ದಾವಣಗೆರೆ ಹಾಗೂ ಹರಿಹರ ನಗರದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಬೆಣ್ಣೆನಗರಿಯಲ್ಲಿ ಕಾಲುವೆಗಳು ಖಾಲಿಯಾಗಿವೆ. ಎಲ್ಲೆಡೆ ನೀರಿಗೆ ಬರ ಆವರಿಸಿದೆ. ತೋಟಗಳಲ್ಲಿನ ಬೆಳೆಗಳು ಒಣಗುತ್ತಿವೆ. ರೊಚ್ಚಿಗೆದ್ದು ಕಾಲುವೆಗೆ ಇಳಿದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆ ನಗರದ ಕುಂದುವಾಡ ಬಳಿಯ ಭದ್ರಾ ಕಾಲುವೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಚಾನೆಲ್ ಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾ ಡ್ಯಾಂನಿಂದ 14 ದಿನ ನೀರು ಬಿಟ್ಟಿದ್ದರು ಕಾಲುವೆಗೆ ನೀರು ಹರಿದಿಲ್ಲ. ಜನ, ಜಾನುವಾರು, ತೋಟಗಳಿಗೆ ನೀರು ಸಿಗುತ್ತಿಲ್ಲ. ಕುಡಿಯಲು ಸಹ ನೀರು ಇಲ್ಲದೆ ಜನ ಪರದಾಡುತ್ತಿದ್ದಾರೆ. 14 ದಿನ ಸತತ ನೀರು ಹರಿದರೆ ಜೀವ ಉಳಿಸಿಕೊಳ್ಳಬಹುದು ಎಂದು ರೈತರ ಕಣ್ಣೀರಿಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಬಗ್ಗೆ ಸಚಿವರು ಕಿಂಚಿತ್ತೂ ಕಾಳಜಿ ವಹಿಸಲ್ಲ. ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಗುಡುಗಿದ್ದಾರೆ. ನಾಳೆ ಒಳಗೆ ನೀರು ಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ನಿರ್ಣಯ ತೆಗೆದುಕೊಂಡಿದ್ದಾರೆ.