ಬಳ್ಳಾರಿ, ಮಾ.14: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನನ್ನನ್ನು ಸೋಲಿಸುವ ಮೂಲಕ ರಾಜಕೀಯದಿಂದ
ಅಜ್ಞಾತವಾಸಕ್ಕೆ ಕಳಿಸಿತ್ತು. ಈಗ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷ ಟಿಕೆಟ್ ನೀಡುವ ಮೂಲಕ ಅಜ್ಞಾತವಾಸ ಮುಗಿದಿದೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರಿಂದ ನಗರದ ತಮ್ಮನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ನನ್ನ ಪ್ರೀತಿ ಮಾಡದ ವ್ಯಕ್ತಿ ಇರಲಾರರು ಆದರೂ ಕಳೆದ ಬಾರಿ ಸೋಲು ಉಂಟಾಯ್ತು.
ಆ ಚುನಾವಣೆಯಲ್ಲಿ ನನ್ನ ವಿರುದ್ದ
ದ್ವೇಷದ, ಮೋಸದ ರಾಜಕಾರಣ ಮಾಡಿದವರಿಗೆ ಜನತೆ ಬುದ್ದಿ ಕಲಿಸಲಿದ್ದಾರೆಂದರು. ಚಕ್ರವ್ಯೂಹದಲ್ಲಿ ಸಿಲಿಕಿಸಲಿದೆಂಬ ವಿರೋಧಿಗಳಿಗೆ ನಮ್ಮ ಕಾರ್ಯಕರ್ತರು, ಜನತೆ ಗೆಲುವಿನ ಮೂಲಕ ಪಾಠಕಲಿಸಲಿದ್ದಾರೆ.
ಈಗ ದೇಶದ ಬಹುತೇಖ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಎಂಬ ಸಂಕಲ್ಪ ಮಾಡಿದೆ. ಬಿಜೆಪಿ 370 ಕ್ಕೂ , ಎನ್.ಡಿ.ಎ 400 ಕ್ಕೂ ಹೆಚ್ಚು ಸ್ಥಾನ ಗಳಿಸುವ ಗುರಿ ಹೊಂದಿದೆ. ಮೋದಿಯವರ ಕಳೆದ ಹತ್ತು ವರ್ಷಗಳ ಆಡಳಿತ ಮೂರನೇ ಅವಧಿಯಲ್ಲಿ ಮತ್ತಷ್ಟು ಜನ ಬೆಂಬಲ ದೊರೆಯಲಿದೆಂದರು.
ಒಂದು ಉಪ ಚುನಾವಣೆ ಬಿಟ್ಟರೆ 2004 ರಿಂದ ಇಲ್ಲಿಯವರೆಗೆ ಬಿಜೆಪಿ ಅಭ್ಯರ್ಥಿಗಳು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆಯಿಂದ ವಿಜಯ ಸಾಧಿಸಲಿದೆಂದರು.
ಜನಾರ್ಧನರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಲಾರೆ ಎನ್ನುತ್ತಲೇ, ನನ್ನ ಸೋಲಿಸುವುದು ಯಾರ ಕೈನಲ್ಲಿಲ್ಲ. ನಾಯಕರು ಸೋಲಿಸಬೇಕು ಎನ್ನಬಹುದು, ಆದರೆ ಜನ ಶಕ್ತಿ ಮುಂದೆ ಅವರ ಆಶಯ ಈಡೇರದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೆ ವಿಧಾನಸಭೆ ಚುನಾವಣೆ ಬಂದರೆ ಲೋಕಸಭೆಗೆ ರಾಜೀನಾಮೆ ಕೊಡಬೇಕಾದರಡ ಆಗ ಪಕ್ಷ ಹೇಳಿದಂತೆ ನಡೆದುಕೊಳ್ಳುವೆ. ಈ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಜೊತೆ ಕೆಲಸ ಮಾಡುವುದು ನನ್ನ ಪುಣ್ಯ ಎಂದರು.
ಸುದ್ದಿಗೋಷ್ಟಿಯಲ್ಲಿ ಡಾ.ಎಸ್.ಜೆ.ವಿ.ಮಹಿಪಾಲ್, ಕೆ.ಎ.ರಾಮಲಿಂಗಪ್ಪ, ಗೋನಾಳ್ ಮುರಹರಗೌಡ, ಹೆಚ್.ಹನುಮಂತಪ್ಪ, ಡಾ.ಅರುಣಾ ಕಾಮೇನೇನಿ, ನೂರ್ ಭಾಷಾ, ಗಣಪಾಲ್ ಐನಾಥರೆಡ್ಡಿ, ಪಾಲಣ್ಣ, ಸಿ.ಇಬ್ರಾಹಿಂ ಬಾಬು, ಸುರೇಖ ಮಲ್ಲನಗೌಡ, ಕೆ.ಹನುಮಂತಪ್ಪ, ಓಬಳೇಶ ಮತ್ತಿತರರು ಇದ್ದರು.