ಸುವರ್ಣವಾಹಿನಿ ಸುದ್ದಿ
ಕಾರಟಗಿ,ಜ,೧೭: ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಶ್ರೀ ಶಾರದಾ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳಿಗೆ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಗಳೊಂದಿಗೆ ಸಂವಾದ ಹಾಗೂ ಶಿಕ್ಷಣದ ಮಹತ್ವ ಕುರಿತು ಪ್ರತ್ಯಕ್ಷ ಮನವರಿಕೆಯನ್ನು ವಿದ್ಯಾ ಸಂಸ್ಥೆಯಿAದ ಮಾಡಲಾಯಿತು.
ಕೂಲಿ ಕಾರ್ಮಿಕರ ಜೀವನ ಶೈಲಿ ಹಾಗೂ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವ ಜೀವನ ಶೈಲಿಯ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ತಿಳಿಸಲು ನೇರವಾಗಿ ಪ್ರಮುಖರ ಮನೆಗಳಿಗೆ ತೆರಳಿ ವಿಶೇಷ ಸಂವಾದ ನಡೆಸುವ ಮೂಲಕ ವಿಶಿಷ್ಟ ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆ ಹಮ್ಮಿಕೊಂಡಿತ್ತು. ದಿನಗೂಲಿ ಕಾರ್ಮಿಕರ ಮನೆಗೆ ಭೇಟಿ : ಶಾಲಾ ವಿದ್ಯಾರ್ಥಿಗಳು ದಿನಗೂಲಿ ಕಾರ್ಮಿಕರ ಮನೆಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿದರು. ಸಣ್ಣ ಗುಡಿಸಲಿನಲ್ಲಿ ನಿಮ್ಮ ಜೀವನ ಸಾಗುತ್ತಿದೆ ಇದಕ್ಕೆ ಪ್ರಮುಖ ಕಾರಣ ಹಾಗೂ ಶಿಕ್ಷಣದ ಮಹತ್ವದ ಕುರಿತು ಚರ್ಚೆ ಪ್ರಾರಂಭವಾಯಿತು. ಮಕ್ಕಳಿಗೆ ಪ್ರತ್ಯುತ್ತರ ಎನ್ನುವ ರೀತಿಯಲ್ಲಿ ದಿನಗೂಲಿ ಕಾರ್ಮಿಕರು ಉತ್ತರಿಸಿದರು. ಬಡತನ ಮತ್ತು ಶಿಕ್ಷಣದಿಂದ ವಂಚಿತರಾಗಿದ್ದ ಕಾರಣಕ್ಕೆ ನಾವು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತೇವೆ. ಉತ್ತಮ ಶಿಕ್ಷಣವನ್ನು ಹೊಂದಿದ್ದರೆ ಉತ್ತಮ ಉದ್ಯೋಗವನ್ನು ಹೊಂದುತ್ತಿದ್ದೆವು. ಕುಟುಂಬದವರ ಜೊತೆಗೆ ಆರ್ಥಿಕವಾಗಿ ಸದೃಢರಾಗುತ್ತಿದ್ದೆವು ಆದರೆ ಶಿಕ್ಷಣವನ್ನು ಪಡೆಯದ ಕಾರಣ ಆರ್ಥಿಕ ಸಮಸ್ಯೆಯನ್ನು ಎದುರಿಸುತಿದ್ದೇವೆ ಎಂದರು.
ಇAಜಿನಿಯರ್ ಮನೆಗೆ ಶಾಲಾ ಮಕ್ಕಳ ಭೇಟಿ : ಇತ್ತೀಚಿನ ದಿನಮಾನದಲ್ಲಿ ಉತ್ತಮ ಶಿಕ್ಷಣದಿಂದ ಉದ್ಯೋಗ ಲಭಿಸಿ ಆರ್ಥಿಕವಾಗಿ ಸದೃಢರಾಗಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿ ವಿದ್ಯಾರ್ಥಿಗಳನ್ನು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ವಿಶ್ವನಾಥ್ ಅವರ ಮನೆಗೆ ಕರೆದುಕೊಂಡು ಹೋಗಿ ಅವರೊಂದಿಗೆ ಮನಬಿಚ್ಚಿ ಮಾತನಾಡಲಾಯಿತು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಇಂಜಿನಿಯರ್ ಎಲ್ಲದಕ್ಕೂ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣವನ್ನು ಪಡೆಯುತ್ತಾ ಉತ್ತಮ ಗುರಿಯನ್ನು ಇಟ್ಟುಕೊಂಡಿರಬೇಕು. ಶಿಕ್ಷಣದೊಂದಿಗೆ ಗುರಿ ಮುಟ್ಟಲು ಶ್ರಮಿಸಬೇಕು. ಉತ್ತಮ ಉದ್ಯೋಗ ದೊರೆತರೆ ದೊಡ್ಡ ಮನೆ, ಶ್ರೀಮಂತಿಕೆ, ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಜೀವನ ಸಾಧಿಸಲು ಶಿಕ್ಷಣ ಮತ್ತು ಗುರಿ ಪ್ರಮುಖವಾದವು ಎಂದು ತಿಳಿಸಿದರು.
ಪುರಸಭೆ ಅಧಿಕಾರಿ, ವೈದ್ಯರು, ಶಿಕ್ಷಕರ ಭೇಟಿ ಮಾಡಿದ ವಿದ್ಯಾರ್ಥಿಗಳು : ನಂತರ ವಿದ್ಯಾರ್ಥಿಗಳು ಪುರಸಭೆಯ ಮುಖ್ಯ ಅಧಿಕಾರಿಯದ ಸುರೇಶ್ ಶೆಟ್ಟರ್, ಸುರಕ್ಷಾ ಆಸ್ಪತ್ರೆಯ ವೈದ್ಯರು, ಮೈಲಾಪುರ ಸರ್ಕಾರಿ ಶಾಲೆಯ ಶಿಕ್ಷಕರನ್ನು ಭೇಟಿ ಮಾಡಿ ಶಿಕ್ಷಣ ಮತ್ತು ಉದ್ಯೋಗದ ಕುರಿತು ಚರ್ಚಿಸಿದರು.
ಸರಕಾರಿ ಮತ್ತು ಗೌರವ ಹುದ್ದೆಗಳು ದೊರೆಯುವುದು ಸುಲಭವಲ್ಲ, ಅಧಿಕ ಪರಿಶ್ರಮ ಮತ್ತು ಗುರಿ ಬಹಳ ಪ್ರಮುಖವಾದವು, ಬಡತನದಲ್ಲೂ ಶ್ರಮಪಟ್ಟು ಓದಿದ ನಂತರವೇ ಉದ್ಯೋಗ ಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಅಧಿಕ ಪರಿಶ್ರಮ ಪಟ್ಟರೆ, ಮುಂದಿನ ದಿನಮಾನದಲ್ಲಿ ಉತ್ತಮ ಜೀವನ ಸಾಗಿಸಲು ಸಾಧ್ಯ. ಬಡತನದಿಂದ ಮುಕ್ತವಾಗಲು ಹಾಗೂ ಉತ್ತಮ ಹುದ್ದೆಯನ್ನು ಏರಲು ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿದ್ಯೆ ಇಲ್ಲದವನ ಬಾಳು ಹದ್ದಿಗಿಂತಲೂ ಕೀಳು ಎನ್ನುವ ನಾನುಡಿಯಂತೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಸಾಮಾಜಿಕವಾಗಿ ರಾಜಕೀಯವಾಗಿ ಉನ್ನತ ಹುದ್ದೆಯನ್ನೇರಲು ಡಾಕ್ಟರ್ ಮತ್ತು ಇಂಜಿನಿಯರ್ ಶಿಕ್ಷಕರು ಇನ್ನಿತರ ಹುದ್ದೆಯನ್ನು ಪಡೆಯಲು ಉತ್ತಮ ಶಿಕ್ಷಣ ಗುರಿ ಅಗತ್ಯವಾಗಿದೆ ಎಂದು ಮನದಟ್ಟು ಮಾಡಿದರು. ನಂತರ ಅವರ ಮಾತಿಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ನಾನು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆಯನ್ನು ಏರುತ್ತೇನೆ. ಶ್ರಮ ಮತ್ತು ಶ್ರದ್ಧೆಯಿಂದ ಶಿಕ್ಷಣ ಪಡೆದು ತಂದೆ ತಾಯಿ ಕಲಿತ ಶಾಲೆಗೆ ಗೌರವ ತರುವ ಮಗನಾಗುತ್ತೇನೆ ಎಂದು ಶಪಥ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ ಮಲ್ಲಿಕಾರ್ಜುನ ಬೋಧಕ ಮತ್ತು ಬೋಧಕೇತರ ವರ್ಗ ಇದ್ದರು.