ಬೆಂಗಳೂರು: ರಾಜ್ಯದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಕನಕಪುರದಲ್ಲಿ ಆನೆದಾಳಿಯಲ್ಲಿ ರೈತ ಮೃತಪಟ್ಟಿರುವ ಘಟನೆ ಭಾನುವಾರ ವರದಿಯಾಗಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಈ ಘಟನೆ ನಡೆದಿದ್ದು, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮುಗ್ಗೂರು ಗ್ರಾಮದ ಬಳಿ ಕಾಡಾನೆ ದಾಳಿ ಮಾಡಿದೆ. ಕನಕಪುರದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾಗಿದ್ದಾರೆ. ರಾಜು (67) ಮೃತ ದುರ್ದೈವಿ.. ಆನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅಸ್ವಸ್ಥರಾಗಿದ್ದ ರೈತ ರಾಜು ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕನಕಪುರ ತಾಲೂಕಿನಲ್ಲಿ ಕಾಡಾನೆ ದಾಳಿ ಹೆಚ್ಚಾಗಿದೆ.
ಅರಣ್ಯ ವಾಚರ್ ಗಳನ್ನೇ ಅಟ್ಟಾಡಿಸಿದ್ದ ಆನೆ
ಇತ್ತೀಚೆಗೆ ಕೊಡಗಿನ ಕಾಜೂರು ಅರಣ್ಯ ಪ್ರದೇಶದಿಂದ ಬಂದ ಮದವೇರಿದ ಕಾಡಾನೆಯು ದಾಳಿ ಮಾಡಿದೆ. ಪ್ರಾಣಪಾಯದಿಂದ ಆರ್ಆರ್ಟಿ ಸಿಬ್ಬಂದಿ (RRT), ಅರಣ್ಯ ರಕ್ಷಕ ಪಾರಾಗಿದ್ದಾರೆ. ಬೆಳಗ್ಗೆ ಕಾಡಾನೆಯು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್ನಲ್ಲಿತ್ತು. ಈ ಮಾಹಿತಿ ತಿಳಿದು ಸ್ಥಳಕ್ಕೆ ಆರ್ಆರ್ಟಿ ಮತ್ತು ಅರಣ್ಯ ಸಿಬ್ಬಂದಿ ತೆರಳಿದ್ದರು. ಈ ವೇಳೆ ಸಿಬ್ಬಂದಿಯನ್ನು ಕಂಡು ಆನೆಯು ದಾಳಿ ಮಾಡಿ, ಬೈಕ್ ಜಖಂಗೊಳಿಸಿದೆ. ನಂತರ ಎಸ್ಟೇಟ್ನಿಂದ ಅರಣ್ಯಕ್ಕೆ ವಾಪಸ್ ತೆರಳಿದೆ. ಅದೃಷ್ಟವಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.