ಬಳ್ಳಾರಿ, ಜೂ.16 : ಬಳ್ಳಾರಿ ತಾಲ್ಲೂಕಿನ ಆಂದ್ರಾಳ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಶ್ರೀ ಧರಣಿ ಜ್ಞಾನ ವಿಕಾಸ ಕೇಂದ್ರದ ಸಿರಿ ಧಾನ್ಯ ಮಹತ್ವದ ಕಾರ್ಯಕ್ರಮವನ್ನು ಉದ್ದೇಶಿಸಿ ಪಾಲಿಕೆಯ ಸದಸ್ಯರಾದ ರಾಮಾಂಜನೇಯಲು ಅವರು ಮಾತನಾಡಿದರು.
ನಮ್ಮ ಆಹಾರ ಪದ್ದತಿಯಲ್ಲಿ ಸಿರಿ ಧಾನ್ಯಗಳು ಹಳೆಯ ಧಾನ್ಯಗಳಾಗಿದ್ದು, ಪ್ರಮುಖ ಸ್ಥಾನ ಪಡೆದಿವೆ. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ ಹಾಗೂ ಊದಲು ಇವುಗಳೆ ಸಿರಿಧಾನ್ಯಗಳು ಅಥವಾ ನವ ಧಾನ್ಯಗಳು. ಸಿರಿ ಎಂದರೆ ಸಂಪತ್ತು. ಧಾನ್ಯ ಎಂದರೆ ಕಾಳುಗಳು. ಒಟ್ಟಾರೆಯಾಗಿ ಸಿರಿ ಧಾನ್ಯಗಳು ಎಂದು ಕರೆಯುತ್ತಾರೆ. ಪೌಷ್ಟಿಕಾಂಶಗಳೆಂಬ ಸಂಪತ್ತು ತುಂಬಿರುವ ಕಾಳುಗಳು.
ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚು. ಇನ್ನು ಕೆಲವು ಸಿರಿಧಾನ್ಯಗಳಲ್ಲಿ ಅಕ್ಕಿ, ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿರುತ್ತವೆ. ಇಂತಹ ಸಿರಿಧಾನ್ಯಗಳ ಸೇವನೆ ಆರೋಗ್ಯಕ್ಕೆ ಉತ್ತಮವೆಂದು ಇತ್ತೀಚಿನ ಬಹಳಷ್ಟು ಸಂಶೋಧನೆಗಳು ತಿಳಿಸಿವೆ ಆದ್ದರಿಂದ ಸಿರಿಧಾನ್ಯಗಳ ಸೇವನೆ ಬಗ್ಗೆ ಈ ವರ್ಷ ಸಿರಿ ಧಾನ್ಯ ವರ್ಷವೆಂದು ಸರಕಾರವೆ ಘೋಷಣೆ ಮಾಡಿದೆ ಎಂದು ರಾಮಾಂಜನೇಯಲು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ವೆಂಕಟೇಶ ಪಟಗಾರ, ಬಳ್ಳಾರಿ-1 ತಾಲ್ಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಸ್ವ ಸಹಾಯ ಮತ್ತು ಪ್ರಗತಿ ಬಂಧು ಸಂಘಗಳ ಬಲವರ್ಧನೆಗೆಯೊಂದಿಗೆ ತನ್ನ ಹಸಿವನ್ನು ಲೆಕ್ಕಿಸದ ಸಮಸ್ತರ ಹಸಿದ ಹೊಟ್ಟೆಯನ್ನು ತನಿಸುವ ಅಣ್ಣದಾತ ನಮ್ಮ ರೈತ ದೇಶದ ಬೆನ್ನೆಲುಬಾಗಿ ದುಡಿಯುತ್ತಿರುವ ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟವನ್ನು ಅನುಭವಿಸುತ್ತಿದ್ದಾನೆ. ನಮ್ಮ ರೈತರು ಅತಿ ಹೆಚ್ಚು ಗೊಬ್ಬರ ಬಳಕೆ ಕಿಟ ನಾಶಕ ಬಳಕೆಯಿಂದ ಭೂಮಿಯ ಫಲವತ್ತತೆ ಹೊಂದಿದೆ ನಮ್ಮ ಆರೋಗ್ಯವು ಸಹ ಹಾಳಾಗುತ್ತಿದೆ. ಸಾವಯವ ಕೃಷಿ ಮತ್ತು ಸಿರಿ ಧಾನ್ಯಗಳನ್ನು ಬೆಳೆಯುವುದರಿಂದ ಕಡಿಮೆ ಖರ್ಚು ಅಧಿಕ ಲಾಭವನ್ನು ಪಡೆಯಬಹುದು
ರೈತರು ಬೆಳೆದ ಸಾವಯವ ಸಿರಿಧಾನ್ಯಗಳನ್ನು ನಮ್ಮ ಯೋಜನೆಯಿಂದ ಮಧ್ಯವರ್ತಿಗಳಿಲ್ಲದೆ ಮಾರುಕಟ್ಟೆಯ ದರದಲ್ಲಿ ಖರೀದಿಸಲಾಗುವುದು ಎಂದು ಮಾತನಾಡಿದರು
ಈ ಕಾರ್ಯಕ್ರಮದಲ್ಲಿಒಕ್ಕೂಟದ ಅಧ್ಯಕ್ಷರು ಚಂದ್ರಮ್ಮ ,ಸಿರಿ ಧನ್ಯ ಮಾರುಕಟ್ಟೆಯ ಮೇಲ್ವಿಚಾರಕರು ನಂದೀಶ್ , ವಲಯದ ಮೇಲ್ವಿಚಾರಕರು ರತ್ನಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ, ಉಮಾದೇವಿ ಮತ್ತು ಶೋಭಾ ಸ್ಥಳೀಯ ಸೇವಾಪ್ರತಿನಿಗಳು ಧರಣಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.