ಸುವರ್ಣವಾಹಿನಿ ಸುದ್ದಿ
ಬಳ್ಳಾರಿ, ಜ.೧೭: ಕಾಂತರಾಜು ಆಯೋಗದ ವರದಿಯ ಜಾರಿಗೆ ಆಗ್ರಹಿಸಿ ಜ.೨೮ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಯಶಸ್ವಿಗೊಳಿಸಲು ತಾಲ್ಲೂಕು ಮಟ್ಟದ ಸಭೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಗಾದಿಲಿಂಗನಗೌಡ ಅವರು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಬಳ್ಳಾರಿ ನಗರದ ಜಿಲ್ಲಾ ಗೊಲ್ಲರ ಸಂಘದ ಸಭಾಂಗಣದಲ್ಲಿ ನಡೆದ ಎಲ್ಲಾ ಶೋಷಿತ ಸಮುದಾಯಗಳ ಮುಖಂಡರ ಸಭೆಯಲ್ಲಿ ಹಲವು ತೀರ್ಮಾನ ಕೈಗೊಳ್ಳಲಾಯಿತು.
ಸ್ಥಳೀಯ ಶಾಸಕರ ಸಹಕಾರದೊಂದಿಗೆ ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಶೋಷಿತ ಸಮುದಾಯದ ಸಂಘ, ಸಂಸ್ಥೆಗಳ, ಪ್ರಗತಿಪರ ಹೋರಾಟಗಾರರನ್ನು ಸಂಪರ್ಕಿಸಿ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಬೇಕು. ಜ.೨೮ ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ತೀರ್ಮಾನಿಸಲಾಯಿತು. ಪ್ರಚಾರ ಸಮಿತಿಯನ್ನು ರಚಿಸಲಾಗಿದ್ದು, ಸಮಾವೇಶಕ್ಕೆ ಸಂಬAಧಿಸಿದ ಪ್ರಚಾರ ಕಾರ್ಯದ ಜವಾಬ್ದಾರಿಯನ್ನು ಬಳ್ಳಾರಿ ಮುಸ್ಲಿಂ ಅಂಜುಮನ್ (ಸಾಮಾಜಿಕ ಸಂಘಟನೆ) ಅಧ್ಯಕ್ಷ ಇಮಾಮ್ ಗೋಡೆಕಾರ ಹಾಗೂ ಮಾನವ ಬಂಧುತ್ವ ವೇದಿಕೆ ಸಂಚಾಲಕ ಸಂಗನಕಲ್ಲು ವಿಜಯಕುಮಾರ್ ಅವರಿಗೆ ವಹಿಸಲಾಯಿತು.
ಬಳ್ಳಾರಿ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯ ಜನರು ಸಮಾವೇಶದಲ್ಲಿ ಭಾಗವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಾ.ಗಾದಿಲಿಂಗನಗೌಡ ಮುಖಂಡರಲ್ಲಿ ಮನವಿ ಮಾಡಿದರು. ಮುಂಡ್ರಿಗಿ ನಾಗರಾಜ, ಗಾದಿಲಿಂಗನಗೌಡ,ಬಿ.ಶ್ವೇತಾ ಸೋಮು,ಉಪ ಮೇಯರ್ ಜಾನಕಮ್ಮ,ವಿ.ಎಸ್.ಶಿವಶಂಕರ್, ಹುಮಾಯೂನ್ ಖಾನ್, ಉರುಕುಂದಪ್ಪ, ಜಾಸ್ವ, ಗಾದೆಪ್ಪ, ಕುಡುತಿನಿ ರಾಮಾಂಜನಿ, ತಳವಾರ ದುರ್ಗಪ್ಪ, ಜೋಗಿನ ಚಂದ್ರಪ್ಪ, ಪಾಂಡುರAಗ, ರಫಿ, ಮಾರೇಶ, ಲೋಕೇಶ್, ಕಪ್ಪಗಲ್ಲು ಓಂಕಾರಪ್ಪ, ಚಿದಾನಂದಪ್ಪ, ಗುಜರಿ ಬಸವರಾಜ್, ದೇವಿ ನಗರ್ ಪೆದ್ದಣ್ಣ, ಚಂಪಾ ಚೌಹಾಣ್, ಸಂಗನಕಲ್ಲು ವಿಜಯ್ ಕುಮಾರ್, ಲೋಕೇಶ್ ಯಾದವ್, ಇಮಾಮ್ ಗೋಡೆಕಾರ ಸೇರಿದಂತೆ ಮೊದಲಾದವರು ಹಾಜರಿದ್ದರು.
(ಬಾಕ್ಸ್)
ಸಮಾವೇಶ ಯಶಸ್ಸಿಗೆ ಅಗತ್ಯ ಸಹಕಾರ ನೀಡುವೆ: ಶಾಸಕ ನಾರಾ ಭರತ್ ರೆಡ್ಡಿ
ಜ.೨೮ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದ ಯಶಸ್ಸಿಗಾಗಿ ಅಗತ್ಯ ಸಹಕಾರ ನೀಡುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು. ಗಾಂಧಿನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ತಮ್ಮನ್ನು ಭೇಟಿ ನೀಡಿದ ಶೋಷಿತ ಸಮುದಾಯಗಳ ಸಂಘಟನೆಗಳ ಮುಖಂಡರಿಗೆ ಅವರು ಭರವಸೆ ನೀಡಿದರು. ಸಮುದಾಯಗಳ ಜಾಗೃತಿ ಯಶಸ್ವಿಯಾಗಲಿ, ಬಳ್ಳಾರಿ ಜಿಲ್ಲೆಯಿಂದ ಚಿತ್ರದುರ್ಗಕ್ಕೆ ತೆರಳುವ ಜನರಿಗೆ ಅಗತ್ಯ ಅನುಕೂಲ ಮಾಡಿ ಕೊಡಲು ನನ್ನಿಂದಾಗುವ ನೆರವು, ಸಹಕಾರ ನೀಡುವೆ ಎಂದು ತಿಳಿಸಿದರು.