ಬಳ್ಳಾರಿ. ಮಾ. 12: ತಾಲೂಕಿನ ಹಲಕುಂದಿ, ಮಿಂಚೇರಿ, ಎತ್ತಿನಬೂದಿಹಾಳ್, ಶಂಕರಬಂಡೆ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜೆಟೆ. ಫೌಂಡೇಶನ್ ಹಾಗೂ ಶ್ರೀ ಲಕ್ಷಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ ವತಿಯಿಂದ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರಿಕ್ಷೆ ಬರೆಯಲು ಪೆನ್ನು ಪ್ಯಾಡ್ ಗಳು ವಿತರಿಸಲಾಯಿತು.
ಬಳಿಕ ಮಾತನಾಡಿ ಜೆಟೆ ಪೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾರಿಗೂ ಕಡೆಮೆ ಇಲ್ಲ ದೇಶದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರು ಸಹ ಸರ್ಕಾರಿ ಶಾಲೆಯಲ್ಲಿ ಓದಿದ್ದರೆ. ಖಾಸಗಿ ಶಾಲೆಗಿಂತಲೂ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ತಿಳಿಸಿದರು
ಪರೀಕ್ಷೆ ಬರೆಯಲು ಇನ್ನು ೯ ದಿನಗಳ ಕಾಲ ಅವಕಾಶವಿದ್ದು ಎಸ್ ಎಲ್ ಸಿ ಪರೀಕ್ಷೆ ಪ್ರಥಮ ಹೆಜ್ಜೆ ಆಗಿರೋದ್ರಿಂದ ಸಮಯವನ್ನು ವ್ಯರ್ಥ ಮಾಡಬೇಡಿ,ಎಸ್ಸೆಸ್ಸೆಲ್ಲಿ ನಲ್ಲಿ ಉತ್ತಮ ಫಲಿತಾಂಶ ತನ್ನಿ . ಹಾಗೂ ಎಲ್ಲಾರಿಗೂ ಶುಭವಾಗಲಿ ಎಂದು ತಿಮ್ಮಪ್ಪ ಜೋಳದರಾಶಿ ತಿಳಿಸಿದರು ಹಾಗೂ ಈ ದಿನ 4 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಪರೀಕ್ಷೆ ಪ್ಯಾಡು ಹಾಗೂ ಪೆನ್ನುಗಳನ್ನು ವಿತರಿಸಿದ್ದರು
ಈ ಸಂದರ್ಭದಲ್ಲಿ ಜೋಳದರಾಶಿ ತಿಕ್ಕಣ್ಣ, ತಿಪ್ಪೇಸ್ವಾಮಿ, ಮನೋಜ್ ಹಾಗೂ 4 ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕರು ಇನ್ನಿತರರು ಉಪಸ್ಥಿತರಿದ್ದರು.