ಬಳ್ಳಾರಿ,ಜ.18: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹಾಲಿ, ಮಾಜಿ ಜನಪ್ರತಿನಿಧಿಗಳು, ಜನಪರ ಸಂಘ ಸAಸ್ಥೆಗಳು, ಬುದ್ಧಿಜೀವಿಗಳು, ಹೋರಾಟಗಾರರು ಬೆಂಬಲ ನೀಡಬೇಕೆಂದು ಅಖಿಲ ಭಾರತ ಜನಗಣ
ಒಕ್ಕೂಟದ ರಾಷ್ಟಿçÃಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಬಳ್ಳಾರಿ ನಗರಸಭೆಯ ಮಾಜಿ ಸದಸ್ಯರಾದ ಎನ್.ಗಂಗಿರೆಡ್ಡಿ ಮನವಿ ಮಾಡಿದರು.ನಗರದ ಸ್ನೇಹ ಸಂಪುಟದಲ್ಲಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಧುರೀಣರು ಆದ ಎನ್.ಗಂಗಿರೆಡ್ಡಿ ಅವರು, ಉತ್ತರ ಕರ್ನಾಟಕದ 14 ಜಿಲ್ಲೆಗಳನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಉತ್ತರ ಕರ್ನಾಟಕ ಭಾಗದಲ್ಲಿರುವ 14 ಜಿಲ್ಲೆಗಳಲ್ಲಿ ಇರುವ ಹಾಲಿ,ಮಾಜಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಎಲ್ಲಾ ಸಂಘ ಸಂಸ್ಥೆಗಳು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಬೆಂಬಲ ನೀಡಬೇಕೆಂದು ಮನವಿ ಮಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿರುವ 7 ಜಿಲ್ಲೆಗಳು, ಮುಂಬೈ ಕರ್ನಾಟಕದಲ್ಲಿರುವ 7 ಜಿಲ್ಲೆಗಳು ಸೇರಿ ಒಟ್ಟು 14 ಜಿಲ್ಲೆಗಳು ಆಗುತ್ತವೆ. ಸ್ವಾತಂತ್ರö್ಯ ಬಂದಾಗಿನಿAದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿಕಾಣುತ್ತಿಲ್ಲ. ಕೇಂದ್ರದಲ್ಲಿ ಯು.ಪಿ.ಎ. ಸರ್ಕಾರ ಇದ್ದಾಗ ಆಂಧ್ರಪ್ರದೇಶವನ್ನು ವಿಭಜನೆ ಮಾಡಿ ಪತ್ರೆö್ಯÃಕ ತೆಲಂಗಾಣ ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಯಿತು. ಕೇಂದ್ರದಲ್ಲಿ ಯು.ಪಿ.ಎ.ಸರ್ಕಾರದಲ್ಲಿ ಅಂದಿನ ವಿರೋದ ಪಕ್ಷದ ನಾಯಕಿಯಾಗಿ ದಿವಂಗತ ಸುಷ್ಮಾಸ್ವರಾಜ್ರವರು ಇದ್ದರು. ತೆಲಂಗಾಣ ವಿಭಜನೆಯಾಗಬೇಕೆಂದು ಗಲಾಟೆ ಆಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷವಾಗಿದ್ದ ಎನ್.ಡಿ.ಎ. ಪಕ್ಷವು ವಿಭಜನೆ ಆಗಬೇಕೆಂದು ಬೆಂಬಲ ನೀಡಿತು. ಆ ಸಂದರ್ಭದಲ್ಲಿ ವಿರೋದ ಪಕ್ಷದ ನಾಯಕರು
ಸುಷ್ಮಾ ಸ್ವರಾಜ್ ರವರು ಚಿಕ್ಕ ಚಿಕ್ಕ ರಾಜ್ಯಗಳಾದರೆಅಭಿವೃದ್ಧಿ ಆಗುತ್ತವೆ ಎಂದು ಪಾರ್ಲಿಮೆಂಟ್ನಲ್ಲಿ ಸುಷ್ಮಾ ಸ್ವರಾಜ್ರವರು ವಿಸ್ತೃತವಾಗಿ ಚರ್ಚೆ ಮಾಡಿದ್ದರು. ಆಗ ಎಲ್ಲರ ಒಪ್ಪಿಗೆಯಿಂದ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಯು.ಪಿ.ಎ. ಸರ್ಕಾರ ಒಪ್ಪಿಕೊಂಡಿತು. ಅದೇ ಸಂದರ್ಭದಲ್ಲಿ ಆಂದ್ರಪ್ರದೇಶ್
ವಿಭಜನೆಯಾದರೆ ಕರ್ನಾಟಕ ಸಹ ಉತ್ತರ ಕರ್ನಾಟಕ, ಅವತ್ತಿನ ಹೈದ್ರಾಬಾದ್-ಕರ್ನಾಟಕ, ಬಾಂಬೆ ಕರ್ನಾಟಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು ಎಂದು 2010 ರಲ್ಲಿ ಅಖಿಲ ಭಾರತ ಜನಗಣ ಒಕ್ಕೂಟದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಿದ್ದೆವು (ಉತ್ತರ ಕರ್ನಾಟಕ ಭಾಗದ 14 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಿ ಆ ಜಿಲ್ಲೆಯಲ್ಲಿರುವ ಹಾಲಿ, ಮಾಜಿ ಜನಪ್ರತಿನಿಧಿಗಳ ಹಾಗೂ ಜನಪರ ಸಂಘಟನೆಗಳ, ಹೋರಾಟಗಾರರ, ಬುದ್ದಿಜೀವಿಗಳ ಬೆಂಬಲವನ್ನು ಕೋರಲಾಗಿತ್ತು.) ಎಂದು ಅವರು 14 ವರ್ಷಗಳ ಹೋರಾಟದ ಬಗ್ಗೆ ವಿವರಿಸಿದರು.