ವಿಜಯಪುರ.ಫೆ.24: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಭೈರವಾಡಗಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದ್ದು. ಪೈಪ್ ಲೈನ್ ಹಾಕುವುದಕ್ಕೆ ರಸ್ತೆ ಅಗೇದಿರುತ್ತಾರೆ.ಅಗೆದ ರಸ್ತೆಗಳನ್ನು ಸರಿಯಾದ ರೀತಿಯಲ್ಲಿ.ಕಾಮಗಾರಿ ಮಾಡದೆ ಇರುವುದರಿಂದ ಅಲ್ಲಿನ ಗ್ರಾಮಸ್ಥರು ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ಮತ್ತು ಗ್ರಾಮಸ್ಥರ ನಡುವೆ ಬೈರವಾಡಗಿ ಗ್ರಾಮದ ಹೊಸೂರಿನಲ್ಲಿ ವಾಗ್ವಾದ ನಡೆಯಿತು.
ರಸ್ತೆ ಅಗೆದು ಮಧ್ಯ ಭಾಗದಲ್ಲಿ ಪೈಪ್ ಲೈನ್ ಅಳವಡಿಸಿ ಯೋಜನೆ ಕಾರ್ಯ ನಡೆದಿದೆ.
ಅಗೆದ ರಸ್ತೆ ಸರಿಯಾಗಿ ದುರಸ್ತಿಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಜಲ ಜೀವನ ಮಿಷನ್ ಯೋಜನೆ ಅಡಿ ಪೈಪ್ ಹಾಕುವ ಕೆಲಸ ಸರಿ ನಡೆಯುತ್ತಿಲ್ಲ.ವಾಹನ ಹಾಯ್ದು ಹೋದರೂ ಪೈಪ್ಗಳು ಒಡೆಯಬಾರದು. ಪೈಪ್ ಲೈನ್ ಹಾಕುವುದಕ್ಕೆ ತೆಗೆದ ತೆಗ್ಗಿನಲ್ಲಿ ಮಣ್ಣು ಬಿದ್ದಿರುತ್ತದೆ. ಅದನ್ನು ತೆಗೆಯದೆ ಹಾಗೂ ನೆಲಕ್ಕೆ ನೀರು ಹೊಡೆಯದೆ ಕಾಂಕ್ರಿಟ್ ಹಾಕುತ್ತಿದ್ದಾರೆ. ಗುಣಮಟ್ಟದ ಕಾಮಗಾರಿ ಮಾಡುತ್ತಿಲ್ಲ.ಎಂದು ಎಸ್. ಎಮ್. ಕೆಳಗೇರಿ ದೂರಿದ್ದಾರೆ .
ನನ್ನ ಮನೆಯ ಮುಂದೇನೆ ಸುಮಾರು ಐವತ್ತು ಮೀಟರ್ ದಷ್ಟು ಅಗೆದ ಗುಂಡಿಗಳಲ್ಲಿ ಮಣ್ಣು ಬಿದ್ದರು ಅದನ್ನು ತೆಗೆಯದೆ ಕಾಂಕ್ರೀಟ್ ಹಾಕಿದ್ದಾರೆ ಇದರಿಂದ ಭಾರವಾದ ವಾಹನಗಳಿಂದ ಪೈಪ್ ಒಡೆದು ನೀರು ಸೋರಬಹುದು.ಉತ್ತಮ ಕಾರ್ಯ ಕೈಗೊಳ್ಳಬೇಕು. ಎಲ್ಲಿಯೂ ಪೈಪ್ ಲೈನ್ ಒಡೆಯದಂತೆ ರಸ್ತೆ ದುರಸ್ಥಿ ಮಾಡಬೇಕು ಎಂದು ಗುತ್ತಿಗೆದಾರ ಮತ್ತು ದಲಿತ ಮುಖಂಡರಾದ ಭಿಮ್ಮಪ್ಪ ರಾ.ನಡಗೆರಿ ಇವರೆ ನಡುವೆ ಮಾತಿನ ಚಕಮಕಿ ನಡೆಯಿತು.
ಇದೆ ರೀತಿಯಾಗಿ ಗ್ರಾಮದಲ್ಲಿ ಕಾಮಗಾರಿ ಮುಂದುವರೆದಲ್ಲಿ ಹೊರಟ ಮಾಡಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಮಹಿಳೆಯರು, ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರಹಾಕಿದರು.