ಬಳ್ಳಾರಿ,ಆ.27: ನಗರದ ಪಾರ್ವತಿ ನಗರದಲ್ಲಿರುವ ಗುಣಶೀಲ ಫರ್ಟಿಲಿಟಿ ಸೆಂಟರ್, ಆಗಸ್ಟ್ 31 ರಂದು (ಶನಿವಾರ) ರಂದು ಸಂತಾನಹೀನತೆ (ಬಂಜೆತನ) ಸಮಸ್ಯೆ ಹೊಂದಿರುವ ದಂಪತಿಗಳಿಗೆ, ಪದೇ ಪದೇ ಗರ್ಭಪಾತ, ಫೈಬ್ರಾಯಿಡ್, ಪಿ.ಸಿ.ಓ.ಎಸ್., ಎಂಡೋಮೆಟ್ರಿಯೋಸಿಸ್, ಐ.ವಿ.ಎಫ್ ಚಿಕಿತ್ಸೆಯ ವೈಫಲ್ಯ ಎದುರಿಸುತ್ತಿರುವ ಮಹಿಳೆಯರಿಗೆ ಉಚಿತ ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಮತ್ತು ತಪಾಸಣೆ ಶಿಬಿರವನ್ನು ತನ್ನ ಕೇಂದ್ರದಲ್ಲಿ ಏರ್ಪಡಿಸಿದೆ. ತಪಾಸಣೆ ಶಿಬಿರ ಬೆಳಿಗ್ಗೆ 8-30 ರಿಂದ ಮದ್ಯಾನ್ಹ 2.30 ರವರೆಗೆ ನಡೆಯಲಿದೆ. ಖ್ಯಾತ ಬಂಜೆತನ ನಿವಾರಣೆ ತಜ್ಞೆ ಡಾ. ದೇವಿಕಾ ಗುಣಶೀಲ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ನೋಂದಣಿ: ಉಚಿತ ತಪಾಸಣೆ ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವ ದಂಪತಿಗಳು ತಮ್ಮ ಹೆಸರನ್ನು ನೋಂದಾಯಿಸಬೇಕು. ವಿಳಾಸ: ಗುಣಶೀಲ ಫರ್ಟಿಲಿಟಿ ಸೆಂಟರ್, ಮೊದಲನೇ ಮಹಡಿ, ಅಯ್ಯಪ್ಪನ್ ಡು-ಟವರ್, ಕೆ.ಹೆಚ್.ಬಿ. ಕಾಲೋನಿ, ಪಾರ್ವತಿನಗರ, ಬಳ್ಳಾರಿ. ದೂರವಾಣಿ: 08392-469595 ಅಥವಾ 9663769595.
ಸಂತಾನಫಲ ತಜ್ಞೆ ಡಾ. ದೇವಿಕಾ ಗುಣಶೀಲ ಮತ್ತು ವೈದ್ಯರ ತಂಡ ಉಚಿತ ತಪಾಸಣೆ, ಸ್ಕ್ಯಾನಿಂಗ್ ಮತ್ತು ಸಲಹೆಗಳನ್ನು ನೀಡಲಿದ್ದಾರೆ. “ಮಹಿಳೆಯರ ಗರ್ಭಾಶಯ ಕಾಯಿಲೆಗಳು, ಫೈಬ್ರಾಯಿಡ್, ಪಿ.ಸಿ.ಓ.ಎಸ್., ಎಂಡೋಮೆಟ್ರಿಯೋಸಿಸ್, ಪುರುಷರಲ್ಲಿಯ ದೋಷ ಮುಂತಾದ ಕಾರಣಗಳಿಂದಾಗುವ ಸಂತಾನಹೀನತೆ ಕುರಿತು ತಪಾಸಣೆ ಮತ್ತು ಸಲಹೆಗಳನ್ನು ಶಿಬಿರದಲ್ಲಿ ನೀಡಲಾಗುತ್ತದೆ. ಮಕ್ಕಳಿಲ್ಲದ ದಂಪತಿಗಳು ಉಚಿತ ತಪಾಸಣಾ ಶಿಬಿರದ ಪ್ರಯೋಜನ ಪಡೆಯಲು ಕೋರಿಕೆ”, ಎಂದು ಡಾ. ದೇವಿಕಾ ಗುಣಶೀಲ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನೋಂದಣಿ: ಉಚಿತ ತಪಾಸಣೆ ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವ ದಂಪತಿಗಳು ತಮ್ಮ ಹೆಸರನ್ನು ನೋಂದಾಯಿಸಬೇಕು. ವಿಳಾಸ: ಗುಣಶೀಲ ಫರ್ಟಿಲಿಟಿ ಸೆಂಟರ್, ಮೊದಲನೇ ಮಹಡಿ, ಅಯ್ಯಪ್ಪನ್ ಡು-ಟವರ್, ಕೆ.ಹೆಚ್.ಬಿ. ಕಾಲೋನಿ, ಪಾರ್ವತಿನಗರ, ಬಳ್ಳಾರಿ. ದೂರವಾಣಿ: 08392-469595 ಅಥವಾ 9663769595.