ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ.೨೦: ರಾಜ್ಯ ಸರ್ಕಾರದ ಆದೇಶದಂತೆ ಭಾರತ ಸಂವಿಧಾನ ಪೀಠಿಕೆಯ ಆಶಯ ಮತ್ತು ಅದರ ಧ್ಯೆಯೋದ್ಧೇಶಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಹಾಗೂ ಸಂವಿಧಾನ ದಿನಾಚರಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಜನವರಿ ೨೬ ರಿಂದ ಫೆಬ್ರವರಿ ೨೩ ರ ವರೆಗೆ “ಸಂವಿಧಾನ ಜಾಗೃತಿ ಜಾಥ” ಸ್ತಬ್ಧಚಿತ್ರ ಮೆರವಣಿಗೆ ಸಂಚಾರ ಮಾಡಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಜಾಥ ಸ್ತಬ್ಧಚಿತ್ರ ಮೆರವಣಿಗೆ ಸಂಚರಿಸುವ ಮಾರ್ಗದ ವಿವರ:*
*ಬಳ್ಳಾರಿ ತಾಲ್ಲೂಕು:*
ಸಂವಿಧಾನ ದಿನಾಚರಣೆ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥ” ಸ್ತಬ್ಧಚಿತ್ರ ಮೆರವಣಿಗೆಯು ಜ.೨೬ ರಂದು ಬೆಳಿಗ್ಗೆ ೧೧ ಗಂಟೆಗೆ ವಿಮ್ಸ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಂಡು ಕೌಲ್ಬಜಾರ್ ಮೂಲಕ ಬಂಡಿಹಟ್ಟಿ, ಕುವೆಂಪುನಗರ, ತಿಲಕ್ ನಗರ, ಸುಧಾ ಕ್ರಾಸ್, ವಿದ್ಯಾನಗರ, ಇಂದಿರಾ ನಗರ, ಎಂ.ಕೆ.ನಗರದಲ್ಲಿ ಸಂಚರಿಸಿ ಸಂಜೆ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ಅಲ್ಲಿಯೇ ತಂಗಲಿದೆ.
ಜ.೨೭ ರಂದು ಬೆಳಿಗ್ಗೆ ೦೯ ಗಂಟೆಯಿAದ ಸಂಜೆ ೦೬ ಗಂಟೆಯವರೆಗೆ ಎಸ್.ಪಿ.ಸರ್ಕಲ್ ಮುಖಾಂತರ ಹವಂಭಾವಿ ಮೂಲಕ ಪಾರ್ವತಿ ನಗರ, ದುರುಗಮ್ಮ ಗುಡಿ, ತಾಳೂರು ರೋಡ್, ಕಪ್ಪಗಲ್ ರಸ್ತೆ, ಗಾಂಧೀನಗರ, ಬಸವೇಶ್ವರ ನಗರ, ಎಸ್.ಎನ್.ಪೇಟೆ, ರಾಘವೇಂದ್ರ ಕಾಲೋನಿ, ಹುಸೇನ್ ನಗರ ಸಂಚಾರಗೊAಡು ಸಂಜೆ ರಾಘವ ಕಲಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ವಾಲ್ಮೀಕಿ ಭವನದಲ್ಲಿ ತಂಗಲಿದೆ.
ಜ.೨೮ ರಂದು ಬೆಳಿಗ್ಗೆ ೦೯ ಗಂಟೆಯಿAದ ಸಂಜೆ ೦೬ ಗಂಟೆಯವರೆಗೆ ಬಳ್ಳಾರಿ ತಾಲ್ಲೂಕಿನ ಬಿಸಿಲಹಳ್ಳಿಯಿಂದ ಶ್ರೀರಾಂಪುರ ಕಾಲೋನಿ, ಎಂ.ಜಿ., ಬಿ.ಗೋನಾಳ, ರೂಪನಗುಡಿ ರಸ್ತೆ, ಮಿಲ್ಲರ್ ಪೇಟೆ, ಆಂಧ್ರಾಳು, ಬಾಪೂಜಿ ನಗರ, ಬಂಡಿಮೋಟು, ಎ.ಪಿ.ಎಂ.ಸಿ ಯಾರ್ಡ್, ಕಾಕರ್ಲತೋಟ, ಗುಗ್ಗರಹಟ್ಟಿಗೆ ತಲುಪಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಯಲಿದೆ. ವಾಲ್ಮೀಕಿ ಭವನದಲ್ಲಿ ತಂಗಲಿದೆ.
ಜ.೨೯ ರಂದು ಬೆಳಿಗ್ಗೆ ೦೯ ಗಂಟೆಯಿAದ ಸಂಜೆ ೦೬ ಗಂಟೆಯವರೆಗೆ ದೇವಿ ನಗರ, ಬಸವನಕುಂಟೆ, ನಾಗಲಕೆರೆ, ಕೋಟೆ ಪ್ರದೇಶ, ಹೆಚ್.ಆರ್.ಗವಿಯಪ್ಪ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆಯಲ್ಲಿ ಸಂಚಾರ ನಡೆಸಲಿದೆ. ಬಳಿಕ ಸಂಜೆ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಲ್ಲಿಯೇ ತಂಗಲಿದೆ.
ಜ.೩೦ ರಂದು ಬೆಳಿಗ್ಗೆ ೦೯ ರಿಂದ ಸಂಜೆ ೦೬ ರವರೆಗೆ ಬಳ್ಳಾರಿ ತಾಲ್ಲೂಕಿನ ಕೊಳಗಲ್, ಬೆಳಗಲ್ಲು, ಹಲಕುಂದಿ, ಸಂಜೀವರಾಯನ ಕೋಟೆ, ವೈ.ಬೂದಿಹಾಳ್ ಮತ್ತು ಶಂಕರಬAಡೆ ಗ್ರಾಮಗಳಲ್ಲಿ ಸಂಚರಿಸಲಿದ್ದು, ಸಂಜೆ ಶಂಕರಬAಡೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ರೂಪನಗುಡಿ ಗ್ರಾಮದಲ್ಲಿ ಸ್ಥಬ್ದ ಚಿತ್ರ ಮೆರವಣಿಗೆಯು ತಂಗಲಿದೆ.
ಜ.೩೧ ರಂದು ಬೆಳಿಗ್ಗೆ ೦೯ ರಿಂದ ಸಂಜೆ ೦೬ ರವರೆಗೆ ರೂಪನಗುಡಿ, ಚೆಳ್ಳಗುರ್ಕಿ, ಪಿ.ಡಿ.ಹಳ್ಳಿ, ಅಮರಾಪುರ, ಶಿಡಿಗಿನಮೊಳ, ಕಾರೇಕಲ್ಲು ಗ್ರಾಮಗಳಲ್ಲಿ ಸಂಚರಿಸಿ, ಸಂಜೆ ಕಾರೇಕಲ್ಲು ಗ್ರಾಮಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರೇಕಲ್ಲು ಸಹಿಪ್ರಾಶಾಲೆಯ ಆವರಣದಲ್ಲಿ ವಾಸ್ತವ್ಯ ಮಾಡಲಿದೆ.
ಫೆ.೦೧ ರಂದು ಬೆಳಿಗ್ಗೆ ೦೯ ಗಂಟೆಯಿAದ ಸಂಜೆ ೦೬ರವರೆಗೆ ಎಂ.ಗೋನಾಳ್, ಯರಗುಡಿ, ಮೋಕಾ, ಬಿ.ಡಿ.ಹಳ್ಳಿ, ಕಪ್ಪಗಲ್ಲು, ಸಿರವಾರ, ಸಂಗನಕಲ್ಲು ಗ್ರಾಮಗಳಲ್ಲಿ ಸಂಚರಿಸಿ, ಸಂಗನಕಲ್ಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬಳಿಕ ವಾಲ್ಮೀಕಿ ಭವನದಲ್ಲಿ ವಾಸ್ತವ್ಯ ಮಾಡಲಿದೆ.
ಫೆ.೦೨ ರಂದು ಬೆಳಿಗ್ಗೆ ೦೯ ಗಂಟೆಯಿAದ ಸಂಜೆ ೦೬ ಗಂಟೆಯವರೆಗೆ ಶ್ರೀಧರಗಡ್ಡೆ, ಕೊರ್ಲಗುಂದಿ, ಹಂದಿಹಾಳು, ವಣೇನೂರು, ಬಸರಕೋಡು, ಚಾನಾಳು ಗ್ರಾಮಗಳಲ್ಲಿ ಸಂಚರಿಸಿ ಚಾನಾಳು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿ ತಾಳೂರು ಸರ್ಕಾರಿ ಪ್ರೌಢಶಾಲೆ ವಾಸ್ತವ್ಯ ಮಾಡಲಿದೆ.
*ಸಿರುಗುಪ್ಪ ತಾಲ್ಲೂಕು:*
ಫೆ.೦೩ ರಂದು ಬೆಳಿಗ್ಗೆ ೦೯ ರಿಂದ ಸಂಜೆ ೦೬ ರವರೆಗೆ ಸಿರುಗುಪ್ಪ ತಾಲ್ಲೂಕಿನ ತಾಳೂರು, ಉತ್ತನೂರು, ಕೆ.ಬೆಳಗಲ್, ಕೆ.ಸೂಗೂರು, ರಾರಾವಿ ಗ್ರಾಮಗಳಲ್ಲಿ ಸಂಚರಿಸಿ ಸಂಜೆ ರಾರಾವಿ ಗ್ರಾಪಂ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ರಾರಾವಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
ಫೆ.೦೪ ರಂದು ಬೆಳಿಗ್ಗೆ ೦೯ ರಿಂದ ಸಂಜೆ ೦೬ ರವರೆಗೆ ಬನ್ನೂರು, ಕುರುವಳ್ಳಿ, ಬಿ.ಎಂ.ಸೂಗೂರು, ರಾವಿಹಾಳ್ ಗ್ರಾಮಗಳಲ್ಲಿ ಸಂಚರಿಸಿ ಸಂಜೆ ರಾವಿಹಾಳ್ ಗ್ರಾಪಂ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ರಾವಿಹಾಳ್ನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
ಫೆ.೦೫ ರಂದು ಬೆಳಿಗ್ಗೆ ೦೯ ರಿಂದ ಸಂಜೆ ೦೬ ರವರೆಗೆ ತಾಲ್ಲೂಕಿನ ಬೀರಳ್ಳಿ, ಹಚೊಳ್ಳಿ, ಕುಡದರಹಾಳ್, ಬಾಗೇವಾಡಿ, ದೇಶನೂರು ಗ್ರಾಮದಲ್ಲಿ ಸಂಚರಿಸಿ ಸಂಜೆ ದೇಶನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಿರುಗುಪ್ಪದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ(ನಂ.೧)ದಲ್ಲಿ ವಾಸ್ತವ್ಯ.
ಫೆ.೦೬ ರಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆಯವರೆಗೆ ಹಳೇಕೋಟೆ ಹಾಗೂ ಸಿರುಗುಪ್ಪ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಸಿರುಗುಪ್ಪದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಿರುಗುಪ್ಪದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ (ನಂ.೧)ದಲ್ಲಿ ವಾಸ್ತವ್ಯ.
ಫೆ.೦೭ ರಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆಯವರೆಗೆ ಕೆಂಚನಗುಡ್ಡ, ನಡವಿ, ಎಂ.ಸೂಗೂರ್, ಮುದ್ದಟನೂರು, ಸಿರಿಗೇರಿ ಗ್ರಾಮದಲ್ಲಿ ಸಂಚರಿಸಿ ಸಂಜೆ ಸಿರಿಗೇರಿ ಗ್ರಾಪಂ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಿರಿಗೇರಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
ಫೆ.೦೮ ರಂದು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಕೊಂಚಗೇರಿ, ಶಾನವಾಸಪುರ, ಹೆಚ್.ಹೊಸಳ್ಳಿ, ಕರೂರು ಗ್ರಾಮಗಳಲ್ಲಿ ಸಂಚಾರ. ಬಳಿಕ ಕರೂರು ಗ್ರಾಪಂ ಆವರಣದಲ್ಲಿ ವೇದಿಕೆ ಕಾರ್ಯಕ್ರಮ. ಕರೂರು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
ಫೆ.೦೯ ರಂದು ಬೆಳಿಗ್ಗೆ ೯ ರಿಂದ ಸಂಜೆ ೬ ರವರೆಗೆ ಬೈರಾಪುರ, ಬಲಕುಂದಿ, ಉಪ್ಪಾರ ಹೊಸಳ್ಳಿ, ತೆಕ್ಕಲಕೋಟೆ ಪಟ್ಟಣದಲ್ಲಿ ಸಂಚರಿಸಿ ತೆಕ್ಕಲಕೋಟೆಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ತೆಕ್ಕಲಕೋಟೆ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
*ಕುರುಗೋಡು ತಾಲ್ಲೂಕು:*
ಫೆ.೧೦ ರಂದು ಬೆಳಿಗ್ಗೆ ೯ರಿಂದ ಸಂಜೆ ೬ರವರೆಗೆ ಕುರುಗೋಡು ತಾಲ್ಲೂಕಿನ ಸಿಂಧಿಗೇರಿ, ದಮ್ಮೂರು, ಕೋಳೂರು, ಸೋಮಸಮುದ್ರ ಗ್ರಾಮಗಳಲ್ಲಿ ಸಂಚಾರ ಮಾಡಿದ ಬಳಿಕ ಸಂಜೆ ಸೋಮಸಮುದ್ರ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಯರಂಗಳಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ವಾಸ್ತವ್ಯ.
ಫೆ.೧೧ ರಂದು ಬೆಳಿಗ್ಗೆ ೯ರಿಂದ ಸಂಜೆ ೬ರವರೆಗೆ ಯರಂಗಳಿ, ಸಿದ್ದಮ್ಮನಹಳ್ಳಿ, ಏಳುಬೆಂಚಿ, ಬಾದನಹಟ್ಟಿ ಗ್ರಾಮಗಳಲ್ಲಿ ಸಂಚರಿಸಿ, ಬಳಿಕ ಸಂಜೆ ಬಾದನಹಟ್ಟಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕುರುಗೋಡಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
ಫೆ.೧೨ ರಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆವರೆಗೆ ಕುರುಗೋಡಿನ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ, ಬಳಿಕ ತಹಸೀಲ್ದಾರರ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ಕುರುಗೋಡಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
ಫೆ.೧೩ ರಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆವರೆಗೆ ಗೆಣಿಕೆಹಾಳ್, ಹೆಚ್.ವೀರಾಪುರ, ಕಲ್ಲುಕಂಭ, ಓರ್ವಾಯಿ ಗ್ರಾಮಗಳಲ್ಲಿ ಸಂಚರಿಸಿ ಬಳಿಕ ಸಂಜೆ ಓರ್ವಾಯಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ಇರಲಿದೆ. ಎಮ್ಮಿಗನೂರಿನ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
*ಕಂಪ್ಲಿ ತಾಲ್ಲೂಕು:*
ಫೆ.೧೪ ರಂದು ಬೆಳಿಗ್ಗೆ ೦೯ರಿಂದ ಸಂಜೆ ೬ ಗಂಟೆಯವರೆಗೆ ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು, ನೆಲ್ಲುಡಿ, ಸಣಾಪುರ, ಕಂಪ್ಲಿ ಪಟ್ಟಣದಲ್ಲಿ ಸಂಚರಿಸಿ ಸಂಜೆ ವೇಳೆ ಕಂಪ್ಲಿಯ ಪುರಸಭೆಯ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ಕಂಪ್ಲಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.
ಫೆ.೧೫ ರಂದು ಬೆಳಿಗ್ಗೆ ೦೯ರಿಂದ ಸಂಜೆ ೬ ಗಂಟೆಯವರೆಗೆ ನಂ.೧೦ ಮುದ್ದಾಪುರ, ರಾಮಸಾಗರ, ದೇವಸಮುದ್ರ, ಮೆಟ್ರಿ ಗ್ರಾಮಗಳಲ್ಲಿ ಸಂಚಾರ ಮಾಡಲಿದೆ. ಸಂಜೆ ಮೆಟ್ರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಂತರ ಮೆಟ್ರಿ ಸ.ಹಿ.ಪ್ರಾ.ಶಾಲೆಯಲ್ಲಿ ವಾಸ್ತವ್ಯ ಮಾಡಲಿದೆ.
ಫೆ.೧೬ ರಂದು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ದೇವಲಾಪುರ, ದರೋಜಿ, ಕುಡುತಿನಿ ಪಟ್ಟಣದಲ್ಲಿ ಸಂಚಾರ ಮಾಡಿ, ಸಂಜೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಂತರದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯ.