ಬಳ್ಳಾರಿ: ಕರ್ನಾಟಕಾಂಧ್ರ ಗಡಿ ಭಾಗದ ಆರಾಧ್ಯ ದೈವವಾದ ತಾಲೂಕಿನ ಹೊನ್ನಳ್ಳಿ ತಾಂಡಾದ ಶ್ರೀ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ಹದಿನೆಂಟನೇ ವರ್ಷದ ಶ್ರಾವಣಾಚರಣೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.
ಪರಮಪೂಜ್ಯರಾದ ಹೇಮಜ್ಜಯ್ಯ ಅವರ ಸಂಕಲ್ಪದAತೆ ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಸೋಮವಾರದಂದು ಅಜ್ಜಯ್ಯನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ವಾಡಿಕೆ. ಅದರಂತೆ ಈ ಕ್ರೋಧಿನಾಮ ಸಂವತ್ಸರ ಶ್ರಾವಣಮಾಸÀ ದ್ವಿತೀಯ ಸೋಮವಾರದಂದು ಹೊನ್ನಳ್ಳಿ ಗ್ರಾಮದಲ್ಲಿ ಅದ್ದೂರಿ ಹಾಗೂ ಅತ್ಯಂತ ಭಕ್ತಿಭಾವದಿಂದ ಅಜ್ಜಯ್ಯನವರಿಗೆ ಇಂದು ಪ್ರಾತಃಕಾಲದಿಂದಲೇ ಧಾರ್ಮಿಕ ಪರಂಪರೆಯ ವಿಧಾನೋಕ್ತ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಗಿನ ಜಾವ ಜಲಾಭಿಷೇಕ, ನೂತನ ವಸ್ತçಧಾರಣೆ, ವೈವಿಧ್ಯ ನಮೂನೆಯ ಹೂವುಗಳು ಹಾಗೂ ವಿಭೂತಿಯಿಂದ ಅಲಂಕಾರ ಮಾಡಲಾಯಿತು. ವಿವಿಧ ಫಲ-ಪುಷ್ಪಗಳು ಹಾಗೂ ಅಜ್ಜಯ್ಯನಿಗೆ ಪ್ರೀತಿಪಾತ್ರವಾದ ಮಂಡಾಳು, ದಾಣಿ, ಲಿಂಬೆಹಣ್ಣು, ದೀಪ, ಧೂಪ ಸಮರ್ಪಿಸಿ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಲಾಯಿತು.
ಹಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹೊನ್ನಳ್ಳಿ ತಾಂಡಾದಲ್ಲಿ ಧಾರ್ಮಿಕವಾಗಿರುವ ವಾದ್ಯ-ಮೇಳಗಳೊಂದಿಗೆ ಗ್ರಾಮದ ನೀರೆಯರಿಂದ ಕುಂಭ ಕಳಶದೊಂದಿಗೆ ಗಂಗೆ ಪೂಜೆ, ಭವ್ಯ ಮೆರವಣಿಗೆ ಜರುಗಿತು. ಬಳ್ಳಾರಿ ಮಹಾನಗರದ ವಿವಿಧ ವಾರ್ಡುಗಳ ಭಕ್ತರು, ಕೌಲ್ ಬಜಾರ್, ಗುಗ್ಗರಹಟ್ಟಿ, ಬೆಳಗಲ್ಲು, ಕೊಳಗಲ್ಲು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಈ ಶ್ರಾವನಾಚಾರಣೆಯಲ್ಲಿ ಪಾಲ್ಗೊಂಡು ತಮ್ಮ ಹರಕೆ ಸಲ್ಲಿಸಿ ಕೃತಾರ್ಥರಾದರು. ಹೇಮಜ್ಜಯ್ಯನವರು ಈ ಭಾಗದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕೈಂಕರ್ಯಗಳನ್ನು ಕಳೆದ ಎರಡು ದಶಕಗಳಿಂದ ಜನಹಿತಕ್ಕಾಗಿ ನೆರವೇರಿಸಿಕೊಂಡು ಬರುತ್ತಿದ್ದು ಶ್ರೀ ಕರಿಬಸವಜ್ಜಯ್ಯ ಮತ್ತು ಹೇಮಜ್ಜಯ್ಯ ಸೇವಾ ಸಮಿತಿಯ ಧರ್ಮಾಧ್ಯಕ್ಷರು ಹಾಗೂ ವಕೀಲರಾದ ಡಿ.ಮಲ್ಲಿಕಾರ್ಜುನ ಮತ್ತು ಸಮಿತಿಯ ಪದಾಧಿಕಾರಿಗಳು ಈ ಸಂಪ್ರದಾಯವನ್ನು ಮುಂದುವರಿಸಿಕೊAಡು ಬರುತ್ತಿದ್ದಾರೆ.
ಪೂಜ್ಯ ಹೇಮಜ್ಜಯ್ಯನವರ ಗದ್ದುಗೆಗೆ ವಿಶೇಷ ಅಲಂಕಾರ ಸೇವೆಯ ಜೊತೆಗೆ ಶ್ರೀ ಕರಿಬಸವಜ್ಜಯ್ಯ ಸ್ವಾಮಿಗೂ ಅಗ್ರ ಪೂಜೆ ಸಲ್ಲಿಸಲಾಯಿತು ಎಂದು ಹೇಳಿದ ಸಮಿತಿಯ ಧರ್ಮಾಧ್ಯಕ್ಷರು ಹಾಗೂ ವಕೀಲರಾದ ಡಿ.ಮಲ್ಲಿಕಾರ್ಜುನ ಅವರು, ಇಲ್ಲಿನ ಕರಿಬಸವಜ್ಜಯ್ಯ ಸ್ವಾಮಿ ಭಕ್ತರಿಗೆ ಬೇಡಿದುದನ್ನು ಕರುಣಿಸುವ ಕರುಣಾಮಯಿ ಆಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿದೆ. ವಿಶೇಷವಾಗಿ ತಮ್ಮ ಮೇಲೆ ಮಾಟ, ಮಂತ್ರ, ವಾಮಾಚಾರ, ಕೆಟ್ಟ ಪ್ರಯೋಗ ಮಾಡಿದರೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ಪ್ರಾರ್ಥಿಸಿದರೆ ಪರಿಹಾರ ಖಂಡಿತ ಲಭಿಸುತ್ತದೆ. ಎಷ್ಟೋ ಭಕ್ತರು ತಮ್ಮ ಅನೇಕ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊAಡಿದ್ದಾರೆ. ದೇವಸ್ಥಾನದ ಶಿಷ್ಯರು, ಭಕ್ತರು ಈ ದೇವಸ್ಥಾನವನ್ನು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಪಡಿಸುತ್ತಿದ್ದಾರೆ. ಈ ದೇವಸ್ಥಾನ ಸಾರ್ವಜನಿಕರ ಸ್ವತ್ತಾಗಿದ್ದು ಇಂದು ರಾತ್ರಿ ೧೦ ಗಂಟೆಯವರೆಗೂ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.