ವಿಜಯಪುರ: ನಿತ್ಯ ದೈನಂದಿನ ಚಟುವಟಿಕೆಗಳಿಗೆ ನೀರೇ ಮುಖ್ಯವಾಗಿದೆ. ಆದರೆ ಇಲ್ಲಿನ ವಿದ್ಯಾರ್ಥಿನಿಯರಿಗೆ ಮಾತ್ರ ನೀರು ಸಮಯಕ್ಕೆ ಸರಿಯಾಗಿ ದೊರೆಯುತ್ತಿಲ್ಲ. ಪ್ರತಿ ದಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲೇ ಬೇಸಿಗೆ ಇರುವುದರಿಂದ ತುಂಬಾ ತೊಂದರೆ ಯಾಗುತ್ತಿದೆ.
ಹೌದು.. ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಾಮನಕೇರಿ ಸರಕಾರಿ ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ವಸತಿ ನಿಲಯದ ವಿದ್ಯಾರ್ಥಿಗಳು
ಸರಕಾರಿ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಸುಮಾರು ಒಂದು ವಾರದಿಂದ ಕುಡಿಯುವ ನೀರು ಹಾಗೂ ಬಳಕೆಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ರಾಮ ಪಂಚಾಯತಿ ವತಿಯಿಂದ ಎರಡು ಬಾರಿ ನೀರಿನ ಟ್ಯಾಂಕ್ ಮೂಲಕ ವಸತಿ ನೀಲಯಕ್ಕೆ ನೀರು ಸರಬರಾಜು ಮಾಡಿರುತ್ತಾರೆ.ಆದರೆ ನಮಗೆ ನೀರು ಸಾಕಾಗುತ್ತಿಲ್ಲ ಎಂದು ಆರೋಪ ಮಾಡಿದ ವಿದ್ಯಾರ್ಥಿಗಳು.
ಈ ವಸತಿ ನಿಲಯದಲ್ಲಿ ಸುಮಾರು 142 ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ ವಿಶೇಷವಾಗಿ ಬಡ ಮಕ್ಕಳು,ಅನಾಥ ಮಕ್ಕಳು, ದೇವದಾಸಿಯರ ಮಕ್ಕಳು ಹಾಗೂ ವಲಸೆ ಹೋದ ಮಕ್ಕಳು ಸುಮಾರು 10 ವರ್ಷ ಮೇಲ್ಪಟ್ಟು ಮತ್ತು 14 ವರ್ಷದ ಒಳಗಿನ 6 ರಿಂದ 9 ನೆಯ ತರಗತಿಯ ವಿದ್ಯಾರ್ಥಿಗಳು ವಾಸವಿದ್ದು. ಮೊದಲಿಗೆ ಇದ್ದ ಬೋರ್ ವೆಲ್ ನೀರು ಸಂಪೂರ್ಣ ಕಡಿಮೆಯಾಗಿದ್ದು.ಪ್ರತಿ ದಿನ ಮಕ್ಕಳಿಗೆ ಸ್ನಾನ ಮಾಡಲು,ಬಟ್ಟೆ ತೊಳೆಯಲು, ಅಡುಗೆ ಮಾಡಲು ಹಾಗೂ ವಿದ್ಯಾರ್ಥಿಗಳು ದಿನ ನಿತ್ಯ ಕುಡಿಯಲು ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲದೆ ಇರುವುದು ಕಂಡು ಬಂದಿರುತ್ತದೆ.
ಮಕ್ಕಳು ಬೆಳಗ್ಗೆ ಎದ್ದರೆಂದರೆ ಶೌಚ, ಸ್ನಾನದ್ದೇ ಚಿಂತೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಓದಲು ಸಾಧ್ಯವೇ? ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವೇ? ಒಂದು ವಾರದಿಂದ ಇದೇ ಪರಿಸ್ಥಿತಿ, ವಿದ್ಯಾರ್ಥಿಗಳು ನಿತ್ಯ ಗೋಳು ಅನುಭವಿಸುತ್ತಿದ್ದಾರೆ.ಒಂದು ಕಡೆ ಓದಬೇಕೆಂಬ ಹಂಬಲ, ಮತ್ತೊಂದು ಕಡೆ ಮೂಲ ಸೌಲಭ್ಯಗಳ ಕೊರತೆ. ಸಮಸ್ಯೆ ಎದುರಿಸಲೂ ಆಗದೆ ಪರಿಹರಿಸಿಕೊಳ್ಳಲೂ ಆಗದೆ ತೊಳಲಾಡುತ್ತಿದ್ದಾರೆ. ಪ್ರತಿಭಟನೆ ಮಾಡಿದರೆ ಎಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ಕುತ್ತು ಬರುತ್ತದೋ ಎಂಬ ಭೀತಿಯಲ್ಲಿ ವಿದ್ಯಾರ್ಥಿಗಳು ಸುಮ್ಮನಿದ್ದಾರೆ.
ಅಧಿಕಾರಿಗಳೇ, ಒಮ್ಮೆ ಇತ್ತ ಕಡೆ ನೋಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕುಡಿಯುವ ನೀರು ಮತ್ತು ಶೌಚಾಲಯ ಸಮಸ್ಯೆ ಬಗೆಹರಿಸಿ ಅವರ ವಿದ್ಯಾಭ್ಯಾಸಕ್ಕೆ ಸಹಕರಿಸಿ.
ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಸಮಸ್ಯೆಯ ಬಗ್ಗೆ ಹಲವು ಬಾರಿ ಅಲ್ಲಿನ ಗುರುಮಾತೆಯರಾದ ದ್ರಾಕ್ಷಿಣಿ ಮೇಡಮ್ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಸಹ ಯಾವುದೇ ಪ್ರಯೋಜನ ಇನ್ನುವರೆಗೂ ಆಗಿರುವುದಿಲ್ಲ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವಸತಿ ನಿಲಯಕ್ಕೆ ಬೇಟಿ ಕೊಟ್ಟು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು.ವಸತಿ ನಿಲಯಕ್ಕೆ ಬಹು ಹಳ್ಳಿ ಕುಡಿಯವ ನೀರಿನ ಪೈಪ್ಲೈನಿಗೆ ಕಲೆಕ್ಷನ್ ಜೋಡಣೆ ಮಾಡುತ್ತಿದ್ದು. ನೀರಿನ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡುತ್ತಾರೋ ಇಲ್ಲವೋ ಕಾಯ್ದು ನೋಡಬೇಕಾಗಿದೆ.