ಹೊಸಪೇಟೆ,ವಿಜಯನಗರ ಫೆ.02 : ಹಂಪಿಯ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಫೆ.2ರಂದು, ಮೃತ ರೈತ ಮುಖಂಡ ಜೆ. ಕಾರ್ತಿಕ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ನೂತನ ಕಚೇರಿಗೆ ಚಾಲನೆ ನೀಡಿದ ನಂತರ ಮುಖ್ಯಮಂತ್ರಿಗಳು ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ
ನೇರವಾಗಿ ರೈತ ಮುಖಂಡ ಕಾರ್ತಿಕ ಅವರ ನಿವಾಸಕ್ಕೆ ಭೇಟಿ ಮಾಡಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಮೃತ ರೈತನ ಕುಟುಂಬ ವರ್ಗದವರಿಗೆ
5 ಲಕ್ಷ ರೂ. ಹಣಕಾಸಿನ ನೆರವು ಘೋಷಣೆ ಮಾಡಿದ್ದೇವೆ. ಅವರ ಕುಟುಂಬ ವರ್ಗದವರ ಜೊತೆಗೆ ನಾವಿರುತ್ತೇವೆ ಎಂದು ಹೇಳಿದರು.
ಮಗಳಿಗೆ ಶಿಕ್ಷಣ ಕೊಡುತ್ತೇವೆ: ಮಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಅನ್ನುವುದು ನಮ್ಮ ಬಹುದೊಡ್ಡ ಆಸೆಯಿತ್ತು. ಅದರಂತೆ ಕಾರ್ತಿಕ ಅವರ ಮಗಳ ಶಿಕ್ಷಣಕ್ಕೆ ಆರ್ಥಿಕ ಅನುಕೂಲ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ನಮಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಜೆ. ಕಾರ್ತಿಕ್ ಅವರ ತಾಯಿ ಜೆ. ಬಸಮ್ಮ ಅವರು ತಿಳಿಸಿದರು. ಈ ವೇಳೆ ಜೆ.ಕಾರ್ತಿಕ್ ಅವರ ಪತ್ನಿ ಜೆ.ಮಂಗಳಗೌರಿ ಹಾಗೂ ಇತರರು ಇದ್ದರು.