ಪಾಟ್ನ: ಬಿಹಾರದಲ್ಲಿ ನಡೆಯಲಿರುವ ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸಿಎಂ ನಿತೀಶ್ ಕುಮಾರ್ ಗೈರಾಗಲಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಈಗ ಬಂಗಾಳದಲ್ಲಿದೆ. ಕಿಶನ್ ಗಂಜ್ ಮೂಲಕ ಜ.29 ರಂದು ಬಿಹಾರ ಪ್ರವೇಶಿಸಲಿದೆ. ಜ.31 ರಂದು ಕತಿಹಾರ್ ನಲ್ಲಿ ರ್ಯಾಲಿ ನಡೆಯಲಿದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಈ ನಡುವೆ ಪಂಜಾಬ್ ನಲ್ಲಿಯೂ INDIAಮೈತ್ರಿಕೂಟಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಈ ನಡುವೆ ಬಿಹಾರದಲ್ಲಿ ಮಾಜಿ ಸಿಎಂ ಕರ್ಪೂರಿ ಠಾಕೂರ್ ಗೆ ಭಾರತ ರತ್ನ ನೀಡಿದ್ದಕ್ಕಾಗಿ ಬಹಿರಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದ ನಿತೀಶ್ ಕುಮಾರ್ ಬಹಿರಂಗವಗಿಯೆ ಕಾಂಗ್ರೆಸ್ ನ್ನು ಈ ವಿಷಯವಾಗಿ ಟೀಕಿಸಿ ಹಲವು ಬಾರಿ ಮನವಿ ಮಾಡಿದ್ದರೂ ಕಾಂಗ್ರೆಸ್ ಸರ್ಕಾರ ಠಾಕೂರ್ ಗೆ ಭಾರತ ರತ್ನ ನೀಡಲಿಲ್ಲ ಎಂದು ಹೇಳಿದ್ದರು.