ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೨೨: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆ ರಾಯಲ್ ಕಾಲೋನಿಯ ಕೃಷ್ಣ ಮಂದಿರದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ರಾಯಲ್ ಕಾಲೋನಿಯ ವಿಠ್ಠಲ ಕೃಷ್ಣ ಮಂದಿರದಲ್ಲಿ ಬೆಳಿಗ್ಗೆಯಿಂದಲೇ ಮಹಿಳೆಯರು ರಾಮಮಂದಿರದ ರಂಗೋಲಿ ಸೇರಿದಂತೆ ಹಲವು ಬಗೆ ಬಗೆಯ ರಂಗೋಲಿಗಳನ್ನು ಹಾಕುವ ಮೂಲಕ ಇಡೀ ಏರಿಯಾವನ್ನು
ಕಲರ್ ಪುಲ್ ಮಾಡುವ ಮೂಲಕ ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂಭ್ರಮಾಚರಣೆ ಇಮ್ಮಡಿಗೊಳಿಸಿದರು.
ಅತ್ತ ರಾಮನ ಪ್ರಾಣ ಪ್ರತಿಷ್ಠಾಪನೆ ಘಳಿಗೆ ವೇಳೆ ಕೃಷ್ಣನಿಗೆ ಮಹಾ ಮಂಗಳಾರತಿ ಮಾಡಿದ್ದಷ್ಟೇ ಅಲ್ಲದೇ ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು. ಇನ್ನೂ ದೇವಸ್ಥಾನದ ಮುಂದೆ ಬೃಹತ್ ಎಲ್ಇಡಿ ಪರದೇ ಹಾಕುವ ಮೂಲಕ ಪ್ರಾಣ ಪ್ರತಿಷ್ಠಾಪನೆ ಎಲ್ಲಾ ಕಾರ್ಯಕ್ರಮವನ್ನು ಭಕ್ತರು ಕಣ್ತುಂಬಿಕೊಳ್ಳುವAತೆ ಮಾಡಿದರು.
ಅಲ್ಲಿ ರಾಮನ ಪೂಜೆ ಮಾಡಿದರೇ, ಇಲ್ಲಿ ಕೃಷ್ಣನ ಮಂದಿರದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಮಾಡಲಾಯಿತು. ನೈರ್ಮಲ್ಯ ವಿಸರ್ಜನೆ, ಸುಪ್ರಭಾತ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಕೃಷ್ಣಾರತಿ, ಮಹಾಭಿಷೇಕ ಮಾಡಿ ರಾಮ ನಾಮ ಜಪ ಮಾಡಲಾಯಿತು. ಇದರ ಜೊತೆಗೆ ಮಹಿಳೆಯರು ರಾಮನ ಪ್ರಾಣ ಪ್ರತಿಷ್ಠಾನೆ ವೇಳೆ ಭಜನೆ ಕೀರ್ತನೆ ಹಾಡುವ ಮೂಲಕ ಶ್ರೀರಾಮ ಜಯರಾಮ ಘೋಷಣೆ ಕೂಗುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ಬಳಿಕ ದೇವಸ್ಥಾನದಲ್ಲಿ ಊಟೋಪಚಾರ, ಪ್ರಸಾದ ವಿತರಣೆ ಮಾಡಲಾಯಿತು.
ಮಕ್ಕಳು ಮಹಿಳೆಯರು ರಾಮನ ಹಾಡಿನ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.. ಈ ವೇಳೆ ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ ರಾವ್, ಜಿ.ವಿ.ಪಟವಾರಿ, ರಘುರಾಮ, ಉದಯ, ಪ್ರಾಣೆಶ್ ರಾಘವೇಂದ್ರ, ವೆಂಕಟೇಶ, ಶೋಭಾರಾಣಿ, ಸುನಿತಾ, ಕವಿತಾ, ಮಮತ, ಹರಿಪ್ರಿಯಾ,ವೇದಾವತಿ, ವೀಣಾ, ಲಕ್ಷ್ಮೀ, ರಮಾ, ವಿಜಯಲಕ್ಷ್ಮೀ ಪೂರ್ಣಿಮಾ, ಸೇರಿದಂತೆ ಇತರರು ಇದ್ದರು.