ಬಳ್ಳಾರಿ: ಏ 12; ಬಳ್ಳಾರಿ ಮತ್ತು ವಿಜಯನಗರ ಕ್ಷೇತ್ರದಲ್ಲಿ ತುಕಾರಾಂ ಅವರು ಬಹುಮತದಿಂದ ಗೆಲ್ಲುತ್ತಾರೆ. ಗೆದ್ದ ನಂತರ ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಬಗೆ ಹರಿಸಲಿದ್ದಾರೆ ಎಂದು ಸಚಿವ ಬಿ. ನಾಗೇಂದ್ರ ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ಅವರು ನಾಮ ಪತ್ರ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತದಿಂದ ಗೆಲ್ಲಲಿದ್ದಾರೆ. ಬಳ್ಳಾರಿ ಜನರು ಈ ಬಾರಿ ತುಕಾರಾಂ ಅವರಿಗೆ ಆಶಿರ್ವಾದ ಮಾಡಲಿದ್ದಾರೆ. ಬಿಜೆಪಿಯವರು ಕೆವಲ ಸುಳ್ಳುಗಳನ್ನ ಹೇಳಿಕೊಂಡು ದೇಶವನ್ನು ಲೂಟಿ ಮಾಡುತ್ತಿದ್ದು, ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಅವರು ಬಂಡವಾಳ ಗೋತ್ತಾಗಿದೆ ಹಾಗಾಗಿ ಜನರು ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ ಎಂದರು.