ಬಳ್ಳಾರಿ : ಭಾರತೀಯ ಜನತಾ ಪಕ್ಷದಿಂದ ಮಾತ್ರ ದೇಶದ ಅಭಿವೃದ್ಧಿ ಮತ್ತು ಭದ್ತತೆ ಸಾಧ್ಯ, ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಬಿ ಶ್ರೀರಾಮುಲು ರವರಿಗೆ ಮತನೀಡಿ ಮೋದಿಯವರನ್ನು ಮೂರನೇ ಭಾರಿಗೆ ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡಿ ದೇಶದ ಅಭಿವೃದ್ಧಿಗೆ ಕೈ ಜೋಡಿಸೋಣ ದಯವಿಟ್ಟು ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಬಿ ಶ್ರೀರಾಮುಲು ರವರಿಗೆ ಮತ ನೀಡಿ ಎಂದು ಜನತಾ ದಳ (ಜಾತ್ಯತೀತ) ಬಳ್ಳಾರಿ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮನವಿ ಮಾಡಿದರು.
ಅವರು ಬಳ್ಳಾರಿ ಗ್ರಾಮಾಂತರ ಪ್ರದೇಶದ ಗ್ರಾಮಗಳಾದ ಚರಕುಂಟೆ, ಸಂಜೀವರಾಯನಕೋಟೆ, ಶಂಕರಬಂಡೆ, ಕಮ್ಮರಚೇಡು, ಎತ್ತಿನಬೂದಿಹಾಳ್ ಮತ್ತು ಮಿಂಚೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಿ ಮಾತನಾಡಿ, ತುಕಾರಾಮ್ ಈಗಾಗಲೇ ಶಾಸಕರಾಗಿದ್ದಾರೆ, ಅವರು ಸೋತರೂ ಶಾಕರಾಗಿರತ್ತಾರೆ, ಗೆದ್ದರೆ ಸಂಸದರಾಗಿರುತ್ತಾರೆ, ಆದರೆ, ಶ್ರೀರಾಮುಲು ಸೋತರೆ ಮನೆಯಲ್ಲಿರಬೇಕಾಗುತ್ತದೆ, ಕಾರಣ ಅವರಿಗೆ ಮತ ನೀಡಿ ಪಾರ್ಲಿಮೆಂಟ್ ಗೆ ಕಳಿಸೋಣೆ ಎಂದರು. ಶ್ರೀರಾಮುಲು ಗ್ರಾಮಾಂತರ ಪ್ರದೇಶದಲ್ಲಿ ಈ ಹಿಂದ ಶಾಸಕರಾಗಿ ಸಂಸದರಾಗಿ ಮತ್ತು ಸಚಿವರಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ನೀವು ಮತ ನೀಡಬೇಕೆಂದರು.
ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಲೋಕಸಭಾ ಚುನಾವಣೆ ನಂತರ ಇರುತ್ತಾವೋ ಇಲ್ಲವೋ ಗೊತ್ತಿಲ್ಲ, ಕೇಂದ್ರ ಸರ್ಕಾರದ ಐದು ಕೆ.ಜಿ ಅಕ್ಕಿಯನ್ನು ತನ್ನದು ಎಂದು ರಾಜ್ಯ ಸರ್ಕಾರ ಹೇಳುತ್ತಿದೆ, ತನ್ನ ಪಾಲಿನ ಐದು ಕೆ.ಜಿ ಅಕ್ಕಿಯ ಬದಲಾಗಿ ಖಾತೆಗೆ ಹಣ ಜಮೆ ಮಾಡುತ್ತಿದ್ದಾರೆ, ಅದು ಕೂಡ ಇನ್ನೂ ಹಲವಾರು ಜನರ ಖಾತೆಗೆ ಜೆಮೆಯಾಗಿಲ್ಲ, ಮತ್ತು ಗೃಹಲಕ್ಷ್ಮಿ ಯೋಜನೆ ಎರಡು ಸಾವಿರ ರೂಪಾಯಿ ಸಹ ಯಾವಾಗ ನಿಂತು ಹೋಗುವೋದು ಗೊತ್ತಿಲ್ಲ ಎಂದು ಯೋಜನೆಗಳನ್ನು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಮಾಜಿ ಮಹಾನಗರ ಪಾಲಿಕೆ ಸದಸ್ಯ ಕೃಷ್ಣ, (ಕಿಟ್ಟಿ) ಮುಖಂಡರಾದ ವಂಡ್ರಿ, ಯಲ್ಲನಗೌಡ, ಕಿರಣ್ ಕುಮಾರ್, ಚಾಗನೂರು ನಾಗರಾಜ್, ಮೀನಳ್ಳಿ ರಾಮಾಂಜಿನಿ, ಬಸಪ್ಪ, ಬಿ.ಜೆ.ಪಿ ಮುಖಂಡ ಸೋಮಶೇಖರಗೌಡ, ಕುಮಾರ್, ಸಿದ್ದು ಹೆಗಡೆ, ರಾಮು, ಮುತ್ತು ಸೇರಿದಂತೆ ಮೇಲ್ಕಂಡ ಗ್ರಾಮಗಳ ಹಲವಾರು ಜನ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಮುಖಂಡರಿದ್ದರು.