ಆಫ್ರಿಕಾ,ಜ,೧೮: ತಾಂಜಾನಿಯಾದ ಕಿಲಿ ಪೌಲ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಭಾರತೀಯ ಸಿನಿಮಾ ಹಾಡುಗಳ ಮೂಲಕ ಭಾರತದಲ್ಲಿ ಫೇಮಸ್ ಆಗಿರುವ ಕಿಲಿ ಪೌಲ್, ಇದೀಗಾ ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ ಎಂಬ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊAಡಿದ್ದಾರೆ. ಬಾಲಿವುಡ್ ಹಾಡುಗಳು ಸೇರಿದಂತೆ ಸಾಕಷ್ಟು ಭಾರತೀಯ ಹಾಡುಗಳಿಗೆ ಡಾನ್ಸ್ ಮತ್ತು ಲಿಪ್-ಸಿಂಕ್ ಮಾಡುವ ಮೂಲಕ ನೆಟ್ಟಿಗರ ಮನಗೆದಿದ್ದ ಕಿಲಿ ಪೌಲ್. ಇದೀಗಾ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಷನೆಗೆ ದಿನ ಸಮೀಪಿಸುತ್ತಿದ್ದಂತೆ ‘ರಾಮ್ ಸಿಯಾ ರಾಮ್’ ಹಾಡು ಹಾಡುವ ಮೂಲಕ ಅಯೋಧ್ಯೆಗೆ ಭೇಟಿ ನೀಡುವ ಆ ಶುಭ ಘಳಿಗೆಗಾಗಿ ಕಾಯುತ್ತಿದ್ದೇನೆ ಎಂಬ ಹೇಳಿಕೊಂಡಿದ್ದಾರೆ.ಕಿಲಿ ಪೌಲ್ ಜನವರಿ ೧೬ರಂದು ಹಂಚಿಕೊAಡಿರುವ ವಿಡಿಯೋದಲ್ಲಿ ‘ರಾಮ್ ಸಿಯಾ ರಾಮ್’ ಹಾಡಿನ ತುಣುಕೊಂದನ್ನು ಹಾಡಿದ್ದಾರೆ. ಜೊತೆಗೆ ‘ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ’ ಎಂದು ವಿಡಿಯೋಗೆ ಕ್ಯಾಪ್ಷನ್ ಕೂಡ ಬರೆದಿದ್ದಾರೆ. ಈ ಮೂಲಕ ದಕ್ಷಿಣಾ ಆಫ್ರಿಕಾದಲ್ಲಿಯೂ ಶ್ರೀರಾಮ ಘೋಷ ಮೊಳಗಿದೆ.
ಕಿಲಿಪೌಲ್ ಹಂಚಿಕೊAಡಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಕಷ್ಟು ಬಳಕೆದಾರರು ಜೈ ಶ್ರೀರಾಮ್ ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.