ಬಳ್ಳಾರಿ, ಏ.08 : ಕಳೆದ ಒಂದು ವರ್ಷದಿಂದ ಬೂದಿ ಮುಚ್ಚಿದ ಕೆಂಡದಂತೆ ಇದ್ದ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿನ ಎರ್ರಿತಾತಾ ದೇವಸ್ಥಾನದಲ್ಲಿ ಭಕ್ತ ಎರಿಯಪ್ಪ ವಿಗ್ರಹ ಪ್ರತಿಷ್ಟಾಪನೆಯ ವಿವಾದ ನಿನ್ನೆ ಸ್ಪೋಟಗೊಂಡು ಎರೆಡು ಗುಂಪುಗಳ ಮಧ್ಯೆ ಕಲ್ಲುತೂರಾಟ ಘರ್ಷಣೆ ನಡೆದು. ಅದನ್ನು ನಿಯಂತ್ರಿಸಲು ಹೋದ ಐದು ಜನ ಪೊಲೀಸರಿಗೂ ಗಾಯಗಳಾಗಿವೆ. ಗ್ರಾಮೀಣ ಠಾಣೆ ಪಿಎಸ್ ಐ ಗೆ ತೀವ್ರಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಗ್ರಾಮದಲ್ಲಿ ಮೌನ ಆವರಿಸಿದೆ.
ಅವಧೂತ ಎರಿತಾತ ಕುರುಬ ಸಮುದಾಯಕ್ಕೆ ಸೇರಿದವರು. ಆದರೆ ಆತನ ಭಕ್ತ ಎರಿಯಪ್ಪ ಪರಿಶಿಷ್ಟ ಜಾತಿಗೆ ಸೇರಿದಾತ. ಇವರಿಗೆ ಎಲ್ಲಾ ಸಮುದಾಯದವರು ಯಾವುದೇ ಬೆಧ ಭಾವ ಇಲ್ಲದೆ ಭಕ್ತರಾಗಿ ದೇವಸ್ಥಾನದ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು.
ದೇವಸ್ಥಾನದ ಸಂಪೂರ್ಣ ಹಕ್ಕು ಧರ್ಮಾಧಿಕಾರಿ ಎರಿಯಪ್ಪ ಕುಟುಂಬಕ್ಕೆ ಸೇತಿದ್ದಾಗಿದೆಯಂತೆ. ಭಕ್ತ ಎರಿಯಪ್ಪನ ವಿಗ್ರಹವನ್ನು ದೇವಸ್ಥಾನದಲ್ಲಿ ಸ್ಥಾಪನೆ ಮಾಡಲು ಪರಿಶಿಷ್ಟ ಜಾತಿ ಸಮುದಾಯ ಮುಂದಾಗಿದ್ದಕ್ಕೆ. ದೇವಸ್ಥಾನದಲ್ಲಿ ಬೇರೆಯ ವಿಗ್ರಹ ಬೇಡ ಎಂದು ಕುರುಬ ಸಮುದಾಯ ಆಕ್ಷೇಪ ವ್ಯಕ್ತಪಡಿಸಿತ್ತು.
ಆದರೆ ಎರಿಯಪ್ಪ ವಿಗ್ರಹವನ್ನು ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದನ್ನು ತೆರವುಗೊಳಿಸಲು ನ್ಯಾಯಾಲಯದಿಂದ ಆದೇಶ ತಂದು ವಿಗ್ರಹ ತೆರವುಗೊಳಿಸಿದ್ದು. ಪರಿಶಿದಷ್ಟ ಜಾತಿ ಸಮುದಾಯಕ್ಕೆ ಅಸಮಾಧಾನ ತಂದಿತ್ತು.
ನಮ್ಮ ಸಮುದಾಯದ ಭಕ್ತ ಬೇಡ ಎಂದರೆ ನಮ್ಮ ಹಣ ದೇವಸ್ಥಾನದ ಗೋಪುರ ಕಟ್ಟಲು ಯಾಕೆ ಬೇಕು. ನಾವು ಕೊಟ್ಟ ದೇಣಿಗೆ ನಮಗೆ ಕೊಟ್ಟು ಬಿಡಿ ಎಂದು ಎಸ್ಸಿಗಳ ಕೇಳಿದ್ದು ಅದಕ್ಕೆ ಕುರುಬ ಸಮುದಾಯದ ಮುಖಂಡ ಹನುಮಪ್ಪ ಕೊಡಲು ಆಗುವುದಿಲ್ಲ ಏನ್ ಮಾಡ್ತೀರಿ ಎಂದು ಹೇಳಿದರಂತೆ.
ಹಾಗಾದರೆ ದೇವಸ್ಥಾನ ಧರ್ಮಾಧಿಕಾರ ಹಕ್ಕಿನಲ್ಲಿದೆ ನೀವು ದೇವಸ್ಥಾನಕ್ಕೆ ಬರಬೇಡಿ ಎಂದು ಹನುಮಪ್ಪಗೆ ಹೇಳಿದರಂತೆ ಇದರಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿದೆ. ಬಡಿಗೆಗಳನ್ನು ಹಿಡಿದು ದೇವಸ್ಥಾನದ ಆವರಣದಲ್ಲಿ ಹೊಡೆದಾಟಕ್ಕೆ ಸಿದ್ದರಾಗಿದ್ದಾರೆ.
ವಿಷಯ ತಿಳಿದು ಗ್ರಾಮೀಣ ಪೊಲೀಸರು ತೆರಳಿ ಎಲ್ಲರಿಗೂ ದೇವಸ್ಥಾನದಿಂದ ಹೊರ ಹೋಗಲು ಹೇಳಿದ್ದಾರೆ. ಹೊರ ಬಂದಾಗ ಕಲ್ಲು ತೂರಾಟ ನಡೆದಿದೆ. ಇದನ್ನು ನಿಯಂತ್ರಿಸಲು ಹೋದ ಗದರಾಮೀಣ ಠಾಣೆಯ ಪಿಎಸ್ ಐ ಸಂತೋಷ್ ಅಚರ ತಲೆಗೆ, ಸಿಪಿಐ ಸತೀಶ್ ಅವರ ಕಾಲಿಗೆ ಅಲ್ಲದೆ ಇನ್ನೂ ಮೂರು ಜನ ಪೇದೆಗಳಿಗೆ ಕಲ್ಲು ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.
ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಾಗ ಹೆಚ್ಚಿನ ಪೊಲೀಸ್ ಸಿವ್ಬಂದಿ ಜೊತೆಗೆ ಎಸ್ಪಿ ಮತ್ತು ಎಎಸ್ಪಿ ಭೇಟಿ ನೀಡಿ
ಎರಡು ಗುಂಪಿನ ಕಡೆಯಿಂದ ರಾತ್ರಿ ಮನೆಗಳಿಗೆ ನುಗ್ಗಿ ಸಿಕ್ಕ ಸಿಕ್ಕವರನ್ನು ಪೊಲೀಸರು ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆ ಮಾಡಿ ಮನೆಗೆ ಕಳುಹಿಸಿದ್ದಾರಂತೆ. ಚುನಾವಣೆ ಇರುವುದರಿಂದ ಸದ್ಯ ಯಾವುದೇ ಗುಂಪಿನ ಮೇಲೆ ಕ್ರಮಕೈಗೊಳ್ಳದಂತೆ ಬಂದಿರುವ ಆದೇಶದಂತೆ ಪೊಲೀಸರು ತಮಗೆ ಗಾಯಗಳಾದರೂ ಯಾರನ್ನೂ ಬಂಧಿಸಿಲ್ಲ ಎಂಬ ಮಾಹಿತಿ ಇದೆ.
ಸಧ್ಯ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ ಪೊಲೀಸರು ಬಂಧಿಸುತ್ತಾರೆಂಬ ಭಯದಿಂದ ಗ್ರಾಮದಲ್ಲಿ ಜನರಿಲ್ಲದೆ ಬಿಕೋ ಎನ್ನುವಂತಾಗಿದೆ.
ಎರೆಡು ಸಮುದಾಯಗಳ ಮಧ್ಯೆ ಜನಪ್ರತಿನಿಧಿಗಳು ಶಾಂತಿ ಸಭೆ ನಡೆಸಿ ಸಮನ್ವಯತೆ ತರಬೇಕಾದ ಅವಶ್ಯಕತೆ ಇದೆ. ಆದರೆ ಆಡಳಿತದಲ್ಲಿರುವವರ ಪಕ್ಷಕ್ಕೆ ಎರೆಡೂ ಸಮುದಾಯಗಳು ಬೇಕಾಗಿರುವುದರಿಂದ ಈ ಬಗ್ಗೆ ಯಾರೂ ಮಧ್ಯ ಪ್ರವೇಶಿಸಲು ಮುಂದಾಗಿಲ್ಲ ಎನ್ನಬಹುದು.