ಬಳ್ಳಾರಿ:23.02.2024- ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಸ ಮಾ ಹಿ ಪ್ರಾ ಶಾಲೆ ಪಟೇಲ್ ನಗರ ಶಾಲೆಯಲ್ಲಿ ನಡೆದ ದಿ.ಯರಗುಡಿ ನಾರಾಯಣ ರಾವ್ ಸುಮಿತ್ರಮ್ಮದತ್ತಿ ಹಾಗೂ ದಿ.ಎನ್ ಮುರುಗೇಂದ್ರಪ್ಪ ದಿ.ಎನ್ ಸರ್ವ ಮಂಗಳಮ್ಮ ದತ್ತಿ ಕಾರ್ಯಕ್ರಮದಲ್ಲಿ ಶ್ರೀ ಸಿ ಡಿ ಗೂಳೆಪ್ಪ ಶಿಕ್ಷಣ ಸಂಯೋಜಕರು ಬಳ್ಳಾರಿ ರವರು ಕನ್ನಡ ಭಾಷೆ ಬರೀ ಉಚ್ಛರಿಸುವ ಧ್ವನಿಯಲ್ಲ,ಬರೆದ ಅಕ್ಷರ ಬರೀ ಅಕ್ಷರವಲ್ಲ ಸತ್ಯ ಸತ್ವದ ಬೀಜಗಳು.ಸದಾ ಅಧ್ಯಯನ ಶೀಲರಾಗಿ ಓದುವ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ಮನೋಭಾವ ರೂಢಿಸಿಕೊಳ್ಳಬೇಕು ಸೋತಾಗ ಅದು ಪಾಠವಾಗಿ ಗೆಲುವಿಗೆ ದಾರಿಯಾಗುತ್ತದೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾಮಾಜಿಕ ಸಾಂಸ್ಕೃತಿಕ ಪ್ರೌಢಿಮೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಯೋಗ ನಾಗರಾಜ ರವರು ಕನ್ನಡವು ಬರೀ ಪಠ್ಯ ಪುಸ್ತಕದ ಭಾಷೆಗೆ ಸೀಮಿತವಾಗಿರದೆ ಮಾನವನ ಸರ್ವತೋಮುಖ ಬೆಳವಣಿಗೆಗೆ, ಅಭಿವೃದ್ಧಿಗೆ ಬೆಳಕಾಗಿದೆ ನಿಟ್ಟಿನಲ್ಲಿ ಸರ್ವ ಸಾಹಿತ್ಯವನ್ನು ಅಧ್ಯಯನ ಮಾಡಿ, ಸರ್ವ ರೊಂದಿಗೆ ಹೊಂದಿಕೊಂಡು ಬದುಕುವ ಕಲೆ ಕರಗತ ಮಾಡಿಕೊಂಡು ಜೀವನ ನಡೆಸಬೇಕೆಂದು ತಿಳಿಸಿದರು.
ದತ್ತಿದಾನೆಗಳಾದ ಶ್ರೀ ಯರಗುಡಿ ರಂಗನಾಥರಾವ್ ನ್ಯಾಯವಾದಿಗಳು ಬಳ್ಳಾರಿ ರವರು ಕನ್ನಡ ನಾಡಿನವರಾದ ನಾವು ಸುಸಂಸ್ಕೃತರಾಗಿ ಜೀವಿಸಲು ತಂದೆ ಮತ್ತು ತಾಯಿಯ ಸ್ಪೂರ್ತಿಯೇ ನಮ್ಮ ಏಳಿಗೆಗೆ ಕಾರಣ ಎಂದು ತಿಳಿಸಿದರು
ಶ್ರೀ ಎನ್ ವಿವೇಕಾನಂದ ಸ್ವಾಮಿ ನ್ಯಾಯವಾದಿಗಳು ಬಳ್ಳಾರಿ ರವರು ಮಾತನಾಡುತ್ತ ಹೆತ್ತವರು ಮತ್ತು ಗುರು ಹಿರಿಯರ ಸ್ಮರಣೆ ಮತ್ತು ಸಂಸ್ಕಾರ ನಮ್ಮ ಬದುಕಿಗೆ ಪುರಸ್ಕಾರ ಎಂದು ತಿಳಿಸಿದರು
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಬಿಸಲಹಳ್ಳಿ ಬಸವರಾಜ ಕಾರ್ಯದರ್ಶಿಗಳು ಜಿಲ್ಲಾ ಕಸಾಪ ಬಳ್ಳಾರಿ ರವರು ಕನ್ನಡ ಉಳಿಮೆ ಗರಿಮೆಗೆ ಸದಾ ಹಿರಿಮೆಗೆ ಶ್ರಮಿಸಬೇಕು ಪ್ರತಿ ಮಾಸಿಕವಾಗಿ ಕನ್ನಡ ಭಾಷೆ ಸರ್ವರ ಕಲೆ ಸಾಹಿತ್ಯ ಸಂಗೀತ ನೃತ್ಯ ನಾಟಕ ಅಭಿನಯವನ್ನು ಅಭಿವ್ಯಕ್ತಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ನೀಡುತ್ತದೆ ಎಂದು ತಿಳಿಸಿದರು
ಕಲಾ ಸಾಹಿತ್ಯ ಸಮಾಜದಲ್ಲಿ ಸಾಧನೆಗೈದ ಗಣ್ಯರಾದ ಶ್ರೀ ಬಿ ಕುಮಾರಗೌಡ ಜನಪದ ಕಲಾವಿದರು ಅಮರಾಪುರ, ಶ್ರೀ ಜಡೇಶ್ ಎಮ್ಮಿಗನೂರು ಜನಪದ ಕಲಾವಿದರು ಹಾಗೂ ಶ್ರೀ ಬಿ ಹನುಮಂತರಾವ್ ಸಮಾಜ ಸೇವಕರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು
ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರಾದ ಎ ಎರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮೊಬೈಲು ಟಿವಿ ಸಿನಿಮಾ ಗೀಳಿಗೆ ಹೋಗದೆ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸಿಕೊಂಡರು ಪ್ರಬುದ್ಧರಾಗಲು ತಿಳಿಸಿದರು
ಕಾರ್ಯಕ್ರಮದಲ್ಲಿ ಶ್ರೀ ಟಿ ಪ್ರಕಾಶ್ ಕಾರ್ಯದರ್ಶಿಗಳು ಕಾಸಪ ಬಳ್ಳಾರಿ ನಿರೂಪಿಸಿದರು
ಶ್ರೀ ವೀರಭದ್ರ ಆಚಾರ್ ಮುಖ್ಯ ಗುರುಗಳು ಸ್ವಾಗತಿಸಿದರು ಶ್ರೀಮತಿ ಟಿ ವಿಜಯಲಕ್ಷ್ಮಿ ಮುಖ್ಯ ಗುರುಗಳು ಸ ಮಾ ಹಿ ಪ್ರಾ ಶಾಲೆ ಪಟೇಲ್ ನಗರ, ಶ್ರೀ ತಿಪ್ಪನಗೌಡ ಮುಖ್ಯ ಗುರುಗಳು ರಾಮಯ್ಯ ಕಾಲೋನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕ ಸಾ ಪ
ಕಾರ್ಯದರ್ಶಿಗಳಾದ ಶ್ರೀ ಹುಸೇನ್ ಬಾಷಾ ವಕೀಲರು ವಂದಿಸಿದರು