ಬಳ್ಳಾರಿ,ಸೆ.21: “ನಾಲ್ಕು ವರ್ಷ ಶ್ರಮಿಸಿದರೆ, ನಲವತ್ತು ವರ್ಷ ಸಂತೋಷದಿoದ ಜೀವನ ಸಾಗಿಸಬಹುದು” ಎಂದು ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ನ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್ ಅವರು ಇಂದು ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ನಮ್ಮ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಾಘವೇಂದ್ರ ಪ್ರಸಾದ್ ಮತ್ತು ವೀರೇಶ್ ಡಿ.ಆರ್ ಇತ್ತೀಚಿನ ಇಸ್ರೋದಿಂದ ಉಡಾವಣೆಯಾದ ಚಂದ್ರಯಾನ-3 ಪ್ರಾಜೆಕ್ಟ್ನಲ್ಲಿ ಪ್ರಮುಖವಾದ ಕೊಡುಗೆ ನೀಡಿದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿ, ಇಂತಹ ಸಾಧನೆಗಳಿಗೆ ಕಠಿಣ ಪರಿಶ್ರಮ ಮತ್ತು ಸಮಯ ಬಳಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್, ತಮ್ಮ ಮಾತುಗಳಲ್ಲಿ, ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ತರಬೇತಿ, ಮತ್ತು ಉದ್ಯೋಗಾವಕಾಶಗಳನ್ನು ವಿವರಣೆಗೂಡಿಸಿದರು. ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಶ್ರೇಷ್ಠ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಮುಂದುವರಿಯುವoತೆ ತಿಳಿಸಿದರು. ವಿದ್ಯಾರ್ಥಿಗಳನ್ನು ಕಾಲೇಜಿನ ಅತಿದೊಡ್ಡ ಸಂಪತ್ತಾಗಿ ಪರಿಗಣಿಸಿ, ಪೋಷಕರಿಗೆ ಸಂಸ್ಥೆಯ ಶ್ರೇಯಸ್ಸು ಮತ್ತು ಸಮರ್ಪಣೆಯ ಮಹತ್ವವನ್ನು ಸಾರಿದರು.
ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಸ್. ಜೆ. ವಿ. ಮಹಿಪಾಲ್, ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು ಹೇಗೆ ಸ್ಥಾಪನೆಗೊಂಡವು ಎಂಬುದರ ಕುರಿತು ವಿವರವಾಗಿ ಮಾತನಾಡಿ, ಅವರು ಈ ಸಂಸ್ಥೆಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರು, ದಾತರು, ಮತ್ತು ಸಮಾಜದ ಗಣ್ಯರನ್ನು ನೆನೆಸಿ, ಸಂಸ್ಥೆಯ ಪ್ರಗತಿಗೆ ನೀಡಿದ ಅತ್ಯುನ್ನತ ಸೇವೆಯನ್ನು ಪ್ರಶಂಸಿಸಿದರು.
ನಿರ್ದೇಶಕರಾದ ವೈ. ಜೆ. ಪೃಥ್ವಿರಾಜ್ ಭೂಪಾಲ್ ಅವರು ವಿದ್ಯಾರ್ಥಿಗಳಿಗೆ “ಓದಿನ ಜೊತೆಗೆ ಕೌಶಲ್ಯಾಭಿವೃದ್ದಿಯನ್ನೂ ಬೆಳೆಸಿಕೊಳ್ಳಿ” ಎಂದು ಸಲಹೆ ನೀಡಿದರು. ಬ್ರಿಕ್ಸ್ ಇನ್ಕ್ಯುಬೇಷನ್ ಸೆಂಟರ್ ಮೂಲಕ ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳನ್ನು ಸಂಶೋಧಿಸಲು, ಭವಿಷ್ಯದಲ್ಲಿ ಉದ್ಯಮಗಳ ಅಭಿವೃದ್ಧಿಗೆ ಅವಕಾಶವಿದೆ ಎಂದು ಅವರು ವಿವರಿಸಿದರು.
ವೇದಿಕೆಯಲ್ಲಿ ಟ್ರಸ್ಟಿಗಳಾದ ಅಶೋಕ್ ಭೂಪಾಲ್, ಡಾ. ವಿ.ಜೆ. ಭರತ್, ಅಮರ್ ರಾಜ್ ಭೂಪಾಲ್, ಡೀನ್ ಗಳಾದ ಡಾ.ಬಿ.ಎಸ್.ಖೇಣೆದ್, ಡಾ.ವಿಜಯಕುಮಾರ್, ಡಾ.ಕಾಶೀನಾಥ್, ಡಾ.ಆರ್.ಎನ್.ಕುಲಕರ್ಣಿ, ವಿಭಾಗ ಮುಖ್ಯಸ್ಥರಾದ ಡಾ.ಬಿ.ಎಂ.ವಿದ್ಯಾವತಿ, ಡಾ.ವೈ.ಸುರೇಶ್, ಡಾ.ಆರಾಧನ.ಡಿ, ಡಾ.ಸದ್ಯೋಜಾತ ಕೆ.ಎಂ., ಡಾ.ವಿ.ವೆಂಕಟರಮಣ, ಡಾ.ಶರಣ ರೆಡ್ಡಿ, ಡಾ.ಮಣಿಕಂಠ, ಡಾ.ಸುರೇಶ್, ಡಾ.ಎನ್.ಗುರುರಾಜ್, ಡಾ.ಟಿ.ಮಾಚಪ್ಪ, ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರೊ.ಶಿಲ್ಪ ನಿರೂಪಿಸಿದರು.