ಸುವರ್ಣವಾಹಿನಿ ಸುದ್ದಿ
ಕೂಡ್ಲಿಗಿ,ಜ,೨೩: ಪಟ್ಟಣದ ಹೊರ ವಲಯದಲ್ಲಿ, ಅಕ್ರಮವಾಗಿ ಅನಿಲ ಸಿಲಿಂಡರ್ ದಾಸ್ತಾನು ಮಾಡುತ್ತಿದ್ದ ವೇಳೆ. ಅನಿಲ ತುಂಬಿದ ಸಿಲಿಂಡರ್ ಗಳಿದ್ದ ವಾಹನ ಸಮೇತ, ಸಿಕ್ಕಿ ಹಾಕಿ ಕೊಂಡಿರುವ ಘಟನೆ ಜರುಗಿದೆ ಎಂದು. ಹೋರಾಟಗಾರರು ಅಗತ್ಯ ವೀಡಿಯೋಗಳು, ಹಾಗೂ ಸಾಕ್ಷ್ಯಾಧಾರಗಳ ಸಮೇತ ಮಾಹಿತಿ ನೀಡಿದ್ದಾರೆ. ಕೂಡ್ಲಿಗಿ ತಾಲೂಕಿನ ಬಣವೀಕಲ್ಲು ಗ್ರಾಮದಲ್ಲಿರುವ “ಚಿತ್ತಪ್ಪ ಹೆಚ್.ಪಿ. ಗ್ಯಾಸ್ ಏಜೆನ್ಸಿ” ಗ್ರಾಮೀಣ ವಿತರಕ, ವ್ಯವಸ್ಥಾಪಕರು ಜಿ. ಮಂಜುಳಾ ವಿಳಾಸಕ್ಕೆ ಸಂಬAಧಿಸಿದ ೧೪೦ ಅನಿಲ ತುಂಬಿದ ಸಿಲಿಂಡರ್ಗಳ ಸಮೇತ. ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ, ಅಂಗಡಿಯೊAದರಲ್ಲಿ ಅಕ್ರಮ ದಾಸ್ತಾನು ಮಾಡುತ್ತಿರುವ ಸಂದರ್ಭದಲ್ಲಿ. ರಾಷ್ಟ್ರೀಯ ಮಾನವ ಹಕ್ಕುಗಳ ಹಾಗೂ ಸಾಮಾಜಿಕ ನ್ಯಾಯ ಆಯೋಗ ಹಾಗೂ ಆಹಾರ ಇಲಾಖೆ ಜಂಟಿಯಾಗಿ ದಾಳಿ ಮಾಡಲಾಗಿದೆ. ಅನಿಲ ತುಂಬಿದ ೧೪೦ಕ್ಕೂ ಹೆಚ್ಚು ಸಿಲಿಂಡರ್ ಗಳಿರುವ ವಾಹನವನ್ನು ಜಪ್ತಿ ಮಾಡಲಾಗಿತ್ತು, ದಾಳಿ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗದ, ವಿಜಯನಗರ ಜಿಲ್ಲೆ ಉಪಾಧ್ಯಕ್ಷ ಗುನ್ನಳ್ಳಿ ಶ್ರೀಧರ ಹಾಗೂ ಕೆ.ಕೆ.ಹಟ್ಟಿ ಜಿ.ರಾಜು ರವರ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.