ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಪ್ರಸ್ತುತ ಎರಡು ದೊಡ್ಡ ಪ್ರಾಜೆಕ್ಟ್ ಗಳಾದ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಕೆಡಿ ಮತ್ತು ಮಾರ್ಟಿನ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಫೆಬ್ರವರಿ 10 ರಿಂದ ಮಾರ್ಟಿನ್ ಚಿತ್ರದ ಅಂತಿಮ ಹಂತದ ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ.
ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಪ್ರಸ್ತುತ ಎರಡು ದೊಡ್ಡ ಪ್ರಾಜೆಕ್ಟ್ ಗಳಾದ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಕೆಡಿ ಮತ್ತು ಮಾರ್ಟಿನ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಫೆಬ್ರವರಿ 10 ರಿಂದ ಮಾರ್ಟಿನ್ ಚಿತ್ರದ ಅಂತಿಮ ಹಂತದ ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಆ್ಯಕ್ಷನ್, ಎಂಟರ್ ಟೈನರ್ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಾಡಲಾಗುತ್ತಿದೆ.
ಈಗ ನಿರ್ಮಾಣದ ಅಂತಿಮ ಹಂತಕ್ಕೆ ಕಾಲಿಡುತ್ತಿದೆ. ಇಂಟ್ರಡಕ್ಷನ್ ಸಾಂಗ್ ನ ಮುಂದುವರಿಕೆಯಾಗಿ ಎರಡು ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಉಳಿದ ಸೀಕ್ವೆನ್ಸ್ಗಳು ಗೋವಾದಲ್ಲಿ ಚಿತ್ರೀಕರಣಗೊಳ್ಳಲಿದ್ದು, ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಇದರ ನಂತರ ಚಿತ್ರತಂಡ ರೊಮ್ಯಾಂಟಿಕ್ ಡ್ಯುಯೆಟ್ ಚಿತ್ರೀಕರಣದ ಯೋಜನೆಯಲ್ಲಿದೆ. ಇದಕ್ಕೆ ಇಮ್ರಾನ್ ಸರ್ಧಾರಿಯಾ ಅವರ ನೃತ್ಯ ಸಂಯೋಜನೆ ಇರಲಿದ್ದು, ಭಾರತದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗುತ್ತಿದೆ.
ನಿರ್ಮಾಪಕರ ಪ್ರಕಾರ ಮಾರ್ಟಿನ್ ಚಿತ್ರೀಕರಣ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ. ಈ ಮಧ್ಯೆ ಪ್ರೊಡಕ್ಷನ್ ಹೌಸ್ ಸೂಕ್ತವಾದ ಬಿಡುಗಡೆಯ ದಿನಾಂಕವನ್ನು ಎಚ್ಚರಿಕೆಯಿಂದ ಪರಿಗಣಿಸುತ್ತಿದೆ. ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಮಾರ್ಟಿನ್ ಆಡಿಯೊ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಚಿತ್ರವು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಡಬ್ ಆಗಲಿದೆ.
ಅರ್ಜುನ್ ಸರ್ಜಾ ಮಾರ್ಟಿನ್ ಕಥೆ ಬರೆದಿದ್ದಾರೆ ಮತ್ತು ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅನ್ವೇಶಿ ಜೈನ್, ಸುಕೃತಾ ವಾಗ್ಲೆ, ನಾಥನ್ ಜೋನ್ಸ್, ರೂಬಿಲ್ ಮೊಸಕ್ವೇರಾ, ಅಚ್ಯುತ್ ಕುಮಾರ್ ಮತ್ತು ಮಾಳವಿಕಾ ಅವಿನಾಶ್ ಇತರರು ಇದ್ದಾರೆ. ಉದಯ್ ಕೆ ಮೆಹ್ತಾ ಅವರು ವಾಸವಿ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ ಮತ್ತು ರವಿ ಬಸ್ರೂರ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದು, ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.