ಸಿರುಗುಪ್ಪ,ಏ.4: ಕರ್ನಾಟಕ ಸರ್ಕಾರ ತಾಲೂಕ ಪಂಚಾಯತ್ ,ತಾಲೂಕ ಸಮಾಜ ಕಲ್ಯಾಣ ಇಲಾಖೆ ನಗರ ಸಭೆ ಎಲ್ಲಾ ಇಲಾಖೆಗಳ ಸಹಯೋಗದಿಂದ ಭಾರತದ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿ ಹರಿಕಾರ ಡಾ ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತ್ಯೋತ್ಸವ ಸಿರುಗುಪ್ಪ ನಗರದ
ಡಾ ಬಾಬು ಜಗಜೀವನ್ ರಾಮ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಬೆಳಿಗ್ಗೆ 10:00ಗೆ ಹೂಮಾಲೆ ಪುಷ್ಪ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಶಾಸಕ ಬಿ ಎಂ ನಾಗರಾಜ ಅವರು ಗೌರವಿಸಿ ಸ್ಮರಿಸಿ ನಮನ ಸಲ್ಲಿಸಿ ಉದ್ಘಾಟಿಸುವರು ಡಾ ಬಾಬು ಜಗಜೀವನ್ ರಾಮ್ ಸಂಘದ ತಾಲೂಕ ಗೌರವಾಧ್ಯಕ್ಷ ಚಿಕ್ಕ ಬಳ್ಳಾರಿ ನಾಗಪ್ಪ ಡಾ ಬಿ ಆರ್ ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಮಹರ್ಷಿ
ವಾಲ್ಮೀಕಿ ವಿದ್ಯಾ ಅಭಿವೃದ್ಧಿ ಸಂಸ್ಥೆಯ ತಾಲೂಕ ಅಧ್ಯಕ್ಷ ಬಿಎಂ ಸತೀಶ್, ಬಳ್ಳಾರಿ ಜಿಲ್ಲಾ ಗ್ಯಾರೆಂಟಿ
ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಕರಿಬಸಪ್ಪ ,ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ
ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಶಾಲಾ ಶಿಕ್ಷಣ ಮತ್ತು ಶಾಲಾ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ,ಸಮನ್ವಯಾಧಿಕಾರಿ ತಮ್ಮನ ಗೌಡ ಪಾಟೀಲ್, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು, ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಎಚ್ ವಿಶ್ವನಾಥ ,ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್, ನಗರ ಸಭೆ ಪೌರಯುಕ್ತ ಎಂಎನ್ ಗುರುಪ್ರಸಾದ್ ,ನಗರ ಸಭೆ ಅಧ್ಯಕ್ಷರು ಬಿ ರೇಣುಕಮ್ಮ ವೆಂಕಟೇಶ್ ,ಉಪಾಧ್ಯಕ್ಷರು ಯಶೋಧ ಚಿದಾನಂದಮೂರ್ತಿ ಎಲ್ಲಾ ಅಧಿಕಾರಿಗಳು ದಲಿತ ಸಮಾಜದ ವಿವಿಧ ಎಲ್ಲಾ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತಿರಿರುವರು ಎಂದು ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಾಲೂಕ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮಡ್ಡೇರು ಸಿದ್ದಯ್ಯ ಅವರು ಮನವಿ ಮಾಡಿದರು.