ಬಳ್ಳಾರಿ, ಆಗಸ್ಟ್. 3: ರಾಜ್ಯ ಸರ್ಕಾರದಲ್ಲಿನ ಮಂತ್ರಿಗಳು ಶಾಸಕರು ವರ್ಗಾವಣೆ ನೆಪದಲ್ಲಿ ಹಣದ ದೊಡ್ಡ ದಂದೆಯನ್ನೇ ಮಾಡುತ್ತಿದ್ದಾರೆ ಇದಕ್ಕೆ ಉದಾಹರಣೆ ಎಂದರೆ ಯಾದಗಿರಿ ಶಾಸಕ ಮತ್ತು ಅವರ ಮಗ ಪಿಎಸ್ಐ ವರ್ಗಾವಣೆ ನೆಪದಲ್ಲಿ ಲಕ್ಷಾಂತರ ರೂಪಾಯಿಗಳ ಹಣದ ಬೇಡಿಕೆ ಇಟ್ಟು ಪಿಎಸ್ಐ ಸಾವಿಗೆ ಕಾರಣರಾಗಿರುತ್ತಾರೆ. ಈ ಸಾವಿಗೆ ಶಾಸಕ ಮತ್ತು ಅವರ ಮಗ ನೇರ ಹೊಣೆಗಾರರಾಗಿರುತ್ತಾರೆ. ಅವರು ಹಾಕಿರುವ ಒತ್ತಡದಿಂದ ಮಾನಸಿಕವಾಗಿ ಕುಗ್ಗಿ ಸಾವಿಗೆ ಶರಣಾಗಿರುತ್ತಾರೆ ಕಾರಣ ಯಾದಗಿರಿ ಶಾಸಕ ಚನ್ನರಡ್ಡಿ ಮತ್ತು ಅವರ ಮಗನನ್ನು ಕೂಡಲೇ ಬಂಧಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ಕೆ ಶಂಕರ್ ರಾಜ್ಯಪಾಲರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.
ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟು ಯಾದಗಿರಿ ಶಾಸಕರಾದ ಚೆನ್ನರೆಡ್ಡಿ ಪಾಟೀಲ್ ತುನ್ನುರು ಮತ್ತು ಇವರ ಮಗನಾದ ಪಂಪನಗೌಡ ಸನ್ನಿಗೌಡ ತುನ್ನುರು ಇವರು ಯಾದಗಿರಿ ನಗರದ ಪಿ.ಎಸ್.ಐ. ಪರುಶುರಾಮ ಇವರನ್ನು ವರ್ಗಾವಣೆ ಮಾಡುವ ವಿಷಯಕ್ಕೆ ಹಣದ ಬೇಡಿಕೆಯನ್ನುಟ್ಟು ಮಾತಿನಂತೆ ಹಣ ಕೊಡಬೇಕು ಇಲ್ಲವಾದರೆ ನಿನ್ನನ್ನು ಬೇರೆಕಡೆ ವರ್ಗಾವಣೆ ಮಾಡಿಸುತ್ತೇನೆ ಎಂದು ಪಿ.ಎಸ್.ಐ. ಪರುಶುರಾಮ ಇವರಿಗೆ ಶಾಸಕನ ಮಗನು ಎಚ್ಚರಿಕೆಯ ಮಾತುಗಳನ್ನು ಆಡಿರುವುದು ನಿಜ ಇರುತ್ತದೆ .
ಶಾಸಕನ ಮಗನು ಹೇಳಿದ ಪ್ರಕಾರ ಮುಕ್ಕಾಲು ಹಣವನ್ನು ಶಾಸಕನ ಮಗನ ಕೈಗೆ ಪಿ.ಎಸ್.ಐ.ಪರುಶುರಾಮ ಸಾಲ ಮಾಡಿ ಮುಟ್ಟಿಸಿರುತ್ತಾನೆ. ಇನ್ನೂಳಿದ ಹಣವನ್ನು ಕೊಡಲೆ ಬೇಕೆಂದು ಪರಶುರಾಮರವರಿಗೆ ಒತ್ತಡ ಮತ್ತು ಬೆದರಿಕೆ ಹಾಕಿದ್ದಾನೆ.ಶಾಸಕನ ಮಗನು ಬೆದರಿಕೆ ಹಾಕಿದ ವಿಷಯವನ್ನು ಚಿಂತಿಸಿ ಪಿ.ಎಸ್.ಐ. ಪರುಶುರಾಮ ಇವರು ಹಣವನ್ನು ತಯಾರು ಮಾಡಿಕೊಂಡು ಮುಟ್ಟಿಸಲಿಕ್ಕೆ ಸಮಯ ನೀಡದೆ ಇರುವ ಸಂದರ್ಭದಲ್ಲಿ ಶಾಸಕನ ಮಗನ ಒತ್ತಡಕ್ಕೆ ಪಿ.ಎಸ್.ಐ. ರವರು ಹೆದರಿ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ಪಿ.ಎಸ್.ಐ. ಪರುಶುರಾಮ ಕುಟುಂಬಕ್ಕೆ ಶಾಸಕರ ಮತ್ತು ಆತನ ಬೆಂಬಲಿಗರ ಒತ್ತಡ, ಜೀವಬೆದರಿಕೆ ಮತ್ತು ಕುಟುಂಬದ ಮೇಲೆ ದಮಕಿ ಕೊಟ್ಟು ಅವರ ಸಾವಿಗೆ ಕಾರಣರಾಗಿರುತ್ತಾರೆ ,
ಕಾರಣ ಇವರ ವಿರುದ್ಧ ಮೊಕದ್ದಮೆ ದಾಖಲು ಮಾಡಿಕೊಂಡು ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಮತ್ತು ತನಿಖಾಧಿಕಾರಿಗಳಿಗೆ ಸೂಕ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಮತ್ತು ನೊಂದ ಕುಟುಂಬಕ್ಕೆ ಆರ್ಥಿಕ ಸಹಾಯಧನ 1 ಕೋಟಿ ನೀಡಬೇಕು, ಜೀವ ತೆಗೆದ ಶಾಸಕ ಚನ್ನರೆಡ್ಡಿ ಮತ್ತು ಆತನ ಮಗನನ್ನು ಕೂಡಲೇ ಬಂದಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ ಒತ್ತಾಯಿಸಿದ್ದಾರೆ.