ಬಳ್ಳಾರಿ,ಫೆ.೧೩: ತಾಲೂಕಿನ ಕುಂಟನಾಳ್ ಗ್ರಾಮದ ಹೊರವಲಯದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ೨,೯೨೩೨೦ ರೂ ಮೌಲ್ಯದ ಪಡಿತರ ಅಕ್ಕಿ ಹಾಗೂ ೪೧, ೮೫೦ ರು ಮೌಲ್ಯದ ಪಡಿತರ ಗೋಧಿಯನ್ನು ಆಹಾರ ಮತ್ತು ಸರಬರಾಜು ಇಲಾಖೆಯ ಅಧಿಕಾರಿಗಳು ಜಪ್ತಿಮಾಡಿದ್ದಾರೆ.
ಕುಂಟನಾಳ್ ಗ್ರಾಮದ ಸರ್ವೆ ನಂ:೨೪೧ರ ಹೊಲದಲ್ಲಿ, ಸಂಗ್ರಹ ಮಾಡಿ ಇಟ್ಟುಕೊಂಡಿದ್ದಾರೆAಬ ಖಚಿತ ಮಾಹಿತಿ ಮೇರೆಗೆ
ಸÀದರಿ ಹೊಲದಲ್ಲಿ ಅಕ್ಕಿ & ಗೋದಿ ತುಂಬಿದ ಚೀಲಗಳಿದ್ದುದು ಕಂಡು ಬಂದಿತು. ಪರಿಶೀಲಿಸಲು ಸದರಿ ಚೀಲಗಳಲ್ಲಿ, ಸರ್ಕಾರದಿಂದ ಸಾರ್ವಜನಿಕರಿಗೆ ವಿತರಣೆಗೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡುವ ಅಕ್ಕಿ & ಗೋದಿ ತುಂಬಿದ್ದು ಕಂಡು ಬಂದಿರುತ್ತದೆ, ಎಣಿಕೆ ಮಾಡಲಾಗಿ ೨೫೨ ಪ್ಲಾಸ್ಮಿಕ್ ಸೂಪರ್ ಚೀಲಗಳಲ್ಲಿ ಪ್ರತಿ ಚೀಲದಲ್ಲಿ ಅಂದಾಜು ೪೦ ಕೆ.ಜಿ ಯಂತೆ ೧೦ ಟನ್ ೮೦ ಕೆ.ಜಿ ಪಡಿತರ ಅಕಿ, ೩೫ ಪ್ಲಾಸ್ಮಿಕ್ ಸೂಪರ್ ಚೀಲಗಳಲ್ಲಿ ಪ್ರತಿ ಚೀಲದಲ್ಲಿ ಅಂದಾಜು ೫೦ ಕೆಜಿ ಯಂತೆ ೧೫ ಕ್ವಿಂಟಲ್ ೫೦ ಕೆ.ಜಿ ಪಡಿತರ ಗೋದಿ ಇರುತ್ತದೆ. ಮತ್ತು ಸ್ಥಳದಲ್ಲಿದ್ದ ಏಂ-೩೪ಇಈ೯೧೮೪ ನಂಬರಿನ ಬಜಾಜ್ ಕಂಪನಿಯ ಹಾಗೂ ಏಂ-೩೪-ಇಆ-೯೮೪೬ ನಂಬರಿನ ಮೋಟರ್ ಸೈಕಲ್ಗಳನ್ನು ಅಧಿಕಾರಿಗಳು ಸ್ವಾಧಿನಪಡಿಸಿಕೊಂಡಿದ್ದಾರೆ. ಸದರಿ ಹೊಲದಲ್ಲಿ ದೊರೆತ ಮೇಲ್ಕಂಡ ೧೦ ಟನ್ ೮೦ ಕೆ.ಜಿ ಪಡಿತರ ಅಕಿ ಬೆಲೆಯು ಎಪಿಎಲ್ ದರದಂತೆ ಪ್ರತಿ ಕ್ವಿಂಟಲ್ಗೆ ರೂ ೨,೯೦೦/- ರಂತೆ ಒಟ್ಟು ರೂ. ೨೯೨,೩೨೦/- ಬೆಲೆ ಬಾಳುತ್ತದೆ ಮತ್ತು ಮೇಲ್ಕಂಡ ೧೫ ಕ್ವಿಂಟಲ್ ೫೦ ಕೆ.ಜಿ ಪಡಿತರ ಗೋದಿ ಬೆಲೆಯು ಎಪಿಎಲ್ ದರದಂತೆ ಪ್ರತಿ ಕ್ವಿಂಟಲ್ ಗೆ ರೂ ೨,೭೦೦/- ರಂತೆ ಒಟ್ಟು ರೂ. ೪೧,೮೫೦/- ಬೆಲೆ ಬಾಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಕುರಿತಂತೆ ಪೀಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಹಾರ ಇಲಾಖಾ ಅಧಿಕಾರಿಗಳ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.