ಬಳ್ಳಾರಿ,ಫೆ.24 : ೪.೭೫ ಕೋಟಿ ವೆಚ್ಚದಲ್ಲಿ ಕೌಲ್ ಬಜಾರ್ ಪಸ್ಟ್ ಗೇಟ್ ನಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಶೈಲಿಯ ಸರ್ಕಲ್ ಧ್ವಜ ಸ್ತಂಭ ಹಾಗೂ ಟವರ್ ಕ್ಲಾಕ್ ನಿರ್ಮಾಣದ ಕಾಮಗಾರಿಗೆ ಯುವ ಸಬಲೀಕರಣ ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಮೇಯರ್ ಬಿ.ಶ್ವೇತ.ಸದಸ್ಯರಾದ ಜಿ.ಶಿಲ್ಪ.ಸೇರಿದಂತೆ ಕೌಲ್ ಬಜಾರ್ ಭಾಗದ ಕಾಂಗ್ರೆಸ್ ಮುಖಂಡರು ಹಾಜರಿದ್ದರು.