್ಮಣ,ಮಹಾಂತೇಶ್,ಹರೀ ಶ್ ಇದ್ದರು.