ಬಳ್ಳಾರಿ,ನ.30: ಗಣಿ ನಾಡು ಬಳ್ಳಾರಿಯಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದೇ ಕಾರಣಕ್ಕಾಗಿ ಎಲ್ಲೆಂದರಲ್ಲಿ ಅಕ್ರಮಗಳ ವಾಸನೆ ಜೋರಾಗಿದೆ. ಇನ್ನು ಅಕ್ರಮ ಮಾಡುವವರ ಬೆಣ್ಣೆಗೆ ಸರ್ಕಾರಿ ಅಧಿಕಾರಿಗಳು ನಿಂತಿದ್ದಾರೆ ಅಂದರೆ ಅದೂ ಕೂಡಾ ಅಚ್ಚರಿ ಪಡುವ ಹಾಗಿಲ್ಲಾ.
ಹೌದು ಗಣಿ ನಾಡು ಬಳ್ಳಾರಿಯಲ್ಲಿ ಸುಮಾರು ವರ್ಷಗಳ ಹಿಂದೆ, ಬಳ್ಳಾರಿ ನಗರದ ಟಿ ಎಸ್ ನಂಬರ್ 943 ಬ್ಲಾಕ್ ನಂಬರ್ 7 ವಾರ್ಡ್ ನಂಬರ್ -20 ಹಾಗೂ 26 ರಲ್ಲಿ ಬರವ ಒಂದು ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿದೆ. ಬಳ್ಳಾರಿಯ ನಿವಾಸಿ ತಹೆರ್ ಬಾನು ಅಮ್ರೀನ್ , ಭಾನು ಶಾಜಿದ್ ಎಂಬುವವರು ಸಮಾರು ಒಂದು ಎಕರೆ ಜಮೀನು ಒತ್ತುವರಿ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಮಹಮ್ಮ ರಫೀಕ್ ಎಂಬುವವರು ಲೋಕಾಯುಕ್ತಕ್ಕೆ ದಾಖಲೆ ಸಮೇತವಾಗಿ ದೂರು ನೀಡಿದ್ದರು, ಕಾರಣ ಲೋಕಾಯುಕ್ತರು ತನಿಖೆ ನಡೆಸಿ ಬಳ್ಳಾರಿಯ ಮಾಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೂಡಲೇ ಅತೀಕ್ರಮಣ ಮಾಡಿದ ಸರ್ಕಾರಿ ಜಮೀನನ್ನು ತೆರವು ಮಾಡುವಂತೆ ಒತ್ರ ಬರೆದಿದ್ದಾರೆ. ಅಲ್ಲದೇ ಬಳ್ಳಾರಿಯ ತಹಶಿಲ್ದಾರ ಕುಡಾ ಬಳ್ಳಾರಿಯ ಮಹಾನಗರ ಪಾಲಿಕೆಗೆ ದಿನಾಂಕ 03-09-2020 ರಂದೇ ಪರ್ರ ಬರೆದು ಅತೀಕ್ರಮಣವಾದ ಜಮೀನನ್ನು ತೆರವು ಮಾಡುವಂತೆ ಪತ್ರ ಬರೆದಿದ್ದಾರೆ.
ಆದರೆ ಈ ವರೆಗೂ ಅತೀಕ್ರಮಣವಾದ ಜಮೀನು ತೆರವು ಮಾಡಿಲ್ಲಾ, ಹೀಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಮೂಡಿದೆ. ಇನ್ನಾದರ ಪಾಲಿಕೆ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡುತ್ತಾರಾ ಕಾದು ನೋಡಬೇಕು.