ಹೊಸಪೇಟೆ (ವಿಜಯನಗರ) ಫೆಬ್ರವರಿ 03 : ಹಂಪಿ ಉತ್ಸವ-2024ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿ ಫೆಬ್ರವರಿ 4ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಂಪಿಯ ನಾಲ್ಕು ಪ್ರಮುಖ ವೇದಿಕೆಗೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಹಂಪಿಯ ಗಾಯಿತ್ರಿ ಪೀಠದಲ್ಲಿ (ಮುಖ್ಯ ವೇದಿಕೆ) ನಡೆಯುವ ಕಾರ್ಯಕ್ರಮಗಳು: ಸಂಜೆ 5.30 ರಿಂದ 6 ರವರೆಗೆ ಹಗರಿಬೊಮ್ಮನಹಳ್ಳಿಯ ಹಳ್ಳಿ ಬ್ಯಾಂಡ್ ನಿಂದ ಸ್ಯಾಕ್ಸೊಫೋನ್ ವಾದನ ಕಾರ್ಯಕ್ರಮ ನಡೆಯಲಿದೆ. 6 ರಿಂದ 7 ರವರೆಗೆ ತುಮಕೂರು ಗುಬ್ಬಿಯ ವಿವೇಕಾನಂದ ವಿದ್ಯಾಪೀಠದಿಂದ ಜಾನಪದ ಪ್ರಕಾರಗಳ ಸಂಯೋಜಿತ ನೃತ್ಯ, 7 ರಿಂದ 7.30 ರವರೆಗೆ ಹಂಪಿ ಉತ್ಸವದ ಸಮಾರೊಪ ಸಮಾರಂಭ, 7.30 ರಿಂದ 7.45 ರವರೆಗೆ ಬೆಂಗಳೂರಿನ ವೈಷ್ಣವಿ ಕೃಪಸ್ವಾಮಿ ಮತ್ತು ತಂಡದವರಿAದ ಭರತನಾಟ್ಯ, 7.45 ರಿಂದ 8 ರವರೆಗೆ ಬೆಂಗಳೂರಿನ ಚಲನಚಿತ್ರ ನಟರಾದ ರವಿಶಂಕರ್ ಆರ್ಮುಗಂ ರವರಿಂದ ಮನರಂಜನೆ, 8 ರಿಂದ 8.15 ರವರೆಗೆ ಬೆಂಗಳೂರಿನ ಚಲನಚಿತ್ರ ನಟರಾದ ಅಜಯ್ ರಾವ್ ಅವರಿಂದ ನೃತ್ಯ, 8.15 ರಿಂದ 8.30 ರವರೆಗೆ ಬೆಂಗಳೂರಿನ ಚಲನಚಿತ್ರ ನಟರಾದ ನೆನಪಿರಲಿ ಪ್ರೆಮ್ ಅವರಿಂದ ಗಾಯನ , 8.30 ರಿಂದ 8.45 ರವರೆಗೆ ಬೆಂಗಳೂರಿನ ಚಲನಚಿತ್ರ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ನಮೃತ ಗೌಡರವರಿಂದ ನೃತ್ಯ, 8.45 ರಿಂದ8.55 ರವರೆಗೆ ಬೆಂಗಳೂರಿನ ಚಲನಚಿತ್ರ ನಟಿಯಾದ ನಿಮಿಕಾ ರತ್ನಾಕರ್ ಅವರಿಂದ ಹಾಡು ಮತ್ತು ನೃತ್ಯ, 8.55 ರಿಂದ 9.05 ರವರೆಗೆ ಬೆಂಗಳೂರಿ ಚಲನಚಿತ್ರ ನಟಿಯಾದ ನಿಶ್ವಿಕಾ ನಾಯ್ಡು ರವರಿಂದ ನೃತ್ಯ, 9.05 ರಿಂದ 9.15 ರವರೆಗೆ ಬೆಂಗಳೂರಿನ ಚಲನಚಿತ್ರ ನಟರಾದ ಜಾಹಿದ್ ಅಹ್ಮದ್ ಖಾನ್ ಮತ್ತು ಸತ್ಯನಾರಯಣ ಶೆಟ್ಟಿಯವರಿಂದ ನೃತ್ಯ, 9.15 ರಿಂದ 9.25 ರವರೆಗೆ ಬೆಂಗಳೂರಿನ ಚಲನಚಿತ್ರ ನಟಿಯಾದ ಸಂಯುಕ್ತ ಹೆಗ್ಡೆಯವರಿಂದ ನೃತ್ಯ, 9.25 ರಿಂದ 9.35 ರವರೆಗೆ ಬೆಂಗಳೂರಿನ ಚಲನಚಿತ್ರ ನಟರಾದ ದಿಗಂತ್ ಅವರಿಂದ ನೃತ್ಯ ಹಾಗೂ 9.35 ರಿಂದ 11 ರವರೆಗೆ ಬೆಂಗಳೂರಿನ ಸಾದುಕೋಕಿಲ ಮತ್ತು ಗಾಯಕರಾದ ಕಲಾವತಿ, ಸುನೀತಾ,ವಾಣಿ ಹರಿವರನ್,ಉಷಾ,ಮಂಗಳಾ ಮತ್ತು ತಂಡದವರಿAದ ರಸಮಂಜರಿ ಕಾರ್ಯಕ್ರಮಗಳು ನೆಡೆಯಲಿವೆ.