ಮುಂಬಯಿ: ಮುಂಬೈ ಸಿನಿಮಾ ಲೋಕದಲ್ಲಿ ಪ್ರತಿಷ್ಠಿತ ಎನಿಸಿರುವ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2024 ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2024 ರ ವಿಜೇತರ ಪಟ್ಟಿ ಹೊರಬಿದ್ದಿದೆ. ಅದ್ಧೂರಿ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಕರೀನಾ ಕಪೂರ್, ಆದಿತ್ಯ ರಾಯ್, ರಾಣಿ ಮುಖರ್ಜಿ, ಆಟ್ಲಿ ಮತ್ತು ನಯನತಾರಾ ಸೇರಿದಂತೆ ಸಾಕಷ್ಟು ಕಲಾವಿದರು ಹಾಜರಿದ್ದರು.
ಈ ಸಮಾರಂಭದಲ್ಲಿ ಜವಾನ್ ಚಿತ್ರದ ಅತ್ಯುತ್ತಮ ನಟನೆಗಾಗಿ ಶಾರುಖ್ ಖಾನ್ ಮತ್ತು ನಯನತಾರಾ ಅವರು ದಾದಾಸಾಹೇಬ್ ಅಂತಾರಾಷ್ಟ್ರೀಯ ಫಾಲ್ಕೆ ಪ್ರಶಸ್ತಿ ಪ್ರಶಸ್ತಿ ಪಡೆದರು. ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ- 2024ರ ವಿಜೇತರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.
- ಉತ್ತಮ ನಟ: ಶಾರುಖ್ ಖಾನ್ (ಜವಾನ್)
- ಉತ್ತಮ ನಟಿ: ನಯನತಾರಾ (ಜವಾನ್)
- ಉತ್ತಮ ನಟಿ: ರಾಣಿ ಮುಖರ್ಜಿ (ಮಿಸ್ಟರ್ ಚಟರ್ಜಿ vs ನಾರ್ವೆ)
- ಉತ್ತಮ ನಿರ್ದೇಶಕ: ಸಂದೀಪ್ ರೆಡ್ಡಿ ವಂಗಾ (ಅನಿಮಲ್)
- ಉತ್ತಮ ನಟ (ವಿಮರ್ಶೆ): ವಿಕ್ಕಿ ಕುಶಾಲ್ (ಸ್ಯಾಮ್ ಬಹದೂರ್)
- ಉತ್ತಮ ಸಂಗೀತ ನಿರ್ದೇಶಕ: ಅನಿರುದ್ಧ ರವಿಚಂದರ್ (ಜವಾನ್)
- ಉತ್ತಮ ಹಿನ್ನೆಲೆ ಗಾಯಕ: ವರುಣ್ ಜೈನ್ ( ಝರಾ ಹಟ್ಕೆ ಝರಾ ಬಚ್ಕೆ ಸಿನಿಮಾದಿಂದ ತೇರೆ ವಸ್ತೆ)
- ಉತ್ತಮ ಖಳನಟ: ಬಾಬಿ ಡಿಯೋಲ್ (ಅನಿಮಲ್)
- ಉತ್ತಮ ನಟಿ (ಕಿರುತೆರೆ): ರೂಪಾಲಿ ಗಂಗೂಲಿ (ಅನುಪಮಾ)
- ಉತ್ತಮ ನಟ (ಕಿರುತೆರೆ): ನೈಲ್ ಭಟ್ (ಘಮ್ ಹಾಯ್ ಕಿಸಿಕೆ ಪ್ಯಾರ್ ಮೇನ್)
- ವರ್ಷದ ಟೆಲಿವಿಷನ್ ಸರಣಿ: ಘಮ್ ಹಾಯ್ ಕಿಸಿಕೆ ಪ್ಯಾರ್ ಮೇನ್
- ಉತ್ತಮ ನಟಿ (ವೆಬ್ ಸರಣಿ): ಕರಿಷ್ಮಾ ತನ್ನಾ (ಸ್ಕೂಪ್)
- ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಮೌಶುಮಿ ಚಟರ್ಜಿ
- ಸಂಗೀತ ಉದ್ಯಮಕ್ಕೆ ಅತ್ಯುತ್ತಮ ಕೊಡುಗೆ: ಕೆ ಜೆ ಯೇಸುದಾಸ್
ಇದೇ ಸಂದರ್ಭದಲ್ಲಿ ನಿರ್ದೇಶಕ ಆಟ್ಲಿ, ನಟ ಶಾಹಿದ್ ಕಪೂರ್ ಮತ್ತು ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಕೂಡ 2023 ರಲ್ಲಿ ತಮ್ಮ ಪ್ರಯತ್ನಗಳಿಗಾಗಿ ಪ್ರಶಸ್ತಿಯನ್ನು ಪಡೆದರು.