ಸಿರುಗುಪ್ಪ, ಮಾ.19 : ತಾಲೂಕಿನ ಹಾಗಲೂರು ಗ್ರಾಮದ ಬಳಿ ಅಕ್ರಮವಾಗಿ ಪಡಿತರ ಸಾಗಣಿಕೆ ಮಾಡುತ್ತಿದ ಆಟೋ ಮೇಲೆ ಆಹಾರ ಇಲಾಖೆ ಮತ್ತು ಸ್ಥಳೀಯ ಪೋಲಿಸರು ದಾಳಿ ಮಾಡಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದರೆ.
ಹಾಗಲೂರು,ಹೆಚ್ ಹೊಸಳ್ಳಿ ಗ್ರಾಮದ ಮುಂತಾದ ಗ್ರಾಮಗಳಲ್ಲಿ ಸರ್ಕಾರ ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಹಾಗಲೂರು ಗ್ರಾಮದ ಮಾರ್ಗವಾಗಿ ಕರೂರು ಕಡೆಗೆ ಹೋಗುವ ಆಟೋದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣಿಕೆ ಮಾಡುತ್ತಿದ್ದು ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಮಹಾರುದ್ರಗೌಡ ಹಾಗೂ ಪಿಎಸ್ಐ ವೆಂಕಟೇಶ್ ಎಂ ದಾಳಿ ಮಾಡಿದರು.ದಾಳಿಯಲ್ಲಿ ಆಟೋದಲ್ಲಿ ಸಾಗಿಸುತ್ತಿದ್ದ 10.80 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿ ಆರೋಪಿಗಳಾದ ಕಾಳಿಂಗ,ಸಿದ್ದ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಈ ಪ್ರಕರಣ ಸಿರಿಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.