ಬಳ್ಳಾರಿ,ಮೇ.02: ನಗರದ ತೇರು ಬೀದಿಯಲ್ಲಿರುವ ಚಿನ್ನಾಭರಣಗಳ ಮಾರಾಟ ಮಳಿಗೆ ಕಲ್ಯಾಣಿ ಜ್ಯುವೆಲರ್ಸ್ನಲ್ಲಿ ಗುರುವಾರ ಸಂಜೆ ಎಸಿ ಬ್ಲಾಸ್ಟ್ ಆಗಿ ನಾಲ್ವರು ತೀವ್ರ ಗಾಯಗೊಂಡ ಘಟನೆ ಜರುಗಿದೆ.
ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಎಸಿ ಯಂತ್ರ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿ ಈ ಘಟನೆ ಸಂಭವಿಸಿದ್ದು, ಸ್ಫೋಟದಿಂದಾಗಿ ಕಿಟಕಿ ಗಾಜುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಜೊತೆಗೆ ನಾಲ್ಕು ಜನರಿಗೆ ಗಂಭೀರವಾದ ಸುಟ್ಡ ಗಾಯವಾಗಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಇದ್ದಕ್ಕಿದ್ದAತೆ ಜೋರಾದ ಶಬ್ದ, ಹಾಗೂ ಹೊಗೆಯಿಂದಾಗಿ ಮಳಿಗೆಯಲ್ಲಿದ್ದ ಜನರಿಗೆ ಶಾಕ್ ಆಗಿದೆ. ಮಳಿಗೆಯ ಸಿಬ್ಬಂದಿಯೇ ಗಾಯಗೊಂಡವರನ್ನು ಹೊರಗಡೆ ಎತ್ತಿಕೊಂಡು ಬಂದಿರುವ ದೃಶ್ಯಗಳು ಘಟನೆಯ ತೀವ್ರತೆಗೆ ಸಾಕ್ಷಿಯಾಗಿವೆ. ನಡೆದ ಘಟನೆಯಿಂದ ಮಳಿಗೆಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ತೀವ್ರ ಆಘಾತಕ್ಕೊಳಗಾಗಿದ್ದು ಕಂಡು ಬಂದಿತು.
ಗಾಯಗೊಂಡಬವರನ್ನು ಮಳಿಗೆಯ ಸಿಬ್ಬಂದಿಯೇ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ನಗರ ಡಿವೈಎಸ್ಪಿ, ಬ್ರೂಸ್ಪೇಟೆ ಸರ್ಕಲ್ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಆಗಮಿಸಿ ಕ್ರಮ ಕೈಗೊಂಡಿದ್ದಾರೆ. ಘಟನೆಯನ್ನು ನೋಡಲು ನೂರಾರು ಜನ ಸೇರಿದ್ದರು.