ಕೊಟ್ಟೂರು; ಇತ್ತೀಚಿನ ದಿನಮಾನಗಳಲ್ಲಿ ದೇವಸ್ಥಾನಗಳ ಸಂಖ್ಯೆ ಹೆಚ್ಚು ಆದಂತೆಲ್ಲ, ಭಕ್ತರ ಸಂಖ್ಯೆಯು ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತಿರುತ್ತದೆ.ಭಕ್ತರ ಸಂಖ್ಯೆ ಹೆಚ್ಚು ಆದಂತೆಲ್ಲ , ದೇವಸ್ಥಾನಕ್ಕೆ ದಾನ ಮಾಡುವರ ಸಂಖ್ಯೆಯು ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ದಾನವನ್ನು ವಿವಿಧ ರೀತಿಯಲ್ಲಿ ನೀಡುತ್ತಾರೆ. ಅದು ಎಂದರೆ ದವಸ,ಧಾನ್ಯ, ದನಕರು, ವಸ್ತುಗಳನ್ನು ನೀಡುವ ಮೂಲಕ ದಾನ ಮಾಡುತ್ತಾರೆ. ದನಕರುಗಳಿಗೆ ರಕ್ಷಣೆ, ದನಕರುಗಳಿಂದ ಜನರಿಗೆ ರಕ್ಷಣೆ ಮಾಡುವಲ್ಲಿ ಕೆಲವು ಮಠಗಳು ವಿಫಲವಾಗಿವೆ ಎಂದರೆ ತಪ್ಪಾಗಲಾರದು. ಈ ವಿಫಲತೆಯಿಂದ ಕೆಲವು ಅನಾಹುತಗಳು ಕೂಡ ನೆಡೆಯುತವೆ.ದನಗಳು ಮನಷ್ಯರ, ಮಕ್ಕಳ, ಸ್ತ್ರೀಯರ, ಇತರೆ ಮೇಲೆ ದಾಳಿ ಮಾಡುವುದರಿಂದ ಪ್ರಾಣ ಹೋಗುವ ಪ್ರಸಂಗವು ಕೂಡ ಇರುತ್ತದೆ. ಈ ಅನಾಹುತವನ್ನು ತಪ್ಪಿಸಲು ಬಹಳ ಜವಾಬ್ದಾರಿಯಿಂದ, ರಕ್ಷಣೆಯಿಂದ ನೋಡಿಕೊಳ್ಳುವ ಎಲ್ಲಾ ಮಠಮಾನ್ಯಗಳಿಗೆ, ಟ್ರಸ್ಟ್ ಗಳಿಗೆ, ದೇವಸ್ಥಾನದ ಸಿಬ್ಬಂದಿ ವಗ೯ದವರಿಗೆ ಒಂದು ‘ಸಲಾಂ’ ಹೇಳಿ ಬಿಡೋಣ!
ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ದೇವರ ಗೂಳಿಯು ದಾಳಿಮಾಡಿದ ನಂತರ ದಿನಾಂಕ 15/03/2024 ರ0ದು ರಾತ್ರಿ 10.10 ಗಂಟೆಗೆ ಪಿರ್ಯದೆದಾರರಾದ ಶ್ರೀ ಕೆ ಓ ಹರೀಶ್ ತಂದೆ ಓಂಕಾರಪ್ಪ 38 ವಷ೯ ನೇಕಾರ ಜನಾಂಗ ಟೈಲರ್ ಕೆಲಸ ತೋರೆಕೊಲಮ್ಮನಹಳ್ಳಿ ಗ್ರಾಮ ಚಳಿಕೇರೆ ತಾಲುಕು ಚಿತ್ರದುಗ೯ ಜಿಲ್ಲೆಯವರು ಕೊಟ್ಟೂರು ಪೋಲಿಸ್ ಠಾಣೆಗೆ ಹಾಜರಾಗಿ ನನ್ನ ತಂದೆ
ಚಿತ್ರದುಗ೯ ಜಿಲ್ಲೆ ಚಳಿಕೇರೆ ತಾಲುಕು ತೋರೆಕೋಲಮ್ಮನಹಳ್ಳಿ ಗ್ರಾಮದ ಕೆ ಹೆಚ್ ಓಂಕಾರಪ್ಪ ತಂದೆ ಲೇಟ್ ಹನುಮಂತಪ್ಪ 67 ವಷ೯ ನೇಕಾರ ಜನಂಗ ವ್ಯವಸಾಯ ಇವರು ದಿನಾಂಕ 15/3/2024 ರಂದು ಸಂಜೆ 5.30 ಕ್ಕೆ ಕೊಟ್ಟೂರು ಪಟ್ಟಣದ ಬಸವೇಶ್ವರ ನಗರ ಬಸ್ ನಿಲ್ದಾಣದ ಬಳಿ ದೇವರ ಗೂಳಿಯೊಂದು ನಮ್ಮ ತಂದೆ ಓಂಕಾರಪ್ಪ ಇವರಿಗೆ ಹಿರಿದು ಕೆಳಗೆ ಬೀಳಿಸಿ ತಿಳಿದ ಆಗಿರುವುದರಿಂದ ಎಡ ಕಣ್ಣಿಗೆ ರಕ್ತದ ಗಾಯ, ಮೂಗು, ಎದೆ ಭಾಗ, ರಕ್ತಗಾಯ ತೊಡೆ ಮತ್ತು ಬೆನ್ನಿಗೆ ತೆರಚಿದ ರಕ್ತಗಾಯಗಳು ಆಗಿ, ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮೊದಲಿಗೆ ಕೊಟ್ಟೂರು ಸರಕಾರಿ ಆಸ್ಪತ್ರೆ ನಂತರ ಕೂಡ್ಲಿಗಿ ಸರಕಾರಿ ಆಸ್ಪತ್ರೆಗೆ ನಂತರ ವೈದ್ಯರ ಸಲಹೆಯಂತೆ ದಾವಣಗೆರೆ ಅಂಬೂಲೇನ್ಸನಲ್ಲಿ ಕರೆದುಕೊ೦ಡು ಹೋಗುತ್ತಿದ್ದಾಗ ಕೊಟ್ಟೂರು ಬಳಿ ರಾತ್ರಿ 7.30 ಗಂಟೆಗೆ ಮೃತಪಟ್ಟಿದ್ದು, ಮೃತನ ದೇಹವನ್ನು ಕೊಟ್ಟೂರು ಪಟ್ಟಣದ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಇರಿಸಿದ್ದು, ಮೃತನ ದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನುಡಿದ ದೂರು ಮೇರೆಗೆ ಕೊಟ್ಟೂರಿನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.