ಬಳ್ಳಾರಿ : ಲೋಕಸಭೆ , ವಿಧಾನಸಭಾ ಚುನಾವಣೆಯಲ್ಲಿ ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಯಾವುದೇ ಪಕ್ಷವು ಟಿಕೆಟ್ ನೀಡದೇ ಅನ್ಯಾಯ ಮಾಡಿದೆ. ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಸಮುದಾಯವನ್ನು ಗುರುತಿಸಿ ನಾಮನಿರ್ದೇಶನ ಮಾಡಬೇಕೆಂದು ಬುಡಕಟ್ಟು ಸಮುದಾಯದ ಬಳ್ಳಾರಿ ಜಿಲ್ಲಾ ಚೆನ್ನ ದಾಸರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಿ. ರಂಗಯ್ಯ ಸಿಡಿಗಿನಮೊಳ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಎಸ್ಸಿ ಎಸ್ಟಿ ಅಲೆಮಾರಿ ಘಟಕ ರಚಿಸಬೇಕು, ರಾಜಕೀಯ ಅವಕಾಶ ವಂಚಿತ ಅಲೆಮಾರಿ ಜಾತಿಗಳಿಗೆ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕು ಎಂದು ಕೋರಿದರು. ಅವಕಾಶ ವಂಚಿತ ಇವತ್ತು ಅಲೆಮಾರಿ ಜಾತಿಗಳಿದ್ದು 25 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ, ಈ ಸಮುದಾಯಗಳು ಶೈಕ್ಷಣಿಕ ರಾಜಕೀಯ ಸಾಮಾಜಿಕ ಆರ್ಥಿಕವಾಗಿ ಹಿಂದುಳಿದವೆ. ಹೀಗಾಗಿ ಸಮುದಾಯಗಳ ಏಳಿಗೆಗಾಗಿ ರಾಜಕೀಯ ಪ್ರಾತಿನಿಧ್ಯ ದೊರೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಈ ಜಾತಿಗಳಿಗೆ ನಾಮ ನಿರ್ದೇಶನ ಮಾಡಬೇಕು ಎಂದು ಡಿ. ರಂಗಯ್ಯ ಸಿಡಿಗಿನಮೋಳ ,ಜಿಲ್ಲಾ ಅದ್ಯಕ್ಷರು ಡಿ. ಜಂಬುನಾಥ, . ಗೌರವ ಅಧ್ಯಕ್ಷರು ಡಿ.ಮಹದೇವಪ್ಪ, ಜಿಲ್ಲಾ ಉಪಾ ಧ್ಯಕ್ಷರು ಡಿ. ಎರ್ರಿಸ್ವಾಮಿ,ಜಂಟಿ ಕಾರ್ಯದರ್ಶಿ ಡಿ ರಾಮಯ್ಯ, ಸಂಘಟನಾ ಕಾರ್ಯದರ್ಶಿ ಡಿ .ಪಾಂಡು, ಡಿ. ಲಕ್ಷ್ಮಣ ಮೋಕ, ಡಿ.ಅಂಜಿ ವಾಣೀನೊರು ಮೊದಲಾದವರು ರಾಜಕೀಯ ಪಕ್ಷಗಳ ವರಿಷ್ಠರಿಗೆ ಆಗ್ರಹಿಸಿದರು.