ವಿಜಯನಗರ,ಮಾ.15: ಮಾಜಿ ಶಾಸಕ, ಕೊಪ್ಪಳ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ದಡೆಸುಗೂರು ಗೌಪ್ಯವಾಗಿ ೨ನೇ ಮದುವೆಯಾಗಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಅವರ ಕಚೇರಿಗೆ ಉಪಲೋಕಾಯುಕ್ತ ವೀರಪ್ಪ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಪತಿ ರಾಜಕಾರಣಿ, ಕನಕಗಿರಿಯ ಮಾಜಿ ಶಾಸಕ ಬಸವರಾಜ ದಡೆಸುಗೂರು ಎಂದು ಹೇಳಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಉಪಲೋಕಾಯುಕ್ತರು ಏನಮ್ಮ ಯಾರು ನಿಮ್ಮ ಯಜಮಾನರು, ಏನು ಕೆಲಸ ಮಾಡುತ್ತಾರೆ ಎಂದು ಕೇಳಿದಾಗ ನನ್ನ ಪತಿ ರಾಜಕಾರಣಿ ಎಂದಿದ್ದಾರೆ. ಬಳಿಕ ಫೋನ್ ಪೇ ವ್ಯವಹಾರದ ಬಗ್ಗೆ ಕೇಳಿದಾಗ ಮನೆಯವರಿಗೆ ಮಾಡಿದ್ದೀರಿ. ಅವರು ವಾಪಸ್ ಹಣ ಹಾಕಿದ್ದಾರೆ.
ಈ ವೇಳೆ ಅವರಿಗೆ ಯಾಕೆ ಹಣ ವರ್ಗಾವಣೆ ಮಾಡಿದ್ದೀರಿ. ಅವರಿಗೆ ಪಿಂಚಣಿ ಬರುತ್ತೆ ಎಂದು ಹೇಳಿರುವ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂರು ವರ್ಷಗಳ ಹಿಂದೆ ಕೊಪ್ಪಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಅಧಿಕಾರಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅಧಿಕಾರಿ ಹಾಗೂ ದಡೆಸುಗೂರು ಜತೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಈಗ ಬಸವರಾಜ ನನ್ನ ಪತಿ ಎಂದು ಮಹಿಳಾ ಅಧಿಕಾರಿ ಹೇಳಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬಸವರಾಜ ಅವರು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ೨ನೇ ಮದುವೆ ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ.