ಸುವರ್ಣವಾಹಿನಿ ಸುದ್ದಿ
ಕೊಪ್ಪಳ,ಡಿ,೨೩: ಇಲ್ಲಿನ ಶ್ರೀ ರಾಘವೇಂದ್ರ ಮಠದಲ್ಲಿ ಕಾರ್ತಿಕೋತ್ಸವ ನಿಮಿತ್ಯ ಕಾರ್ತಿಕೋತ್ಸವ ದೀಪಾಲಂಕರವನ್ನು ಅದ್ಧೂರಿಯಿಂದ ನೆರವೇರಿಸಲಾಯಿತು. ಕಾರ್ತಿಕೋತ್ಸವ ನಿಮಿತ್ಯ ಬೆಳಿಗ್ಗೆಯಿಂದಲೇ ವಿಶೇಷ ಅಲಂಕಾರ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಭಕ್ತರು ದೀಪಗಳನ್ನು ಹಚ್ಚುವ ಮೂಲಕ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಮಠದ ವ್ಯವಸ್ಥಾಪಕರಾದ ಜಗನ್ನಾಥ ದೇಸಾಯಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು, ಇದರಲ್ಲಿ ಮಠದ ಪ್ರಧಾನ ಅರ್ಚಕರಾದ ಪಂಡಿತ್ ರಘುಪ್ರೇಮಾಚಾರ್ ಮುಳುಗುಂದ, ರಂಗಣ್ಣ ಸೊರಟೂರು, ಕೃಷ್ಣ ಸೊರಟೂರು, ಆಡಳಿತ ಮಂಡಳಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಕಾರ್ತಿಕ ದೀಪದಲ್ಲಿ ಶ್ರೀ ರಾಘವೇಂದ್ರದಲ್ಲಿ ಸ್ವರ್ಗವೇ ದರಗೆಳಿದಂತೆ ಭಾಸವಾಗುತ್ತಿತ್ತು.