ಬಳ್ಳಾರಿ,ಅ.25 :ಲಿಂಗ ಆಯ್ಕೆ ನಿಷೇಧ ಅಧಿನಿಯಮ-1994 ಕಾಯ್ದೆ (ಪಿಸಿ ಅಂಡ್ ಪಿಎನ್ಡಿಟಿ ಕಾಯ್ದೆ) ಅನ್ವಯ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದೆ. ಜಿಲ್ಲೆಯಾದ್ಯಂತ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚಿಸಿದರು.
ಶುಕ್ರವಾರದಂದು, ನಗರದ ನೂತನ ಜಿಲ್ಲಾಡಳಿತ ಭವನದ ವಿಡೀಯೋ ಸಭಾಂಗಣದಲ್ಲಿ ಪಿಸಿ, ಪಿಎನ್ಡಿಟಿ ಕಾಯ್ದೆ 1994 ಮತ್ತು ಕೆಪಿಎಂಇ ಕುರಿತಂತೆ ಜಿಲ್ಲಾ ಮಟ್ಟದ ಕಾರ್ಯಪಡೆಯ ಕಾರ್ಯವೈಖರಿಯ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಪುರುಷ-ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಪಿಸಿ ಅಂಡ್ ಪಿಎನ್ಡಿಟಿ ಕಾಯ್ದೆಯನ್ವಯ ನಿಯಮಾನುಸಾರ ಅನುಮತಿ ಪಡೆದು ನಡೆಯುತ್ತಿರುವ ಅಲ್ಟಾçಸೌಂಡ್ ಸ್ಕಾö್ಯನಿಂಗ್ ಕೇಂದ್ರಗಳಲ್ಲಿ ಪ್ರತಿ ಪ್ರಕರಣದ ಮಾಹಿತಿಯನ್ನು ರಿಜಿಸ್ಟರ್ನಲ್ಲಿ ನಮೂದಿಸಬೇಕು. ಆಯಾ ದಿನವೇ ನಮೂನೆ-ಎಫ್ನಲ್ಲಿ ವರದಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕು. ಈ ಕಾರ್ಯ ಮಾಡದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಮಹಿಳೆಯರು ಕೂಡ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಹಕ್ಕು ಇದೆ. ಮಹಿಳೆಯರ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿರುವ ಹೆಣ್ಣುಭ್ರೂಣ ಹತ್ಯೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಾಗಾಗಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಮಾಡಿದಲ್ಲಿ ಕಠಿಣ ಶಿಕ್ಷೆ ಇರುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಹೆಣ್ಣು ಮಗುವಿನ ಜನನದ ಕುರಿತು ಪ್ರಾಮುಖ್ಯತೆ ತಿಳಿಸಲು ಪ್ರತಿ ಗ್ರಾಮಪಂಚಾಯತ್ವಾರು ಹೆಣ್ಣು ಮಗು ಜನಿಸಿದಲ್ಲಿ ವಿಶೇಷ ಕಿಟ್ ನೀಡಲು ತೀರ್ಮಾನಿಸಿ, ಡಿಎಂಎಫ್ ಅಡಿ ಅನುದಾನ ನೀಡಲಾಗುವುದು ಎಂದರಲ್ಲದೇ, ಮುಂದಿನ ದಿನಗಳಲ್ಲಿ ಅಭಿಯಾನದಂತೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಅವರು ಮಾತನಾಡಿ, ಸ್ಕಾö್ಯನಿಂಗ್ ಕೈಗೊಳ್ಳುವ ಸೆಂಟರ್ಗಳಲ್ಲಿ ವರದಿ ನೀಡುವಾಗ ಗರ್ಭದಲ್ಲಿನ ಮಗುವಿನ ಆರೋಗ್ಯದ ಸ್ಥಿತಿ-ಗತಿ ಕುರಿತು ಪೋಷಕರಿಗೆ ಸತ್ಯತೆಯನ್ನು ಮನವರಿಕೆ ಮಾಡಬೇಕು. ಇತ್ತೀಚೆಗೆ ಜಿಲ್ಲೆಯಲ್ಲಿ ಗರ್ಭದಲ್ಲಿ ಮಗುವಿನ ದೈಹಿಕ ವೈಫಲ್ಯತೆಯಿಂದ ಕೂಡಿರುವುದನ್ನು ಸ್ಕಾö್ಯನಿಂಗ್ ಸೆಂಟರ್ನವರು ತಪ್ಪು ಮಾಹಿತಿ ನೀಡಿದ್ದು, ಆ ಮಗುವಿನ ಜನನ ಅತ್ಯಂತ ಕಷ್ಟಕರವಾಗಿದೆ. ಇಂತಹ ವರದಿ ಮರುಕಳಿಸಬಾರದು ಎಂದು ಸಭೆಗೆ ತಿಳಿಸಿದರು.
*ಲಿಂಗಾನುಪಾತದಲ್ಲಿ ಏರಿಳಿಕೆ:*
ಬಳ್ಳಾರಿ ಜಿಲ್ಲೆಯಲ್ಲಿ ಲಿಂಗಾನುಪಾತ ವಿವರ ಅಂಕಿ ಅಂಶದAತೆ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಲಿಂಗಾನುಪಾತದಲ್ಲಿ ಏರಿಳಿಕೆ ಕಂಡುಬAದಿದೆ. 2014-15 ರಲ್ಲಿ ಒಂದು ಸಾವಿರ ಗಂಡು ಮಗು ಜನನಕ್ಕೆ 945 ಹೆಣ್ಣು ಮಗು ಜನನ ದಾಖಲಾಗಿದೆ.
2015-16 ರಲ್ಲಿ 936, 2016-17 ರಲ್ಲಿ 925, 2017-18 ರಲ್ಲಿ 934, 2018-19 ರಲ್ಲಿ 953, 2019-20 ರಲ್ಲಿ 941, 2020-21ರಲ್ಲಿ 950, 2021-22 ರಲ್ಲಿ 924, 2022-23 ರಲ್ಲಿ 927 ಮತ್ತು 2023-24 ರಲ್ಲಿ 935 ದಾಖಲಾಗುವ ಮೂಲಕ ಲಿಂಗಾನುಪಾತ ಏರಿಳಿಕೆ ಕಂಡಿದೆ.
ಲಿAಗಾನುಪಾತ ವೃದ್ಧಿಗೆ ಪಿಸಿ ಅಂಡ್ ಪಿಎನ್ಡಿಟಿ ಕಾಯ್ದೆ ಕುರಿತಂತೆ ಐಇಸಿ ಚಟುವಟಿಕೆಗಳು, ಪೋಸ್ಟರ್ ಹಾಗೂ ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು, ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಡಿಎಚ್ಒ ಡಾ.ವೈ.ರಮೇಶ್ಬಾಬು ಅವರು ಸಭೆಗೆ ತಿಳಿಸಿದರು.
ಪಿಸಿ, ಪಿಎನ್ಡಿಟಿ ಕಾಯ್ದೆ ಅಡಿ ಜಿಲ್ಲೆಯಲ್ಲಿ 76 ಸ್ಕಾö್ಯನಿಂಗ್ ಸೆಂಟರ್ಗಳು ನೋಂದಾಯಿಸಿಕೊAಡಿದ್ದು, ವಿವಿಧ ಸ್ಕಾö್ಯನಿಂಗ್ ಸೆಂಟರ್ಗಳಿಗೆ ಅನಿರೀಕ್ಷಿತ ಭೇಟಿ ನೀಡಲಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಅವರು ಸಭೆಗೆ ತಿಳಿಸಿದರು.
*ಕೆಪಿಎಂಇ ಅಡಿ ನೋಂದಣಿ ಕಡ್ಡಾಯ:*
ಅಲ್ಟಾçಸೌಂಡ್ ಸ್ಕಾö್ಯನಿಂಗ್ ಸೌಲಭ್ಯ ಹೊಂದಿರುವ ಎಲ್ಲಾ ಸೆಂಟರ್ಗಳು, ಕ್ಲಿನಿಕ್ಗಳು, ಪ್ರಯೋಗಾಲಯಗಳು ಕೆಪಿಎಂಇನಡಿ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.
ಕೆ.ಪಿ.ಎಮ್.ಇ ಯಲ್ಲಿ ನೋಂದಣಿ ಮಾಡಿಕೊಳ್ಳದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ನೀಡುವಂತಿಲ್ಲ. ಕಡ್ಡಾಯವಾಗಿ ಅನುಮತಿ ಪಡೆದುಕೊಂಡೇ ಕಾರ್ಯ ನಿರ್ವಹಿಸಬೇಕು, ಈ ಕುರಿತು ಕಾರ್ಯಾಚರಣೆ ನಡೆಸಬೇಕು ಎಂದು ಡಿಹೆಚ್ಒ ಅವರಿಗೆ ಸೂಚಿಸಿದರು.
ತಜ್ಞ ವೈದ್ಯರ ಸಲಹೆ ಇಲ್ಲದೇ ಮೆಡಿಕಲ್ ಟರ್ಮಿನೇಶನ್ ಆಫ್ ಪ್ರಗನೆನ್ಸಿ (ಎಂಟಿಪಿ)ಗೆ ಸಂಬAಧಿಸಿದ ಔಷಧಗಳನ್ನು ಮಾರಾಟ ಮಾಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವೈದ್ಯಕೀಯ ಕಾರಣಗಳಿಂದಾಗುವ ಗರ್ಭಪಾತ ನಿರ್ವಹಿಸುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು ಇ-ಕಲ್ಯಾಣಿ ಸಾಫ್ಟ್ವೇರ್ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದರು.
ಜಿಲ್ಲೆಯಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿದ್ದ ಎಂ.ಬಿ.ರಾAಜಾನಿಸಾಬ್, ಶ್ರೀಧರ್ ಹಾಲಹರವಿ ಅವರಿಗೆ ತಲಾ 1 ಲಕ್ಷ ರೂ. ನಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ದಂಡ ವಿಧಿಸಿ, ವೃತ್ತಿ ನಡೆಸದಂತೆ ಖಡಕ್ ಸೂಚನೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಿಂದ 200 ಮೀ. ಅಂತರದಲ್ಲಿ ಯಾವುದೇ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುವಂತಿಲ್ಲ. ಈ ಕುರಿತು ಆದೇಶವಿದ್ದು, ನಗರದ ಬಿಮ್ಸ್ ಆಸ್ಪತ್ರೆಯ ಸುತ್ತ-ಮುತ್ತಲಿನ ಕೆಲ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಯವರು ಅರ್ಜಿ ರದ್ದುಗೊಳಿಸಿದರು.
ಸಭೆಯಲ್ಲಿ ಹೊಸದಾಗಿ ಸ್ಕಾö್ಯನಿಂಗ್ ಸೆಂಟರ್ ನೋಂದಣಿಗೆ ಬಂದಿರುವ ಅರ್ಜಿಗಳು ಹಾಗೂ ನವೀಕರಣ ಅರ್ಜಿಗಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ್, ಜಿಲ್ಲಾ ಆಶ್ರೀತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಪಿಸಿ, ಪಿಎನ್ಡಿಟಿ ಸಮಿತಿಯ ಅಧ್ಯಕ್ಷ ರೇಡಿಯಾಲಜಿಸ್ಟ್ ಡಾ.ಶಂಭು.ಎಸ್., ಸದಸ್ಯರಾದ ಮಕ್ಕಳ ತಜ್ಞರಾದ ಡಾ.ಭಾವನಾ.ಡಿ., ಸ್ತಿçÃರೋಗ ತಜ್ಞರಾದ ಡಾ.ಸ್ರವಂತಿ ಪುತ್ತ, ಸೌಖ್ಯ ಬೆಳಕು ಸಂಸ್ಥೆಯ ವ್ಯವಸ್ಥಾಪಕಿ ಲಕ್ಷಿö್ಮÃನರಸಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.