ಸುವರ್ಣವಾಹಿನಿ ಸುದ್ದಿ
ಕೊಪ್ಪಳ,ಜ,೧೮: ಉತ್ಸವಗಳಿಗೆ ಮನಸ್ಸನ್ನು ಅರಳಿಸುವ ಶಕ್ತಿ ಇದೆ. ದೈನಂದಿನ ಬದುಕಿನ ಜಂಜಾಟಗಳನ್ನು ಮರೆಸಿ ಸಂಬAಧ, ಬಾಂಧವ್ಯಗಳು ವೃದ್ಧಿಯಾಗುವುದರ ಮೂಲಕ ಉತ್ಸವಗಳಿಂದ ಜನರ ಉತ್ಸಾಹ ಹೆಚ್ಚುತ್ತದೆ. ಉತ್ಸವಗಳಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು, ಪರಂಪರೆಯ ಶ್ರೇಷ್ಠತೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಸಾರ್ಥಕ ಕೆಲಸವಾಗುತ್ತದೆ. ಉತ್ಸವಗಳಿಂದ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಸಾಹಸಿ ಸಂಘಟಕರಾದ ಮಹೇಶ ಬಾಬು ಸುರ್ವೆ ಅವರು ಕಳೆದ ೨೦ ವರ್ಷಗಳಿಂದಲೂ ಸಹ ಈ ಉತ್ಸವವನ್ನು ಆಚರಿಸಿಕೊಂಡು ಬಂದಿರುವ ಅವರ ಸಾಹಸವನ್ನು ಮೆಚ್ಚಲೇಬೇಕು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿಯ ಮಹಾದೇವ ದೇವಾಲಯದ ಆವರಣದಲ್ಲಿ ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ೨೦ನೇ ಬಾರಿಗೆ ಹಮ್ಮಿಕೊಂಡ ಇಟಗಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇಟಗಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಂ.ಬಿ. ಅಳವಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂರನೇ ಯುವ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾದ ಕುದಾನ್ ಮುಲ್ಲಾ, ಉತ್ಸವದ ಸಂಚಾಲಕರಾದ ಮಹೇಶಬಾಬು ಸುರ್ವೆ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಅಂದಪ್ಪ ಹುರುಳಿ, ತಾಲೂಕ ಅಧ್ಯಕ್ಷರಾದ ಮಂಜುನಾಥ ಛಬ್ಬಿ, ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಹುಳುಗಣ್ಣವರ ರೈತ ಮುಖಂಡರಾದ ಬಸನಗೌಡ ಪಾಟೀಲ, ವಜೀರಸಾಬ ತಳಕಲ, ಇಟಗಿ ಗ್ರಾಮ ಘಟಕದ ಅಧ್ಯಕ್ಷರಾದ ಬಸಪ್ಪ ಮಂಡಲಗಿರಿ, ರೈತ ಮುಖಂಡರಾದ ಬಸಪ್ಪ ಹೊಂಬಳ, ಹುಚ್ಚಪ್ಪ ಸಣ್ಣ ನಿಂಗಣ್ಣವರ, ವೀರಯ್ಯ ಕಳ್ಳಿಮಠ, ಪೀರಪ್ಪ ಲಮಾಣಿ, ಹನುಮಪ್ಪ ಸಣ್ಣ ನಿಂಗಣ್ಣವರ, ಲಕ್ಕಪ್ಪ ಗುಳಗಣ್ಣವರ, ಮಹದೇವಪ್ಪ ಕೌದಿ, ಈರಪ್ಪ ಗುಳಗಣ್ಣನವರ, ಹನುಮಂತ ಸುಣಗಾರ, ಕಂಡೆಪ್ಪ ಲಮಾಣಿ, ಬಸವರಾಜ ಪೂಜಾರ, ಮಹದೇವಪ್ಪ ಗೊಂಡಬಾಳ, ಭರಮಪ್ಪ ಹಿರೇನಿಂಗಣ್ಣವರ, ಶರಣಯ್ಯ ಕೋಮಾರ, ಶರಣಪ್ಪ ಹೊಂಬಳ, ಶಿವಪ್ಪ ಗುಳಗಣ್ಣವರ, ಬಸವರಾಜ ಚೌಡಿ, ನಿಂಗಪ್ಪ ಕರೆ ಬಾಲಪ್ಪನವರ, ಚಂದ್ರಪ್ಪ ಹಡಪದ, ಅನೀಲ ಹುಜರತ್ತಿ, ಲಕ್ಷ್ಮಪ್ಪ ಕೋರಿ, ಗದಿಗೆಪ್ಪ ಕೋರಿ, ವೀರನಗೌಡ ಸಾದರ, ಚೆನ್ನಪ್ಪ ಮಂಡಲಗೇರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.