ಸೆಪ್ಟೆಂಬರ್ಗೆ ಡೆಂಗ್ಯೂ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ‘ಪೀಕ್ ಆಗೋದು ಸೆಪ್ಟೆಂಬರ್ನಲ್ಲಿ ಆದರೆ, ಈ ಬಾರಿ ಜೂನ್ನಲ್ಲೇ ಪೀಕ್ಗೆ ಹೋಗಿದೆ. ಕಳೆದ ವರ್ಷ 750 ಕೇಸ್ ಮಾತ್ರ ಜೂನ್ನಲ್ಲಿಇತ್ತು. ಈ ಬಾರಿ 2000 ರೀಚ್ ಆಗುತ್ತಿದೆ. ಸೆಪ್ಟೆಂಬರ್ ವೇಳೆಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ನಾವು ತಂಡಗಳನ್ನ ರಚನೆ ಮಾಡಿ ಜನರನ್ನ ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇನ್ನು ಕ್ಯಾಂಪೇನಿಂಗ್ ನಡೆಸಲಾಗುತ್ತಿದೆ, ಮನೆ ಮನೆಗೆ ಪಾಪ್ ಪ್ಲೇಟ್ ಹಂಚಿ ತಿಳುವಳಿಕೆ ನೀಡುತ್ತಿದ್ದೇವೆ. ಜೊತೆಗೆ ಬಸ್ ಸ್ಟ್ಯಾಂಡ್ ಜಾಹೀರಾತುಗಳನ್ನ ಹಾಕಲಿದ್ದೇವೆ. ಫ್ರೆಶ್ ವಾಟರ್ನಲ್ಲಿ ಉತ್ಪತಿಯಾಗುವ ಸೊಳ್ಳೆಗಳಿಂದ ಡೆಂಗ್ಯೂ ಸೋಂಕು ಬರುತ್ತದೆ. ಬಿಬಿಎಂಪಿಯಲ್ಲಿ ಆರು ಸಾವಿರ ಟೆಸ್ಟಿಂಗ್ ಕಿಟ್ ಇದೆ. 95% ಕೇಸ್ಗಳು ಖಾಸಗಿಯಲ್ಲಿ ರಿಪೋರ್ಟಿಂಗ್ ಆಗುತ್ತಿದೆ. ಪಿಹೆಚ್ಸಿ ಗೆ ಬಂದಿರುವ ಅತೀ ಹೆಚ್ಚು ಜ್ವರ ಹಾಗೂ ರೋಗಲಕ್ಷಣಗಳು ಇರುವ ರೋಗಿಗಳಿಗೆ ಟೆಸ್ಟ್ ಮಾಡಲಾಗುತ್ತಿದೆ.
ಚಿಕಿತ್ಸೆ ಏನು?
ಡೆಂಗ್ಯೂ ಸೋಂಕು ತಗುಲಿದ ವ್ಯಕ್ತಿಯಲ್ಲಿ ಬಿಳಿ ರಕ್ತಕಣಗಳು 20 ಸಾವಿರಕ್ಕಿಂತ ಕಡಿಮೆ ಇದ್ದರೆ, ಅಂತಹ ವ್ಯಕ್ತಿಗೆ ಬ್ಲಡ್ ಡೊನೆಟ್ ಅವಶ್ಯಕತೆ ಇದೆ. ಉಳಿದಂತೆ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಡೆಂಘೀ ನಿರ್ಮೂಲನೆಗೆ ಮತ್ತಷ್ಟು ಕ್ರಮಗಳನ್ನ ಕೈಗೊಳ್ಳಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದರು.