ಬಳ್ಳಾರಿ: ಕರ್ನಾಟಕದಲ್ಲಿ ಬಳ್ಳಾರಿ ಎಂದರೆ ಅಕ್ರಮಗಳಿಗೆ ಹೆಸರುವಾಸಿ. ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ ೦೪ರ ಹೊನ್ನಳ್ಳಿ ರಸ್ತೆ, ಬಾಲಾಜಿ ಕಾಲೋನಿ ಸರ್ವೆ ನಂ:೭೨೦/ಎ ರ ವಿಸ್ತೀರ್ಣ:೪.೫೦ ಎಕರೆ ಮತ್ತು ೭೨೦/ಬಿ ರ ವಿಸ್ತೀರ್ಣ:೫.೧೪ ಎಕರೆ ಜಮೀನುಗಳಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸಕ್ಕೆ ಯಾವುದೇ ಅನುಮೋದನೆ ಪಡೆಯದೆ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಯಿಂದ ಸಹ ಕಟ್ಟಡಗಳಿಗೆ ಪರವಾನಿಗೆ ಪಡೆಯದೇ ಅನಧಿಕೃತವಾಗಿ ವಸತಿ ವಿನ್ಯಾಸ ರಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ನ್ಯಾಯವಾದಿಗಳಾದ ಡಿ.ಮಲ್ಲಿಕಾರ್ಜುನ ಮತ್ತಿತರರು ಮಹಾನಗರಪಾಲಿಕೆ ಆಯುಕ್ತರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎನ್.ಸಂದೀಪ್, ಪಿ.ರಾಘವೇಂದ್ರ ಮತ್ತು ಕೆ.ಸುರೇಶ್ ಎನ್ನುವವರು ನಿವೇಶನಗಳನ್ನು ಮನಬಂದAತೆ ಸಾರ್ವಜನಿಕರಿಗೆ ಮಾರಾಟ ಮಾಡಿದ್ದಾರೆ. ಸದರಿ ಜಮೀನುಗಳಲ್ಲಿ ೧೬೮ ವಸತಿ ನಿವೇಶನಗಳನ್ನು ಗುರುತಿಸಿ ಅದರಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಅಲ್ಲಿನ ನಿವಾಸಿಗಳಿಗೆ ಸೌಕರ್ಯ ವಂಚಿತರನ್ನಾಗಿಸಿದ್ದಾರೆ. ಕಾನೂನು ಬಾಹಿರವಾಗಿರುವ ಬಡಾವಣೆ ರಚಿಸಿದ್ದಾರೆ ಎಂದು ಆರೋಪಿಸಿ ಈ ಕುರಿತು ೧೫ ದಿನದೊಳಗಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಈಗಾಗಲೇ ಮನವಿ ಮಾಡಲಾಗಿತ್ತು. ಆಯುಕ್ತರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಅವರೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇರುವುದರಿಂದ ಆಯುಕ್ತ ಕಲೀಲ್ ಸಾಬ್ ವಿರುದ್ಧವೇ ೨೧೭, ೨೧೮, ೧೬೬, ೧೦೯, ೧೨೦ ಬಿ, ೪೨೦, ೪೦೬, ೪೬೮, ೫೦೫ / ೩೪ ಐಪಿಸಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕಾಗುತ್ತದೆ ಎಂದು ವಕೀಲರಾದ ಡಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಆಯುಕ್ತರು ಸರ್ಕಾರದ ನೌಕರರಾಗಿದ್ದೂ ಸರ್ಕಾರಕ್ಕೆ ಮತ್ತು ಜನರಿಗೆ ಮೋಸ ಮಾಡಿ ಅಕ್ರಮ ಬಡಾವಣೆ ನಿರ್ಮಿಸಿದ, ಸರ್ಕಾರಕ್ಕೆ ತೆರಿಗೆಗಳನ್ನು ಕಟ್ಟದೆ, ಯಾವುದೇ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳದೆ ಇರುವ ವ್ಯಕ್ತಿಗಳ ವಿರುದ್ಧ ಸ್ವತಃ ಆಯುಕ್ತರೇ ಅಂತಿಮ ನೋಟೀಸ್ ನೀಡಿ ತಿಂಗಳುಗಳೇ ಕಳೆದರೂ ಇಲ್ಲಿಯ ತನಕ ಯಾವುದೇ ದಾಖಲಾತಿ ಸಲ್ಲಿಸದೇ ಹೋದರೆ, ನಿಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿಲ್ಲ. ಇದರಿಂದ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ ಮೂವರೂ ಅಕ್ರಮ ಲೇ ಔಟ್ ಮಾಲೀಕರ ವಿರುದ್ಧ ಇವರುಗಳನ್ನು ಒಳಗೊಂಡAತೆ ಮಹಾನಗರ ಪಾಲಿಕೆಯ ಆಯುಕ್ತರಾದ ಕಲೀಲ್ ಸಾಬ್, ಯೋಜನಾಧಿಕಾರಿಗಳಾದ ಶಂಕರ್ ರೆಡ್ಡಿ ಮತ್ತು ಕೇಸ್ ವರ್ಕರ್ ಗಿರೀಶ್ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ನ್ಯಾಯವಾದಿ ಡಿ.ಮಲ್ಲಿಕಾರ್ಜುನ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಕಾನೂನು ರೀತ್ಯ ಕ್ರಮ ಕೈಗೊಳ್ಳದೇ ಹೋದರೆ ಬೆಂಗಳೂರಿನ ಸಂಬAಧಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು ಮಾಡುತ್ತಿರುವ ಕಾರ್ಯ ವೈಖರಿ ಹಾಗೂ ಸರ್ಕಾರಕ್ಕೆ ಮೋಸ ಮಾಡಿ ತೆರೆಗೆಗಳನ್ನು ಕಟ್ಟದೇ ವಂಚನೆ ಮಾಡುತ್ತಿರುವ ಆರೋಪಿಗಳ ರಕ್ಷಣೆಗೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಮೂವರು ಅಕ್ರಮ ಲೇಔಟ್ ಮಾಲೀಕರು ಒಳಗೊಂಡAತೆ ತಮ್ಮನ್ನೂ ಕೂಡ ಕ್ರಿಮಿನಲ್ ಕೇಸ್ ದಾಖಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದೂ ವಕೀಲರು ತಿಳಿಸಿದ್ದಾರೆ. ಇದು ಬಳ್ಳಾರಿಯ ಒಂದು ಉದಾಹರಣೆ ಮಾತ್ರ. ಇಂತಹ ಹತ್ತಾರು ಪ್ರಕರಣಗಳು ಬಳ್ಳಾರಿಯಲ್ಲಿ ನಡೆಯುತ್ತಿದ್ದರೂ ಆಯುಕ್ತರು ಮೌನ ವಹಿಸಿರುವುದು ಏಕೆ? ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.