ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೦೯: ಜ,೧೧ರಂದು ಗಂಗಾವತಿಯ ಶಾಸಕ ಜನರ್ದನರೆಡ್ಡಿಯವರ ೫೭ನೇ ಹುಟ್ಟುಹಬ್ಬದ ಹಿನ್ನಲೆ ನಗರದಲ್ಲಿ, ಬ್ಯಾನರ್ಗಳಿಗೆ ಅನುಮತಿ,ನೀಡುತ್ತಿಲ್ಲ ಎಂದು ಕೆಆರ್ಪಿಪಿ ಮುಖಂಡರು ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕೆಆರ್ಪಿ ಪಕ್ಷದ ಜಿಲ್ಲಾ ಅಧ್ಯಕ್ಷ ದಮ್ಮೂರು ಶೇಖರ್ ಮಾತನಾಡಿ ಕಳೆದ ತಿಂಗಳು ನಗರ ಶಾಸಕ ಭರತ್ ರೆಡ್ಡಿ ಅವರ ಚಿಕ್ಕಪ್ಪ,ತಂದೆ,ಶಾಸಕರ ಹುಟ್ಟುಹಬ್ಬವನ್ನು, ಆಚರಿಸುವುದಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಬ್ಯಾನರ್ಗಳ ಅನುಮತಿ ನೀಡಿದ್ದಾರೆ, ಆದರೆ ನಮ್ಮ ನಾಯಕ ಜನಾರ್ದನ್ ರೆಡ್ಡಿ ಅವರ,ಹುಟ್ಟುಹಬ್ಬ ಆಚರಿಸುವದಕ್ಕೆ, ಬ್ಯಾನರ್ಗಳ ಅನುಮತಿಯನ್ನು ಮಹಾನಗರ ಪಾಲಿಕೆ ಆಯುಕ್ತರು ನೀಡುತ್ತಿಲ್ಲ, ಮಹಾನಗರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ನಗರ ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ, ಶಾಸಕರಿಗೆ ಒಂದು ನ್ಯಾಯ, ಸಾರ್ವಜನಿಕರಿಗೆ ಕೆಆರ್ಪಿ ಪಕ್ಷದವರಿಗೆ ಒಂದು ನ್ಯಾಯಾನ,ಶಾಸಕರು ಅಧಿಕಾರಿಗಳ ಮೇಲೆ ದರ್ಪವನ್ನು ತೋರಿಸುತ್ತಿದ್ದಾರೆ, ಕಳೆದ ೪ ರಂದ ಎಷ್ಟೇ ಬಾರಿ ಬಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಬ್ಯಾನರ್ಗಳ ಅನುಮತಿ ಕೇಳಿದರೆ,ಕ್ಯಾರೆ ಎನ್ನುತ್ತಿಲ್ಲ, ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳು ಇಲ್ಲಿಂದ ಹೋಗಿ ಇಲ್ಲದಿದ್ದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ,ಕಾನೂನು ವ್ಯವಸ್ಥೆ ನಗರದಲ್ಲಿ ಹದಗೆಟ್ಟಿದೆ,ಯಾವುದೇ ಕಾರಣಕ್ಕೂ ಬೆದರಿಕೆಗೆ ಬಗ್ಗುವರಲ್ಲ ನಾವು, ಆದರಿಂದ ಪಕ್ಷದ ಮುಖಂಡರು ಮತ್ತು ನಮ್ಮ ಕಾರ್ಯಕರ್ತರು,ನಾವು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ್ದೆವು ಕೊನೆಯ ಬಾರಿ ಬಂದು ಅನುಮತಿ ಕೇಳಿದೆವು, ಎರಡು ಮೂರು ಗಂಟೆ ಕೂಡಿಸಿಕೊಂಡು ನಮಗೆ ಅನುಮತಿ ಪತ್ರ ಕೊಟ್ಟಿದ್ದಾರೆ,ಆಯುಕ್ತರು ಅನುಮತಿಯನ್ನು ಕೊಡದಿದ್ದರೆ,ನಮ್ಮ ನಾಯಕ ಜನಾರ್ದನ ರೆಡ್ಡಿ ಅವರ ಹುಟ್ಟುಹಬ್ಬವನ್ನು ಮಹಾನಗರ ಪಾಲಿಕೆಯಲ್ಲಿ ಧರಣಿ ಮೂಲಕ ಆಚರಿಸುತ್ತಿದ್ದೆವು ಎಂದರು. ಈ ಸಂದರ್ಭದಲ್ಲಿ ಕೆಆರ್ಪಿಪಿ ಪದಾಧಿಕಾರಿಗಳಾದ, ಮುನ್ನ ಬಾಯ್,ಗುರ್ರಮ್ ವೆಂಕಟರಮಣ,ಹAಪಿ ರಮಣ,ಮಾಜಿ ಮಹಾನಗರ ಪಾಲಿಕೆ ಸದಸ್ಯೆ, ಪರ್ವೀನ್ ಬಾನು, ಉಮರಾಜ್ ಮಲ್ಲಿಕಾರ್ಜುನ್ ಆಚಾರ್, ಹುಂಡೇಕರ್ ರಾಜೇಶ್, ರಾಜ್ ಮೆಲೋಡಿಸ್, ರಮೇಶ್,(ರಾಜು )ಉಪ್ಪಾರ್ ಹನುಮೇಶ್,ಕೊಳಗಲ್ ಅಂಜಿನಿ, ವಿಜಯ್ ಜಾಗೃತಿ ನಗರ್ ಇಕ್ಬಾಲ್, ಖಾದಿರ್,ಪುಷ್ಪಲತಾ ಅರ್ಷಿಯಾ,ಭಾಗ್ಯಮ್ಮ, ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.