ಬಳ್ಳಾರಿ,ಆ.20 : ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ ನಾಗೇಂದ್ರ ಅವರ ಕಚೇರಿಯಲ್ಲಿ ಭಾರತದ ಶಿಲ್ಪಿ ಆಧುನಿಕ ಭಾರತದ ನಿರ್ಮಾಣ ಕರ್ತೃ ಭಾರತ ರತ್ನ ಭಾರತದ ಮಾಜಿ ಪ್ರಧಾನಮಂತ್ರಿಗಳ ದಿವಂಗತ ರಾಜೀವ್ ಗಾಂಧಿ ರವರ 81 ನೇ ಜನ್ಮದಿನಾಚರಣೆ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಹಿಂದುಳಿದ ವರ್ಗದ ನೇತಾರರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ದೇವರಾಜ್ ಅರಸುರವರ 110 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಮತ್ತು ಶಾಸಕರಾದ ಸನ್ಮಾನ್ಯ ಬಿ. ನಾಗೇಂದ್ರರವರ ಕಚೇರಿಯಲ್ಲಿ ಮಹಾನ್ ನೇತಾರರಾದ ಭಾರತದ ಮಾಜಿ ಪ್ರಧಾನ ಮಂತ್ರಿಗಳು ದಿವಗತ ರಾಜೀವ್ ಗಾಂಧಿ ರವರ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ದಿವಂಗತ ದೇವರಾಜ್ ಅರಸುರವರ ಜನ್ಮದಿನದ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಸಲ್ಲಿಸುವುದರ ಮುಖಾಂತರ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉದ್ಘಾಟಿಸಿದರು.
ಪ್ರಸ್ತಾವಿಕವಾಗಿ ಮಾಜಿ ಉಪ ಮಹಾಪೌರರಾದ ಬೆಣಕಲ್ ಬಸವರಾಜ ಗೌಡರವರು ಮಾತನಾಡುತ್ತಾ ಈ ಮಹಾನ್ ನಾಯಕರನ್ನು ನೆನೆಯುವುದರ ಮುಖಾಂತರ ಹಾಗೂ ಅವರ ತತ್ವ ಆದರ್ಶಗಳನ್ನು ಪಾಲಿಸುವ ಮುಖಾಂತರ ಪಕ್ಷ ಮತ್ತು ದೇಶವನ್ನು ಕಟ್ಟುವುದಕ್ಕೆ ಸಾಧ್ಯ ಎಂದರು ಸನ್ಮಾನ್ಯ ಬಿ. ನಾಗೇಂದ್ರರವರ ಕಚೇರಿಯಲ್ಲಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮುಖಂಡರು ಸರ್ಕಾರದ ನಾಮ ನಿರ್ದೇಶನ ಸದಸ್ಯರು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಕಾರ್ಯಕರ್ತರ ಸಮ್ಮುಖದಲ್ಲಿ ಸರಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಂತಾರ ಪಕ್ಷವನ್ನು/ ಪಕ್ಷದ ಸಂಘಟನೆಯನ್ನು ಸದೃಢಗೊಳಿಸಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಮುಂಡರಗಿ ನಾಗರಾಜ್ ರವರು ದೇಶಕ್ಕೆ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿರವರ ಕೊಡುಗೆ ಅಪಾರ ಅವರು ದೇಶಕ್ಕೆ ಹುತಾತ್ಮರಾದ ಯೋಧ, ಭಾರತಕ್ಕೆ ಅಭಿವೃದ್ಧಿಯ ಪಥದಲ್ಲಿ ನಡೆಸಿದ ದೂರದೃಷ್ಟಿಯ ರಾಜಕಾರಣಿ, ಬಡವ ಬಲ್ಲಿದ ಜನರ ವರ್ಗದ ನಾಡಿ ಮಿಡಿತ ಅರಿತ ನಾಯಕ ಎಂದು ಹೇಳಿದರು, ದಿವಂಗತ ಕರ್ನಾಟಕ ಮಾಜಿ ಮುಖ್ಯಮಂತ್ರಿಗಳು ದೇವರಾಜ್ ಅರಸ್ ರವರು ಅಭಿವೃದ್ಧಿ ಆಡಳಿತದ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆ. ಅರಸುರವರು ಜೀವನ ಪೂರ್ತಿ ಬಡವರ ಪರ ಮಿಡಿದ ಹೃದಯವು ಅದು ಎಂದು ಗುಣಗಾನ ಮಾಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಪಕ್ಷದ ಮುಖಂಡರು ದಲಿತ ಹೋರಾಟಗಾರರು ಗಂಗಾಧರ್ ರವರು, ಶಾಸಕರ ಅನುಪಸ್ಥಿತಿಯಲ್ಲಿ ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ತುಂಬಾ ಸಂತೋಷಕರವಾದ ವಿಚಾರ ಎಂದರು.
ಡಿಸಿಸಿ ಉಪಾಧ್ಯಕ್ಷರಾದ ಯತೀಂದ್ರ ಗೌಡರವರು ಮಾತನಾಡುತ್ತಾ ದೇವರಾಜ್ ಅರಸ್ ಮತ್ತು ರಾಜೀವ್ ಗಾಂಧಿ ರವರ ಚಿಂತನೆಗಳು ಆದರ್ಶಗಳನ್ನು ಅಳವಡಿಸಿಕೊಂಡು ಹೋಗಬೇಕಾಗಿರುವುದು ಇಂದಿನ ಯುವಕರ ಕರ್ತವ್ಯ. ರಾಜೀವ್ ಗಾಂಧಿಯವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧ, ದೇವರಾಜ್ ಅರಸುರವರು ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಿ ಬಡವರಿಗೆ ಭೂಮಿ ಹಂಚಿದ ಬಡವರ ನಾಯಕ ಹಿಂದುಳಿದ ವರ್ಗಗಳ ನಾಯಕ ಎಂದು ಮರೆಯಲಾಗದ ನಾಯಕ ಅದು ದೇವರಾಜ್ ಅರಸು ಎಂದು ಹೇಳಿದರು.
ತಾಲೂಕು ಗ್ಯಾರೆಂಟಿ ಯೋಜನಾ ಸಮಿತಿ ಅಧ್ಯಕ್ಷರು ಗೋನಾಳು ನಾಗಭೂಷಣ ಗೌಡ ನಮ್ಮ ನಾಗೇಂದ್ರ ಅವರು ಅಹಿಂದ ನಾಯಕರು ಅವರು ಎಲ್ಲಾ ವರ್ಗದ ಜನರನ್ನು ಜೊತೆಗೆ ತೆಗೆದುಕೊಂಡು ಹೋಗುವ ಎಲ್ಲಾ ವರ್ಗಗಳ ಜನ ನಾಯಕ ಇಂದಿಗೂ ಅವರ ಕ್ಷೇತ್ರದಲ್ಲಿ ಯಾವುದೇ ತರಹ ಗಲಭೆ ಗಲಾಟಿ ದೌರ್ಜನ್ಯಗಳು ಅಹಿತಕರ ಘಟನೆಗಳನ್ನು ನಿರ್ಮೂಲನೆ ಮಾಡುವುದರಲ್ಲಿ ನಾಗೇಂದ್ರರವರು ಮೊದಲ ಸಾಲಿನಲ್ಲಿ ನಿಲ್ಲುವ ನಾಯಕರೆಂದರು.
ಈ ಸಂದರ್ಭದಲ್ಲಿ ಇನ್ನು ಅನೇಕ ಮುಖಂಡರು ಮಾತನಾಡುತ್ತಾ ,”ಇಂದು ನಮ್ಮ ಮುಂದೆ ದೇವರಾಜ್ ಅರಸು ನಮ್ಮೆದುರಿಗೆ ಇಲ್ಲದಿರಬಹುದು,ಆದರೆ ಅವರ ವ್ಯಕ್ತಿತ್ವದ ಅವರ ಚಿಂತನೆಗಳನ್ನು ಅಳವಡಿಸಿಕೊಂಡಿರುವಂತಹ ವ್ಯಕ್ತಿ ಸನ್ಮಾನ್ಯ ನಾಗೇಂದ್ರರವರು. ದೇವರಾಜ್ ಅರಸುರವರ ವ್ಯಕ್ತಿತ್ವದ ಚಿಂತನೆಗಳನ್ನು ನಾವುಗಳು ಸರಳ ಸಜ್ಜನಿಕೆ ವ್ಯಕ್ತಿತ್ವದ ವ್ಯಕ್ತಿಯಾದ ನಾಗೇಂದ್ರ ರವರಲ್ಲಿ ಕಾಣಬಹುದು ಎಂದು ಹೇಳಿದರೆ ತಪ್ಪಾಗಲಾರದು. ಸನ್ಮಾನ್ಯ ನಾಗೇಂದ್ರರವರು ಎಲ್ಲಾ ವರ್ಗಗಳು ಹಾಗೂ ತಳಸಮುದಾಯದ ಜಾತಿಗಳನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಹಿಂದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ದೇವರಾಜ್ ಅರಸುರವರ ಹಾದಿಯಲ್ಲಿ ನಡೆಯುವ ನಾಗೇಂದ್ರರವರೆಂದು ಎಲ್ಲಾ ಮುಖಂಡರು ಸ್ಮರಿಸಿದರು.
“ಸನ್ಮಾನ್ಯ ನಾಗೇಂದ್ರರವರನ್ನು ಜಿಲ್ಲೆಯ ಅಹಿಂದ ನಾಯಕರೆಂದು ಕರೆದರು ತಪ್ಪಾಗಲಾರದು”
ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷದ ಮುಖಂಡರು ದಲಿತ ಹೋರಾಟಗಾರರಾದ ಎ. ಮಾನಯ್ಯ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಡಾ. ಗಾದಿಲಿಂಗನಗೌಡರು, ಜಿಲ್ಲಾ ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿದಾನಂದಪ್ಪ ಯಾದವ್, ಕಾಂಗ್ರೆಸ್ ಹಿರಿಯ ಮುಖಂಡರಾದ ಎಲ್.ಮಾರಣ್ಣ, ಯರಕುಲ ಸ್ವಾಮಿ, ಕಾಂಗ್ರೆಸ್ ಪಕ್ಷದ ಮುಖಂಡರು ಪಿ ಜಗನ್ನಾಥ್, ವಿಶ್ವಕರ್ಮ ಮುಖಂಡರು ಚಂದ್ರು, ಕೊಳಗಲ್ ಎರ್ರೀಸ್ವಾಮಿ, ಬಗರು ಹುಕುಂ ಸಮಿತಿ ಅಧ್ಯಕ್ಷರಾದ ಸಿದ್ದಮ್ಮನಹಳ್ಳಿ ತಿಮ್ಮನಗೌಡ, ವಿ.ಕೆ. ಬಸಪ್ಪ, ಭೋವಿ ಸಮುದಾಯದ ಅಧ್ಯಕ್ಷರಾದ ವಿ. ರಾಮಾಂಜನಿ, ಮಡಿವಾಳ ಸಮಾಜದ ಮುಖಂಡರಾದ ಧನಂಜಯ್ ಹಮಲ್, ಪದ್ಮಶಾಲಿ ಮುಖಂಡರಾದ ಶ್ರೀರಾಮರಾಜು, ಮಹಾನಗರ ಪಾಲಿಕೆ ನಾಮ ನಿರ್ದೇಶನ ಸದಸ್ಯರು ಸಮೀರ್, ಕೌಲ್ ಬಜಾರ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಲ್ಲಾಭಕಾಶ್, ಮಹಾನಗರ ಪಾಲಿಕೆ ಸದಸ್ಯರು ಆಸಿಫ್ ಭಾಷಾ, ನಾಗಲಕೆರೆ ಗೋವಿಂದು, ಮಾಜಿ ಮಹಾನಗರ ಪಾಲಿಕೆ ಸದಸ್ಯರು ನಾಗರಾಜ, ಕುಡುತಿನಿ ರಾಮಾಂಜನಿ. ಎರಗುಡಿ ಮಲ್ಲಯ್ಯ, ಪರಿಶಿಷ್ಟ ಪಂಗಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕೊಳಗಲ್ಲು ಹುಲಿಯಪ್ಪ, ಅಲ್ಲಿಪುರ ವೆಂಕಟಸ್ವಾಮಿ, ಜಿ ಎನ್ ಹಳ್ಳಿ ಮಲ್ಲಿಕಾರ್ಜುನ, ಎಪಿಎಂಸಿ ನಾಮ ನಿರ್ದೇಶನ ಸದಸ್ಯರಾದ ಅಕ್ಕಿ ಶಿವಕುಮಾರ್, ಮಲ್ಲೇಶ್ವರಿ, ಮೀನಳ್ಳಿ ವೆಂಕಟೇಶ್, ಶ್ರೀನಿವಾಸ್ ಭಂಡಾರಿ, ಜೋಗಿನ ಚಂದ್ರಪ್ಪ, ಯಾಟೆ ಗಾದಿಲಿಂಗಪ್ಪ, ಅಸುಂಡಿ ಅನಮೇಶ್, ಅಸುಂಡಿ ಪರಮೇಶ್, ಅರುಣ್ ಕುಮಾರ್, ಶ್ರೀಕಾಂತ್, ವಣೆನೂರು ಶ್ರೀನಿವಾಸ್, ಸಿರವಾರ ಗಾದಿಲಿಂಗ, ಉಮೇಶ್ ಗೌಡ ಯೂತ್ ಕಾಂಗ್ರೆಸ್ ಅಧ್ಯಕ್ಷರು, ಜೋಗಿನ ವಿಜಯಕುಮಾರ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರು ಸಂಗನಕಲ್ ವಿಜಯಕುಮಾರ್, ಹಾಗೂ ಶಾಸಕರ ಎಲ್ಲಾ ಆಪ್ತ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಮತ್ತು ಇನ್ನು ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು.