ಫಲಶೃತಿ ಸುದ್ದಿ
ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೦೪: ಕಾರೇಕಲ್ಲು ಗ್ರಾಪಂ ಕಾರ್ಯಾಲಯದಲ್ಲಿ ಹೇಳುವವರಿಲ್ಲ- ಕೇಳುವವರಿಲ್ಲ, ಕಾರ್ಯಾಲಯಕ್ಕೆ ಬೀಗ ಹಾಕಿ, ವಿಹಾರಕ್ಕೆ ಪಿಡಿಒ ಎಂಬ ಶಿರ್ಷಿಕೆ ಅಡಿಯಲ್ಲಿ ಸುವರ್ಣವಾಹಿನಿ ಕನ್ನಡ ದಿನ ಪತ್ರಿಕೆಯಲ್ಲಿ ಜ.೪ ರಂದು ಪ್ರಕಟಗೊಂಡಿದ್ದ ವಿಶೇಷ ವರದಿಗೆ ಪ್ರತಿಕ್ರಿಯೆ ದೊರೆತಿದೆ.
ನೀರಿನ ಸಮಸ್ಯೆಗೆ ಪರಿಹಾರ: ಕಳೆದ ೭ ದಿನಗಳಿಂದ ಕಾರೇಕಲ್ಲು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಯಾಗಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯಕ್ಕಾಗಿ ಅಧಿಕಾರಿಗಳನ್ನು ಸಂರ್ಪಕಿಸಲು ಗ್ರಾಮಸ್ಥರು ಕಚೇರಿಗೆ ಹೋದರೆ ಕಾರ್ಯಾಲಯಕ್ಕೆ ಬೀಗ ಹಾಕಿದ್ದಾರೆ, ನಮ್ಮ ಸಮಸ್ಯೆ ಕೇಳುವವರು ಯಾರು? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸವರ್ಷಾಚರಣೆ ಪ್ರವಾಸವೆಂದು ಸತತ ಮೂರು ದಿನಗಳಿಂದ ಸಿಬ್ಬಂದಿ ಇಲ್ಲದೇ ಇರುವುದರಿಂದ ಸಮಸ್ಯೆಗಳನ್ನು ಪರಿಹರಿಸುವವರ ಯಾರು? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಉಸ್ತುವಾರಿ ಸಚಿವರ ಪ್ರತಿಕ್ರಿಯೆ: ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾರೇಕಲ್ಲು ಗ್ರಾಮದಲ್ಲಿ ಜನರಿಗೆ ಆಗಿರುವ ಅನಾನುಕೂಲುದ ಕುರಿತು ಸುವರ್ಣವಾಹಿನಿ ಪತ್ರಿಕೆಯಲ್ಲಿ ಪ್ರಕಟಗೊಂಡಿAದನ್ನು ಗಮನಿಸಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ, ಬಳ್ಳಾರಿ ಜಿಲ್ಲಾ ಉಸುವಾರಿ ಸಚಿವ ಬಿ.ನಾಗೇಂದ್ರ ಅವರು ಈ ವಿಷಯಕ್ಕೆ ಸ್ಪಂದಿಸಿದ್ದು, ಕೂಡಲೇ ಸ್ಥಳಕ್ಕೆ ವಿಶೇಷ ಕರ್ತವ್ಯಾಧಿಕಾರಿಗಲಾದ ಡಾ. ವೆಂಕಟಗಿರಿ ದಳವಾಯಿರವರು ಮತ್ತು ಆಪ್ತ ಸಹಾಯಕರಾದ ತಿಮ್ಮಪ್ಪ ಜಿ, ಚೇತನ್ ಕುಮಾರ್ರವರು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಕೂಡಲೆ ಪರಿಹರಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಧಾವಿಸಿದ್ದು ಪರಿಸ್ಥಿತಿಯನ್ನು ಪರಿಶೀಲಿಸಿದರು.
ಪಂಚಾಯಿತಿಯಲ್ಲಿರುವ ಸಿಬ್ಬಂದಿ ಸೇರಿದಂತೆ, ಗ್ರಾಮ ಪಂಚಾಯಿತಿ ಸದಸ್ಯರು, ಉಪಸ್ಥಿತರಿದ್ದ ಜನರನ್ನು ಒಳಗೊಂಡAತೆ ಸಮಸ್ಯೆಗಳ ಕುರಿತು ಚರ್ಚಿಸಿ, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವAತೆ ಸೂಚನೆ ನೀಡಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಪಿಡಿಒ ರಿಗೆ ಇತರೆ ಸಮಸ್ಯೆಗಳ ಕುರಿತು ಕೂಡಲೇ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಬೇಸಿಗೆ ಸಮೀಪದಲ್ಲಿರುವ ಕಾರಣ ಕುಡಿಯುವ ನೀರಿನ ಆಭಾವ ಉಂಟಾಗದAತೆ ಶುದ್ಧ ಕುಡಿಯುವ ನೀರಿನ ಘಟಕಗಳು ತಕ್ಷಣ ದುರಸ್ತಿ ಮಾಡಲು ಸೂಚಿಸಿದರು. ಇಂತಹ ಪ್ರಕರಣ ಮರುಕಲಿಸದಂತೆ ಮುಂದಿನ ದಿನಗಳಲ್ಲಿ ನೋಡಿಕೊಳ್ಳಬೇಕೆಂದು ಇಲ್ಲವಾದಲ್ಲಿ ಸಚಿವರ ಸೂಚನೆ ಮೇರೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪÀಡಿಸಿದರು.
ಪಿಡಿಒ ಮತ್ತಿತರ ಸಿಬ್ಬಂದಿಗೆ ನೋಟಿಸ್ ಜಾರಿ:
ಕಾರೇಕಲ್ಲು ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷö್ಯದ ಬಗ್ಗೆ ವರದಿಗೆ ಪ್ರತಿಕ್ರಿಯೆ ನೀಡಿದ ಬಳ್ಳಾರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಕಾರೇಕಲ್ಲು ಗ್ರಾಮ ಪಂಚಾಯತಿಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿಗಳ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತೆನೆಂದು ಸ್ಪಷ್ಟಪಡಿಸಿದರು, ಗ್ರಾಮೀಣ ಪ್ರಾಂತದಲ್ಲಿ ಪಂಚಾಯಿರಿ ಅಭಿವೃದ್ಧಿ ಅಧಿಕಾರಿಗಳು ಉತ್ತಮ ಬಾಂಧವ್ಯ ಹೊಂದಿರಬೇಕು, ಅಭಿವೃದ್ಧಿ ಕೆಲಸದಲ್ಲಿ ನಿರ್ಲಕ್ಷ ತೋರಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪಿಡಿಒ ರುದ್ರಪ್ಪ ರಜೆ ತೆಗೆದುಕೊಂಡಿದ್ದಾರೆ ಆದರೆ ಪಂಚಾಯಿತಿ ಸಿಬ್ಬಂದಿ ರಜೆ ತೆಗೆದುಕೊಂಡ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಇದರ ಬಗ್ಗೆ ಸತ್ಯಂಶ ನೋಡಿ ಪಂಚಾಯತಿಗೆ ಭೇಟಿ ನೀಡಿ ಅವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.