ಬಳ್ಳಾರಿ : ಕಳೆದ ಮಾರ್ಚ್ 24 ರಂದು ರಾತ್ರಿ ಆಂಧ್ರ ಪ್ರದೇಶದ ಕೋವೂರು ಟೋಲ್ ಗೇಟ್ ಬಳಿ ಅನುಮಾನಾಸ್ಪದವಾಗಿ ಪ್ರವೀಣ್ ಪಗಡಾಲ ಸಾವಿಗೀಡಾಗಿದ್ದು ಈ ಕುರಿತು ತನಿಖೆ ನಡೆಸಬೇಕೆಂದು ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಕಾರ್ಯಾಧ್ಯಕ್ಷರಾದ ಕೆ.ಪೃಥ್ವಿರಾಜ್ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ತಮ್ಮ ಬೆಂಬಲಿಗರು, ಸಮತಾ ಸೈನಿಕ ದಳದ ಪದಾಧಿಕಾರಿಗಳೊಂದಿಗೆ ಡಿಸಿ ಕಚೇರಿಗೆ ಭೇಟಿಯಾಗಿ ಸುದೀರ್ಘ ಮನವಿ ಪತ್ರ ಸಲ್ಲಿಸಿರುವ ಅವರು, ಪ್ರವೀಣ್ ಪಗಡಾಲ ಸಾವಿನ ಬಗ್ಗೆ ಇರುವ ಅನುಮಾನ ಸರಿದೂಗಿಸಲು ವಸ್ತುನಿಷ್ಠ ತನಿಖೆ ನಡೆಸಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಬರೆದ ಮನವಿ ಪತ್ರವನ್ನು ಬಳ್ಳಾರಿ ಡಿಸಿ ಮೂಲಕ ಒತ್ತಾಯಿಸಿದರು. ಮೃತ ಪ್ರವೀಣ್ ಪಗಡಾಲ ಆಂಧ್ರಪ್ರದೇಶದ ಪ್ರಖ್ಯಾತ ಕ್ರೈಸ್ತ ಬೋಧಕರಾಗಿದ್ದರು.
ಮೋಟಾರ್ ಬೈಕ್ ಅಪಘಾತದಲ್ಲಿ ಅವರು ಮರಣ ಹೊಂದಿದರು ಎಂದು ಪೊಲೀಸ್ ಇಲಾಖೆ ವರದಿ ನೀಡಿದೆ. ಪ್ರವೀಣ್ ಪಗಡಾಲ ಸಾವಿನ ಹಿನ್ನೆಲೆಯಲ್ಲಿ ಅನೇಕ ಕ್ರೈಸ್ತ ನಾಯಕರುಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಪಘಾತ ಸ್ಥಳದಲ್ಲಿ ಕೆಲವು ಅನುಮಾನಾಸ್ಪಪದ ವಿಷಯಗಳು ಕಂಡುಬAದಿವೆ ಎಂದು ಅವರು ಮನವಿ ಪತ್ರದಲ್ಲಿ ಸವಿವರಗಳನ್ನು ನೀಡಿದ್ದಾರೆ.
ಇದೊಂದು ಪೂರ್ವ ಯೋಜಿತ ಹತ್ಯೆಯಾಗಿದೆ. ಈ ಕುರಿತು ನಮಗೆ ಅನುಮಾನವಿದೆ ಎಂದು ಕ್ರೆöÊಸ್ತ ಪಾದ್ರಿಗಳು ಹೇಳಿದ್ದಾರೆ. ಅಲ್ಲಿನ ಆಂಧ್ರಪ್ರದೇಶ ಸರ್ಕಾರ ಸೂಕ್ತ ತ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಬೇಕು. ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ಕರ್ನಾಟಕ ಮೀನೋರ ಕ್ರಿಸ್ಟಿಯನ್ ವೆಲ್ಫೇರ್ ಸಂಘಟನೆ ಪದಾಧಿಕಾರಿಗಳು ಕೂಡ ಆಗ್ರಹಿಸಿದ್ದಾರೆ. ಉಪಾಧ್ಯಕ್ಷರಾದ ಮಾರ್ಟಿನ್ ವಿಜಯಕುಮಾರ್, ಕಾರ್ಯದರ್ಶಿ ವಿಶ್ವನಾಥ್ ಫಸ್ಟಾರ್ ಸ್ವಾಮಿ, ಸಜ್ಜನ್ ಸಾರಥಿ, ಪಾಸ್ಟರ್ ಗಳು ನೀಲಪ್ಪ ಸ್ವಾಮಿ, ಸುರೇಶ್, ಮಹಿಳಾ ಅಧ್ಯಕ್ಷ ಕಮಲಮ್ಮ , ರಾಜು ಫಾಸ್ಟರ್ ಹಾಗು ಅನೇಕ ಕ್ರೈಸ್ತ
ನಾಯಕರುಗಳು ಬೋಧಕರುಗಳು ಸಹಿತ ನಿಯೋಗದೊಂದಿಗೆ ಇದ್ದು ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಫಾದರ್ ಐವಾನ್ ಪಿಂಟೋ, ರಾಜಣ್ಣ, ಕೊಂಡಯ್ಯ, ಕೃಷ್ಣ, ನಾಸೀರ್ ಹುಸೇನ್, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.