ಬಳ್ಳಾರಿ, ಸೆ. 23: ಮೋಕಾ ಹೋಬಳಿಯ ಮೋಕ ಗ್ರಾಮ ಪಂಚಾಯತಿಯ ಪಾಂಡುರಂಗ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಗಿರಿಜಾ ಶಂಕರ , ಯೋಜನಾ ನಿರ್ಧೇಶಕರು ವಿನೋದ, ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅಧ್ಯಕ್ಷತೆ ಯಲ್ಲಿ ವೈಯಕ್ತಿಕ ಕಾಮಗಾರಿಗಳ ಆದೇಶ ಪತ್ರ ವಿತರಣಾ ಮೇಳ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಅಭಿಯಾನದಲ್ಲಿ ಮೋಕ, ಬಿಡಿ ಹಳ್ಳಿ,ಕಾರೇಕಲ್ಲು,ಎಮ್. ಗೋನಾಳು,ಶಿಡಿಗಿನಮೋಳ, ಯರಗುಡಿ ಗ್ರಾಮ ಪಂಚಾಯತಿಗಳ ವೈಯಕ್ತಿಕ ಫಲಾನುಭವಿಗಳಿಗೆ ಕಾಮಗಾರಿ ಅನುಷ್ಠಾನಿಸಲು ಆಧೇಶ ಪತ್ರವನ್ನು ವಿತರಣೆ ಮಾಡಲಾಯಿತು. ನಂತರ ಉಪಕಾರ್ಯದರ್ಶಿಗಳು ಮತನಾಡಿ ವೈಯಕ್ತಿಕ ಕಾಗಾರಿಗಳಾದ ದನದ ಕೊಟ್ಟಿಗೆ, ಕುರಿ ಕೊಟ್ಟಿಗೆ, ಬಚ್ಚಲಗುಂಡಿ, ಕೋಳಿ ಶೆಡ್, ಎರೆಹುಳ ಘಟಕ, ತೆರೆದ ಬಾವಿ, ಕೃಷಿ ಹೊಂಡ, ಬದು ನಿರ್ಮಾಣ, ಹಂದಿ ಕೊಟ್ಟಿಗೆ ಕಾಮಗಾರಿಗಳು ಮತ್ತು ತೋಟಗಾರಿಕೆ ಬೆಳೆಗಳ ಕುರಿತು ಸ್ವಸಹಾಯ ಸಂಘದ ಸದಸ್ಯರಿಗೆ ಮತ್ತು ಗ್ರಾಮದ ರೈತರಿಗೆ ಮಾಹಿತಿ ನೀಡಿದರು,
ಜೊತೆಗೆ ಸಹಾಯಕ ನಿರ್ದೇಶಕರು ( ಪಂ ರಾಜ್) ಅನುಷ್ಠಾನ ಇಲಾಖೆಯ ಅಧಿಕಾರಿಗಳು, 6 ಗ್ರಾಮ ಪಂಚಾಯತಿಗಳ ಪಿಡಿಓ,ಅಧ್ಯಕ್ಷರು, ಉಪಾಧ್ಯಕ್ಷರು ಸರ್ವಸದಸ್ಯರು, ವೈಯಕ್ತಿಕ ಪಲಾನುಭವಿಗಳು, PDOs, TC,TIEC,TMIS,TAEs, BFTs, GKMs ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.