ಬಳ್ಳಾರಿ, ಜೂ.20: ನಾಳೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೇಮಕಾತಿಗೆ ಚುನಾವಣೆ ನಡೆಯಲಿದೆ.
ಆದರೆ ಆಕಾಂಕ್ಷಿಗಳ ಒಬ್ಬರಾಗಿರುವ 18ನೇ ವಾರ್ಡಿನ ಮುಲ್ಲಂಗಿ ನಂದೀಶ್ ಅವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈಗಾಗಲೇ ಹಲವು ಅಕ್ರಮ ಭೂ ಹಗರಣದಲ್ಲಿ ತೊಡಗಿರುವ ನಂದೀಶ್ ಅವರಿಗೆ ಮೇಯರ್ ಹುದ್ದೆ ನೀಡಿದರೆ ಬಳ್ಳಾರಿಯ ಎಲ್ಲ ಸರ್ಕಾರಿ ಜಮೀನಿಗೆ ಬೇಲಿ ಸುತ್ತುತ್ತಾರೆನ್ನುವುದು ಕಾರ್ಯಕರ್ತರ ಅಭಿಪ್ರಾಯ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಹುದ್ದೆಗೆ ಹಲವು ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಇವರ ಪೈಕಿ ಬಳ್ಳಾರಿಯ 18ನೇ ವಾರ್ಡಿನ ಮುಲ್ಲಂಗಿ ನಂದೀಶ್ ಕೂಡ ಒಬ್ಬರು. ಆದರೆ ಈಗಾಗಲೇ ಹಲವು ಭೂಕಬಳಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮುಲ್ಲಂಗಿ ನಂದೀಶ್ ಅವರಿಗೆ ಮೇಯರ್ ಹುದ್ದೆ ನೀಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಕಾಂಗ್ರೆಸ್ಸಿನ ಪ್ರಾಮಾಣಿಕ ಕಾರ್ಯಕರ್ತರ ಪ್ರಶ್ನೆಯಾಗಿದೆ.
ಈ ಲೇಖನದ ಜೊತೆಗೆ ಷೇರ್ ಮಾಡಲಾಗಿರುವ ದಾಖಲೆಗಳ ಬಳ್ಳಾರಿ ನಗರ TS ನಂಬರ್ 97 ರಲ್ಲಿಯ ಉದ್ಯಾನವನವಾಗಿ ಗುರುತಿಸಿದ್ದ ಸ್ಥಳದ್ದು. ಈ ಸ್ಥಳ ಮಹಾನಗರ ಪಾಲಿಕೆಗೆ ಸೇರಿದ್ದು. ಇದನ್ನು ಈಗ ಪಾಲಿಕೆಯ ಸದಸ್ಯರಾದ ಮುಲ್ಲಂಗಿ ನಂದೀಶ್ ಅವರು ನಕಲಿ ದಾಖಲೆ, ತಿದ್ದುಪಡಿ ಮಾಡಿ 16000 sq F ಇದ್ದದ್ದನ್ನು ಉದ್ಯಾನವನ ಮತ್ತು CA ಸೈಟ್ ಸ್ಥಳದಲ್ಲಿ 5000 sq F ತಮ್ಮ ಹೆಂಡತಿ ಹೆಸರಿಗೆ ಮಾಡಿಕೊಂಡು, ಈಗ ಅದನ್ನು ಮಾರಾಟ ಮಾಡಲು ಹೊಂಚು ಹಾಕಿದ್ದಾರೆ. ಇದರ ಬಗ್ಗೆ ಈಗಾಗಲೇ ಲೋಕಾಯುಕ್ತ ಕೋರ್ಟ್ ನಲ್ಲಿ ಕೇಸ್ ಧಾಖಲಾಗಿ ಲೋಕಾಯುಕ್ತ ಕೋರ್ಟ್ ಸಹ ಉದ್ಯಾನವನ ಮಾಡಲು ಪಾಲಿಕೆ, ನಾಗರಾಭಿವೃದ್ಧಿ ಪ್ರಾದಿ ಕಾರಕ್ಕೂ ನಿರ್ದೇಶನ ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ನಂದೀಶ್ ಅವರು ಅಧಿಕಾರಿಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಉದ್ಯಾನವನ ಮಾಡಲು ಬಿಡುತ್ತಿಲ್ಲ. ಇವರ ತಂದೆ ಈ ಹಿಂದೆ ಪಾಲಿಕೆಗೆ ಸೇರಿದ ಸುಮಾರು 2 ಎಕರೆಗೂ ಹೆಚ್ಚು ಸ್ಥಳವನ್ನು ಅಕ್ರಮಿಸಿ ಕೊಂಡಿದ್ದರು. ಅದರ ಬಗ್ಗೆ ಒಬ್ಬ ಸಾಮಾಜಿಕ ಕಾರ್ಯಕರ್ತರು ಈ ಹಿಂದೆ ಪಾಲಿಕೆ ಆಯುಕ್ತೆಯಾಗಿದ್ದ ಪ್ರೀತಿ ಗೆಹ್ಲೋಟ್ ಅವರಿಗೆ ದೂರು ಕೊಡಲಾಗಿ ಅದನ್ನು ಸಹ ಅವರು ಪಾಲಿಕೆಯ ಡಂಪ್ ಯಾರ್ಡ್ ನ್ನು ತೆರವುಗೊಳಿಸಿ ಪಾಲಿಕೆಗೆ ಹಿಂದಕ್ಕೆ ಪಡೆದಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈಗ ಈ ಅತಿಕ್ರಮಣದ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಅವರಿಗೆ ಪ್ರತಿಯೊಂದು ಮಾಹಿತಿ ಕೊಟ್ಟಿದ್ದಾರೆ. ಅವರು ಸಹ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಈಗ ಇದೇ ಪಾಲಿಕೆ ಸದಸ್ಯ ನಂದೀಶ್ ಅವರು ಪಾಲಿಕೆ ಮೇಯರ್ ಆಗಲು ಪ್ರಯತ್ನ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹವರನ್ನು ಪಾಲಿಕೆ ಮೇಯರ್ ಮಾಡಿದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಈಗಾಗಲೇ ಪಾರ್ಕ್ ಅತಿಕ್ರಮಣ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಆದುದರಿಂದ ಕಾಂಗ್ರೆಸ್ ಶಾಸಕರು, ಸಚಿವರು, ಸಂಸದರು, ಪಕ್ಷದ ರಾಜ್ಯ ಹೈಕಮಾಂಡ್ ಈ ಬಗ್ಗೆ ಗಮನಹರಿಸಬೇಕು. ಪ್ರಾಮಾಣಿಕ ಆಡಳಿತಕ್ಕೆ ಹೆಸರಾಗಿರುವ ಸಿದ್ದರಾಮಯ್ಯ ಅವರು ದಯವಿಟ್ಟು ಪಾಲಿಕೆಯ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ನಿರ್ದೇಶನ ಮಾಡಿ ಸರಕಾರದ ಆಸ್ತಿ ಉಳಿಸುವಿರೆಂದು ಕಾರ್ಯರ್ತರಾದ ನಾವು ನಂಬಿದ್ದೇವೆ.
ಮುಲ್ಲಂಗಿ ನಂದೀಶ್ ಗೆ ಮೇಯರ್ ಮಾಡಿದರೆ ನಗರದಲ್ಲಿಯ ಸರಕಾರಿ ಆಸ್ತಿ ಕಬಳಿಸಿ ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರುವುದುಖಚಿತ. ಹಾಗೆ ಆಗಬಾರದು ಎಂಬುದು ವಿನಂತಿಯಾಗಿದೆ.
ಬಳ್ಳಾರಿ ನಗರ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಮೇಯರ್ ಚುನಾವಣೆಗಾಗಿ ಆಗಮಿಸಿರುವ ವೀಕ್ಷಕರಿಗೂ ಕೂಡ ಈ ದಾಖಲಾತಿಗಳ ಸಹಿತ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.