ಹೊಸಪೇಟೆ (ವಿಜಯನಗರ) ಫೆಬ್ರವರಿ 03 : ಹಂಪಿ ಉತ್ಸವ 2024ರ ಹಿನ್ನಲೆಯಲ್ಲಿ ಗಾಯತ್ರಿ ಪೀಠ ಮುಖ್ಯ ವೇದಿಕೆಯಲ್ಲಿ ಸಾರ್ವಜನಿಕರನ್ನು ರಂಜಿಸಲು ಭಾನುವಾರ ರಂದು ಸ್ಟಾರ್ ನೈಟ್ ಮ್ಯೂಜಿಕಲ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿವೆ. ಚಲನಚಿತ್ರ ನಟರಾದ ನೆನಪಿರಲಿ ಪ್ರೇಮ್, ಅಜಯ್ ರಾವ್ ಮತ್ತು ಜಹೀದ್ ಖಾನ್, ಡಾಲಿ ಧನಂಜಯ್, ಆರ್ಮುಗ ರವಿಶಂಕರ್ ಹಾಗೂ ರಾಗಿಣಿ ದ್ವಿವೇದಿ, ಶರ್ಮಿಳಾ ಮಾಂಡ್ರೆ, ಶಾನ್ವಿ ಶ್ರೀವಾಸ್ತವ, ಮೇಘನ ಶೆಟ್ಟಿ, ಸಂಯುಕ್ತಾ ಹೆಗ್ಡೆ ಹಾಗೂ ಇತರೆ ಚಲನಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ. ಸಂಗೀತಾ ನಿರ್ದೇಶಕರು ಹಾಗೂ ಖ್ಯಾತ ಹಾಸ್ಯ ನಟರಾದ ಶ್ರೀ ಸಾಧುಕೋಕಿಲ ಮತ್ತು ತಂಡದವರಿAದ ರಸಮಂಜರಿ ಕಾರ್ಯಕ್ರಮಗಳು ನಡೆಯುತ್ತವೆ.